Advertisement

ಮೀ ಟೂ ಸಂತ್ರಸ್ತರಿಗೆ ಧೈರ್ಯ ತುಂಬಿ

11:55 AM Nov 12, 2018 | |

ಬೆಂಗಳೂರು: ಸಂತ್ರಸ್ತ ಯುವತಿಯರು ಧೈರ್ಯವಾಗಿ ಮೀ ಟೂ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಷಯವಾಗಿದ್ದು, ಅಂತವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕೇ ಹೊರತು, ಅವಮಾನಿಸುವ ಪ್ರಸಂಗಗಳು ನಡೆಯಬಾರದು ಎಂದು ಲೇಖಕಿ ಡಾ.ವಿಜಯಾ ಹೇಳಿದ್ದಾರೆ.

Advertisement

ರಾಜಾಜಿನಗರದ ಆಕೃತಿ ಪುಸ್ತಕಾಲಯ ಆಯೋಜಿಸಿದ್ದ ಕನ್ನಡ ಮತ್ತು ಭಾರತೀಯ ಸಿನಿಮಾಗಳಲ್ಲಿ ಮಹಿಳೆಯ ಚಿತ್ರಣ, ಸ್ತ್ರೀ ಶೋಷಣೆ, ಸಮಾನತೆ ಹಾಗೂ ಮೀ ಟೂ ಅಭಿಯಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀ ಟೂ ಅಭಿಯಾನವು ಮಹಿಳೆಯ ಅನುಭವಿಸಿರುವ ಶೋಷಣೆ, ದೌರ್ಜನ್ಯಗಳನ್ನು ಹೇಳಿಕೊಳ್ಳಲು ಇದೊಂದು ಸೂಕ್ತ ವೇದಿಕೆಯಾಗಿದೆ.

ಈ ವೇದಿಕೆಯನ್ನು ನಟಿಯರು ಬಳಸಿಕೊಳ್ಳುತ್ತಿರುವುದು ಸಂತಸ ವಿಚಾರ. ಆದರೆ, ಅವರಿಗೆ ಧೈರ್ಯ ತುಂಬಿ ಬೆಂಬಲ ನೀಡುವ ಕೆಲಸವಾಗುತ್ತಿಲ್ಲ. ಬದಲಾಗಿ ಅನುಮಾನದಿಂದ ನೋಡುವ, ಹೀಯಾಳಿಸುವ, ಬೆದರಿಸುವ ಕೆಲಸಗಳಾಗುತ್ತಿವೆ ಎಂದು ಬೇಸರವ್ಯಕ್ತಪಡಿಸಿದರು. 

ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯು ಮೇಕಪ್‌ ಮ್ಯಾನ್‌ನಿಂದ ನಿರ್ದೇಶಕ, ನಿರ್ಮಾಪಕರವರೆಗೂ ಭೋಗದ ವಸ್ತುವಾಗುತ್ತಿದ್ದಾಳೆ. ಕೆಲವು ಹೆಣ್ಣು ಮಕ್ಕಳಿಗೆ ಸಿನಿಮಾ ರಂಗ ಇಷ್ಟ ಇದ್ದರೂ ಬರೋಕೆ ಹೆದರುತ್ತಾರೆ. ಇದು ಈಗಿನ ಸಮಸ್ಯೆ ಅಲ್ಲ, ಹಿಂದಿನಿಂದ ಬಂದಂತಹದ್ದು, ಯಾರಿಂದ ದೌರ್ಜನ್ಯ ದಬ್ಟಾಳಿಕೆ ನಡೆಯುತ್ತಿದೆಯೋ ಅವರ ಹತ್ತಿರ ನ್ಯಾಯಕ್ಕಾಗಿ ಹೋಗುತ್ತೇವೆ. ಹೀಗಾಗಿ ನ್ಯಾಯ ಸಿಗುತ್ತಿಲ್ಲ. ಹೀಗಾಗಿಯೇ ಮೀಟೂ ಅಭಿಯಾನ ಈಗಿನ ಸಂದರ್ಭದಲ್ಲಿ ಅನಿವಾರ್ಯವಾಗಿದೆ ಎಂದರು.

ಕಾನೂನು ರೂಪುಗೊಳ್ಳಲಿ: ಕನ್ನಡ ಚಿತ್ರರಂಗದಲ್ಲಿ ತಪ್ಪು ಮಾಡಿದವರನ್ನು ಸಿನಿಮಾ ರಂಗದಿಂದಲೇ ಬಹಿಷ್ಕಾರ ಹಾಕುವಂತಾಗಬೇಕು. ಅವರು ಎಂತಹ ಪ್ರಭಾವಿ ನಟಿ, ನಟ ಯಾರೇ ಆಗಿರಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತಹ ಕಾನೂನು ವಾಣಿಜ್ಯ ಮಂಡಳಿಯಲ್ಲಿ ರೂಪುಗೊಳ್ಳಬೇಕು. ಜತೆಗೆ ದೌರ್ಜನ್ಯ ನಡೆದ ತಕ್ಷಣ ಪ್ರತಿಕ್ರಿಯಿಸುವ ಮನೋಭಾವವನ್ನು ಮಹಿಳೆಯರು ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಪತ್ರಕರ್ತೆ ಅರ್ಚನಾ ನಾಥನ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next