Advertisement

ಎಂಸಿಡಿ ಫಲಿತಾಂಶ, BJP ಜಯಭೇರಿ, ಆಪ್, ಕಾಂಗ್ರೆಸ್ ಗೆ ಮುಖಭಂಗ

08:12 AM Apr 26, 2017 | Sharanya Alva |

ನವದೆಹಲಿ:ದೆಹಲಿ ಮುಖ್ಯಮಂತ್ರಿ, ಆಪ್ ವರಿಷ್ಠ ಅರವಿಂದ ಕೇಜ್ರಿವಾಲ್ ಹಾಗೂ ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ) ಚುನಾವಣಾ ಫಲಿತಾಂಶ ಬಹುತೇಕ ಮುಕ್ತಾಗೊಂಡಿದ್ದು, ದಿಲ್ಲಿ ಮಹಾನಗರ ಪಾಲಿಕೆಯ ಅಧಿಕಾರದ ಚುಕ್ಕಾಣಿಯನ್ನು ಮತ್ತೆ ಬಿಜೆಪಿ ಹಿಡಿದಿದೆ. ಇದರೊಂದಿಗೆ ಆಡಳಿತಾರೂಢ ಆಪ್ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 7 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿದ್ದರೆ, 2015ರ ವಿಧಾನಸಭಾ ಚುನಾವಣೆಯಲ್ಲಿ ಆಪ್ ಜಯಭೇರಿ ಬಾರಿಸಿತ್ತು. ಆದರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದೆ. ಈ ಸಮೀಕ್ಷೆ ಫಲಿತಾಂಶವೇ ನಿಜವಾದಲ್ಲಿ ಮುಂದೆ ಇವಿಎಂ ವಿರುದ್ಧ ಭಾರೀ ಹೋರಾಟ ನಡೆಸುವುದಾಗಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಈಗಾಗಲೇ ಘೋಷಿಸಿದ್ದಾರೆ.

ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆಗಳಿದ್ದು, ಒಟ್ಟು 272 ವಾರ್ಡ್ ಗಳಿವೆ. 2012ರಲ್ಲಿ ಉತ್ತರ ದೆಹಲಿ ಮಹಾನಗರ ಪಾಲಿಕೆ, ದಕ್ಷಿಣ ಮಹಾನಗರ ಪಾಲಿಕೆ, ಪೂರ್ವ ದೆಹಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿದೆ. 2012ರ ಫಲಿತಾಂಶದಲ್ಲಿ ಬಿಜೆಪಿ 138, ಕಾಂಗ್ರೆಸ್ 77, ಬಿಎಸ್‍ಪಿ 5ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಎಂಸಿಡಿ ಚುನಾವಣಾ ಫಲಿತಾಂಶದ ಹೈಲೈಟ್ಸ್:

*ಬಿಜೆಪಿ 184, ಕಾಂಗ್ರೆಸ್ 30, ಆಪ್ 46 ಹಾಗೂ ಇತರರು 10 ಸ್ಥಾನಗಳಲ್ಲಿ ಮುನ್ನಡೆ

Advertisement

ಮೂರೂ ಪಾಲಿಕೆಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು. 2 ನೇ ಸ್ಥಾನಕ್ಕಾಗಿ ಆಪ್‌ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ. 

*ಉತ್ತರ ದೆಹಲಿ ಬಿಜೆಪಿ 60, ಆಪ್ 10, ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

*ದಕ್ಷಿಣ ಮತ್ತು ಉತ್ತರ ದೆಹಲಿಯಲ್ಲಿ ಬಿಜೆಪಿ ಮುನ್ನಡೆ

*ಮಹಾನಗರ ಪಾಲಿಕೆಯ ಮತ ಎಣಿಕೆ ಶುರು

Advertisement

Udayavani is now on Telegram. Click here to join our channel and stay updated with the latest news.

Next