ಬೆಂಗಳೂರು: ಎರಡನೇ ವರ್ಷದ ಎಂಬಿಎ ವಿದ್ಯಾರ್ಥಿಯೊಬ್ಬ ಹುಟ್ಟುಹಬ್ಬದ ದಿನವೇ ಹಾಸ್ಟೆಲ್ನ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ) ಆವರಣದಲ್ಲಿ ನಡೆದಿದೆ.
ಗುಜರಾತ್ ಮೂಲದ ನಿಲಯ್ ಕೈಲಾಶ್ಬಾಯ್ ಪಟೇಲ್(28) ಮೃತ ವಿದ್ಯಾರ್ಥಿ. ಆತ್ಮಹತ್ಯೆ ಮಾಡಿ ಕೊಂಡಿದ್ದಾನೆಯೇ? ಅಥವಾ ಆಯ ತಪ್ಪಿ ಬಿದ್ದು ಮೃತ ಪಟ್ಟಿದ್ದಾನೆಯೇ ಎಂಬುದು ದೃಢವಾಗಿಲ್ಲ. ತನಿಖೆ ನಡೆ ಯುತ್ತಿದೆ ಎಂದು ಪೊಲೀಸರು ಹೇಳಿದರು.
ಎರಡು ವರ್ಷಗಳಿಂದ ಐಐಎಂನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿರುವ ನಿಲಯ್ ಕೈಲಾಶ್ಬಾಯ್ ಪಟೇಲ್, ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ನಲ್ಲಿ ವಾಸವಾ ಗಿದ್ದ. ಶನಿವಾರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಹಾಸ್ಟೆಲ್ನ ಸ್ನೇಹಿತರ ಜತೆ ಹೊರಗಡೆ ಹೋಗಿದ್ದಾನೆ. ನಂತರ ವಾಪಸ್ ಬಂದು ಬೇರೆ ಬ್ಲಾಕ್ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ನಿಲಯ್ ನಿಲಯ್ ಕೈಲಾಶ್ಬಾಯ್ ನ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹೋಗುವಾಗ 3ನೇ ಮಹಡಿ ಯಿಂದ ಬಿದ್ದು ಮೃತಪಟ್ಟಿದ್ದಾನೆ. ಆಯಾ ತಪ್ಪಿ ಬಿದ್ದಿದ್ದಾ ನೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಗೊತ್ತಾಗಿಲ್ಲ. ಭಾನುವಾರ ಮುಂಜಾನೆ ಹಾಸ್ಟೆಲ್ನ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.
ಪ್ರಾಥಮಿಕ ಮಾಹಿತಿ ಪ್ರಕಾರ, ಹಾಸ್ಟೆಲ್ನ ಬೇರೆ ಬ್ಲಾಕ್ನಲ್ಲಿರುವ ಸ್ನೇಹಿತನ ಕೋಣೆ ಯಲ್ಲಿ ಹುಟ್ಟುಹಬ್ಬ ಆಚರಿಸಲು ನಿಲಯ್ ತೆರಳಿದ್ದ. ರಾತ್ರಿ 11.30ರ ಸುಮಾರಿಗೆ ಸ್ನೇಹಿತನ ಕೊಠಡಿಯಿಂದ ಹೊರಟು ಎಫ್ ಬ್ಲಾಕ್ನಲ್ಲಿರುವ ತನ್ನ ಕೋಣೆಗೆ ವಾಪಸ್ ಹೋಗುವಾಗ ಘಟನೆ ಸಂಭವಿಸಿದೆ ಎಂಬುದು ಗೊತ್ತಾ ಗಿದೆ. ಹಾಸ್ಟೆಲ್ ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.