Advertisement
1928 ನೇ ಜೂ. 14ರಂದು ಶೀನ ಶೆಟ್ಟಿ ಮತ್ತು ಶೇಶಿ ಶೆಟ್ಟಿ ದಂಪತಿಯ ಸುಪುತ್ರನಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮುಳೂರು ಗ್ರಾಮದಲ್ಲಿ ಜನ್ಮತಾಳಿದ ಎಂ. ಡಿ. ಶೆಟ್ಟಿ 1943ರಲ್ಲಿ ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿ ಮಹಾನಗರ ಸೇರಿ ಅಮೆರಿಕನ್ ಸಂಸ್ಥೆಯಾದ ಎಫ್. ಎಸ್. ಕೆರ್ರ ಆ್ಯಂಡ್ ಕಂಪೆನಿಯಲ್ಲಿ ದುಡಿಮೆ ಆರಂಭಿಸಿದರು. ಅಲ್ಲಿಂದ ಆರಂಭವಾದ ಇವರ ಬದುಕುಬಂಡಿ ಮುಂಬಯಿ ಬದುಕಿನಲ್ಲೆ ಅಮೃತೋತ್ಸವದ ಹೊಸ್ತಿಲನ್ನು ಕಳೆದ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆಯೆ.
ತಾನು ಹುಟ್ಟಿ ಬೆಳೆದ ನಾಡಿಗಿಂತ ಕರ್ಮಭೂಮಿ ಮುಂಬಯಿಯಲ್ಲೇ ಸುಮಾರು ಏಳೂವರೆ ದಶಕಗಳನ್ನು ಕಂಡ ಇವರು ಮುಂಬಯಿಯನ್ನೇ ಮನೆಯಾಗಿಸಿ ಬದುಕಿನ ಬಹುಕಾಲ ಇಲ್ಲಿನ ನಾಯಕರ ನಾಯಕನಾಗಿ ಸಟೆದು ನಿಂತ ಧೀಮಂತ ನಾಯಕರಿವರು. ಸಮಯಪ್ರಜ್ಞೆಗೆ ಸದಾ ಬದ್ಧರಾಗಿ ಬೆಳೆದವರು. ಕಾಣಲು ಗಂಭೀರಚಿತ್ತರು ಆದರೆ ಅಷ್ಟೇ ಮೃದು ಸ್ವಭಾವಿ, ವಿವೇಕಿಯಾಗಿರುವ ಎಂಡಿ ಸರ್ವಧರ್ಮಿàಯರಲ್ಲೂ ಅವಿನಾಭಾವ ಸಂಬಂಧವನ್ನಿರಿಸಿ ಸಾಮರಸ್ಯದ ಬಾಳಿಗೆಪಾತ್ರರಾದವರು. ಬಂಟರ ಸಂಘಕ್ಕೆ ನೂತನ ಆಯಾಮ
ಇವರ ಪ್ರತಿಯೊಂದು ಆಲೋಚನೆ ಅನುಭವ ಸೌಂದರ್ಯ ಪ್ರಜ್ಞೆ ತುಂಬಿದ್ದು, ಹೊಟೇಲ್ ಉದ್ಯಮದ ಸಮಗ್ರತೆಯ ಸರದಾರರೆನಿಸಿದರು. ಹೊಟೇಲ್ ಉದ್ಯಮದಿಂದ ತನ್ನ ಕಾರ್ಯ ಬಾಹುಳ್ಯವನ್ನು ಸಮಾಜ ಸೇವೆಗೂ ವಿಸ್ತರಿಸಿ ಸುಮಾರು ಏಳು ದಶಕಗಳಿಂದ ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ಕಾರ್ಯ ಪ್ರವೃತ್ತವಾಗಿದ್ದು ಬಂಟರ ಸಂಘಕ್ಕೆ ಒಂದು ಪ್ರಮುಖ ಸ್ಥಾನ ಕಲ್ಪಿಸಿಕೊಟ್ಟವರು. ಬಂಟರ ಸಂಘ ಮುಂಬಯಿ ಇದರ ಸುವರ್ಣ ಸಂಭ್ರಮದ ಕಾಲಕ್ಕೆ ಅಧ್ಯಕ್ಷರಾಗಿದ್ದು ಬಂಟರ ಭವನದಲ್ಲಿ ಮುಕ್ತಾನಂದ ಸಭಾಗೃಹ ಸೇವಾರ್ಪಣೆ, ನಿತ್ಯಾನಂದ ಸ್ವಾಮೀಜಿ ಅವರ ಪ್ರತಿಮೆ ಸ್ಥಾಪನೆ, ಸಾಹಿತ್ಯ- ಸಂಸ್ಕೃತಿಗಳ ಬಗೆಗೆ ಅಪಾರ ಒಲವಿದ್ದ ಕಾರಣ ಬಂಟರವಾಣಿ ಸರ್ವೋನ್ನತಿ, ಮತ್ತಿತರ ಯೋಜನೆಗಳು ಇಂದಿಗೂ ಮುಂದಿಗೂ ಚಿರಸ್ಥಾಯಿಯಂತಹದ್ದು.
Related Articles
ಮಾತು ಸದಾಚಾರಗಳಿಂದ ಸಾತ್ವಿಕ ಜೀವನವನ್ನು ನಡೆಸಿದ ಇವರು ಸೌಹಾರ್ದತೆಯ ಸಾಮ್ರಾಜ್ಯವನ್ನೇ ನಿರ್ಮಾಣಗೈದವರು. ಶಿವಸೇನಾ ಪಕ್ಷದ ಗಡಿ ವಿವಾದ, ಜನಾಂಗೀಯ ಮತ್ತು ಭಾಷಾ ತಾರತಮ್ಯ ವಿಚಾರಿತ ಬಿರುಗಾಳಿ ಮಹಾರಾಷ್ಟ್ರದಾದ್ಯಂತ ಕರ್ನಾಟಕದ ಜನತೆ ಮೇಲೆ ಹಿಂಸೆಯಾಗಿ ಪರಿವರ್ತನೆಗೊಂಡಾಗ ತನ್ನ ಪರಮಮಿತ್ರ ಶಿವಸೇನಾ ಮುಖ್ಯಸ್ಥ ಬಾಳಸಾಹೇಬ್ ಠಾಕ್ರೆ ಅವರೊಂದಿಗೆ ಸಂಧಾನಕಾರನಾಗಿ ವಹಿಸಿದ ಪಾತ್ರವೂ ಅನುಪಮ. ಓರ್ವ ಪರಿಣತ ಸಂಧಾನಕಾರರಾಗಿದ್ದು,
ಪ್ರಭಾವ ಪ್ರವಾಹದ ಸಂಘಟನಾ ಮುತ್ಸದ್ಧಿಯಾಗಿದ್ದ ಇವರು ತಮ್ಮ ಪಾಲಿಗೆ ಒದಗಿದ ಸ್ವರ್ಣಾವಕಾಶದ ರಾಜಕೀಯ ಸ್ಥಾನಮಾನಗಳ ಬೆನ್ನತ್ತದೆ ಸ್ವತಃ ರಾಜನಾಗಿಯೇ ಮೆರೆದಿದ್ದಾರೆ.
Advertisement
ಕತೃìತ್ವ ಶಕ್ತಿಯಾಗಿ ಮುಂಬಯಿಯಲ್ಲಿದ್ದೇ ಹುಟ್ಟಿದೂರಿನಲ್ಲೂ ನಿಕಟ ಸಂಪರ್ಕವಿದ್ದುª ಕರ್ನಾಟಕ, ಕನ್ನಡೇತರರಲ್ಲಿ ಓರ್ವ ಎದ್ದು ಕಾಣುವ ಶಕ್ತಿಶಾಲಿ ಬಲಿಷ್ಠವ್ಯಕ್ತಿಯಾಗಿ ಬೆಳೆದ ವ್ಯಕ್ತಿತ್ವ ಇವರದ್ದು. ಅನೇಕರು ಹೇಳುವಂತೆ ಎಂಡಿ ತನ್ನ ಸ್ವಪ್ರಯತ್ನದಿಂದ ತನ್ನಲ್ಲಿಯ ಕತೃìತ್ವ ಶಕ್ತಿಯನ್ನು ಬೆಳೆಸಿ ಸಂಘಟನ ಸಾಮರ್ಥ್ಯವನ್ನು ಉಪಯೋಗಿಸಿ ಸಮಾಜದಲ್ಲಿ ತನ್ನದೇ ಆದ ಪ್ರತಿಷ್ಠಿತ ಸ್ಥಾನವನ್ನು ರೂಪಿಸಿಕೊಳ್ಳಲು
ಸಶಕ್ತರಾಗಿದ್ದಾರೆ. ತನ್ನ ಬಾಳ ಸಂಗಾತಿ ರತಿ ಶೆಟ್ಟಿ ಮತ್ತು ಪುತ್ರ ರಮೇಶ್
ಶೆಟ್ಟಿ ಅವರಿಬ್ಬರ ಕಳೆದುಕೊಂಡ ದುಃಖವನ್ನು ತನ್ನೊಳಗೆನೇ ಜೀರ್ಣಿಸಿಕೊಂಡು ಅಂದು ಮರೆತು ನಾಳೆಯನ್ನು ದೂರದೃಷ್ಟಿಯಲ್ಲಿರಿಸಿ ಸಮಾಜದ ಹಿತಕ್ಕಾಗಿ ಬದುಕನ್ನು ರೂಪಿಸಿಕೊಂಡು ತನ್ನ ಬದುಕಿನ ಆಯುಷ್ಯವನ್ನು ಏರಿಸುತ್ತಾ ತೆರೆಮರೆಯಲ್ಲಿದ್ದೇ ಸಮಾಜಮುಖೀ ಸೇವೆಯಲ್ಲಿ ತೊಡಗಿಸಿ ಕೊಂಡವರಾಗಿದ್ದಾರೆ
.
ಬಂಟರ ಸಂಘದ ಗೌರವಾರ್ಪಣೆ
ಕಳೆದ ಎಪ್ರಿಲ್‌ನಲ್ಲಿ ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಅದ್ದೂರಿ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಸ್ಟಿಸ್ ವಿಶ್ವನಾಥ ಶೆಟ್ಟಿ ಅವರು ಎಂ. ಡಿ. ಶೆಟ್ಟಿ ಅವರ ದೀರ್ಘಾವಧಿಯ ಸೇವೆಯನ್ನು ಪ್ರಶಂಸಿಸಿ ಗೌರವಿಸಿದ್ದರು. ಇವರ ಸಾಧನೆ ಎಂದಿಗೂ ಅಮರವಾಗಿ ಉಳಿಯುವಂತಹದ್ದು. ಹೇರೂರು ಫಾರ್ಮ್
ಹೌಸ್ ಪ್ರಸಿದ್ಧಿಯ ಎಂ. ಡಿ. ಶೆಟ್ಟಿ ಮುಂಬಯಿಯಲ್ಲಿನ ತುಳು-ಕನ್ನಡಿಗರ ಪಾಲಿನ ಮೌಲ್ಯಾಧರಿತ ಮುತ್ತು ಇದ್ದಂತೆ ಎಂಬುದು ಅವರ ಆಪ್ತರ ಹೇಳಿಕೆ. ಇಂತಹ ವ್ಯಕ್ತಿತ್ವದ ದಿಗ್ಗಜರೋರ್ವರು ಇಂದು ತಮ್ಮ ಜೀವನದ 89 ವರ್ಷಗಳನ್ನು ಅರ್ಥಪೂರ್ಣವಾಗಿ ಪೂರೈಸುತ್ತಿರುವುದು ಅಭಿನಂದನೀಯ. ರೋನ್ಸ್ ಬಂಟ್ವಾಳ್