Advertisement

ರಜೆಯಲ್ಲೂ ಬಿಸಿಯೂಟ 

06:05 AM Oct 28, 2017 | Team Udayavani |

ನವದೆಹಲಿ: ಬರಪೀಡಿತ ಪ್ರದೇಶಗಳಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ರಜಾ ದಿನಗಳಲ್ಲೂ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಕಲ್ಪಿಸಿದ್ದ ಕರ್ನಾಟಕ ಸರ್ಕಾರದ ಮಾದರಿಯಲ್ಲೇ ದೇಶಾದ್ಯಂತ ಎಲ್ಲ ಶಾಲೆಗಳಲ್ಲೂ ರಜಾದಿನಗಳಲ್ಲೂ ಬಿಸಿಯೂಟ ಒದಗಿಸುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಚಿಂತನೆ ನಡೆಸಿದೆ. 

Advertisement

ಇತ್ತೀಚೆಗೆ ಜಾರ್ಖಂಡದಲ್ಲಿ ಶಾಲೆ ರಜೆ ಇದ್ದುದರಿಂದ ಬಿಸಿಯೂಟ ಲಭ್ಯವಾಗದೇ 11 ವರ್ಷದ ಮಗು ಸಾವನ್ನಪ್ಪಿತ್ತು. ಇದು ತೀವ್ರ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಚಿಂತನೆ ನಡೆಸಿದೆ. ರಜಾದಿನಗಳಲ್ಲೂ ಯಾಕೆ ನಾವು ಕಡುಬಡ ಕುಟುಂಬದ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸಬಾ ರದು ಎಂದು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ 2013 ಕ್ಕೆ ಸಂಬಂಧಿಸಿದಂತೆ ನವದೆಹಲಿ ಯಲ್ಲಿ ನಡೆದ ಸಮ್ಮೇಳನದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವಿಶೇಷ ಕಾರ್ಯದರ್ಶಿ ರೀನಾ ರೇ ಪ್ರಶ್ನಿಸಿದ್ದಾರೆ. ಆದರೆ, ಹೆಚ್ಚುವರಿ ಬಿಸಿಯೂಟ ನೀಡುವುದರಿಂದ  ಭಾರಿ ಹಣಕಾಸು ಹೊರೆಯೂ ಉಂಟಾಗುತ್ತದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಸದ್ಯ 1 ರಿಂದ 8ನೇ ತರಗತಿಯವರೆಗೆ ದೇಶಾದ್ಯಂತ ಎಲ್ಲ ಮಕ್ಕಳಿಗೂ ಮಧ್ಯಾಹ್ನದ ಊಟ ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ಇತ್ತೀಚೆಗೆ ಜಾರ್ಖಂಡದಲ್ಲಿ 11 ವರ್ಷದ ಬಾಲಕಿ ಸಾವನ್ನಪ್ಪಿದಾಗ, ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಲ್ಲದ್ದರಿಂದ ಪಡಿತರ ಸಿಗದೇ ಮಗು ಸಾವನ್ನಪ್ಪಿದೆ ಎಂದು ತಾಯಿ ಆರೋಪಿಸಿದ್ದಳು. ಆದರೆ ವಾಸ್ತವವಾಗಿ ಶಾಲೆ ಆ ದಿನಗಳಲ್ಲಿ ರಜೆ ಇದ್ದುದರಿಂದ, ಮಗುವಿಗೆ ಮಧ್ಯಾಹ್ನದ ಊಟ ಲಭ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next