ಚೆನ್ನೈ : ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಮ್ (ಎಮ್ ಡಿ ಎಮ್ ಕೆ) ವಿಧಾನ ಸಭಾ ಚುನಾವಣೆ 2021 ಕ್ಕೆ ಪಕ್ಷದ ಪ್ರಣಾಳಿಕೆಯನ್ನು ಇಂದು(ಬುಧವಾರ, ಮಾ.17) ಬಿಡುಗಡೆ ಮಾಡಿದೆ.
ತನ್ನ ಕಚೇರಿಯಲ್ಲಿ ಪಕ್ಷದ ನಾಯಕರ ಸಮ್ಮುಖದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ವೈಕೊ ನೇತೃತ್ವದ ಪಕ್ಷ ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಮ್, ಸೂರ್ಯೋದಯದ ಚಿಹ್ನೆಯೊಂದಗೆ ಆರು ಸ್ಥಾನಗಳಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕಿದೆ.
ಓದಿ : ಒಡಿಶಾ ಸರ್ಕಾರಿ ಆಸ್ಪತ್ರೆ: ಬೀದಿ ನಾಯಿ ಬಾಯಿಯಲ್ಲಿ ನವಜಾತ ಶಿಶುವಿನ ಶವ!
ಡಿ ಎಮ್ ಕೆ ನೇತೃತ್ವದೊಂದಿಗೆ ಎಮ್ ಡಿ ಎಮ್ ಕೆ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಮೈತ್ರಿಕೂಟದ ಭಾಗವಾಗಿ ಸತ್ತೂರು, ಪಲ್ಲಡಂ, ಮಧುರೈ ದಕ್ಷಿಣ, ವಾಸುದೇವನಲ್ಲೂರ್, ಮದುರಮಟಕಂ, ಅರಿಯಲೂರ್ ವಿಧಾನ ಸಭಾ ಕ್ಷೇತ್ರಗಳನ್ನು ನೀಡಲಾಗಿದೆ.
Related Articles
ಇನ್ನು, ಡಿ ಎಮ್ ಕೆ ಮೈತ್ರಿಕೂಟದೊಂದಿಗೆ ಕಾಂಗ್ರೆಸ್ 25 ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಮಂಗಳವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಮದ್ಯದಂಗಡಿಗಳನ್ನು ಮುಚ್ಚುವ ಭರವಸೆಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
ಎಮ್. ಕೆ. ಸಾಲಿನ್ ನೇತೃತ್ವದ ಡಿ ಎಮ್ ಕೆ ಇಂಧನದ ಬೆಲೆಯನ್ನು ಇಳಿಸುವ ಭರವಸೆಯನ್ನು ನೀಡಿದ್ದು, ಸ್ಥಳೀಯರಿಗೆ ಶೇಕಡಾ 75 ರಷ್ಟು ಉದ್ಯೋಗ ಮೀಸಲಾತಿಯನ್ನು ನೀಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಇನ್ನು, 234 ವಿಧಾನ ಸಭಾ ಕ್ಷೇತ್ರಗಳಿರುವ ತಮಿಳುನಾಡು ವಿಧಾನ ಸಭಾ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಮೇ 2 ರಂದು ತಮಿಳುನಾಡಿನ ಭವಿಷ್ಯ ತಿಳಿಯಲಿದೆ.
ಓದಿ : ನೀತಾ ಅಂಬಾನಿಯನ್ನು ಸಂದರ್ಶಕ ಉಪನ್ಯಾಸಕಿಯಾಗಿ ನೇಮಿಸುವ ಪ್ರಸ್ತಾಪ:BHU ವಿದ್ಯಾರ್ಥಿಗಳ ಆಕ್ಷೇಪ