Advertisement
ಈ ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಕೋರ್ಸ್‌ಗಳು ಮ್ಯಾನೇಜ್‌ಮೆಂಟ್ ಮತ್ತು ಕಾರ್ಪೊàರೇಟ್ ಜಗತ್ತಿನ ಕೀಲೆ ಕೈಗಳೇ ಆಗಿಬಿಟ್ಟಿವೆ. ಹೀಗಾಗಿ, ಇಂದು ಅಧಿಕ ಬೇಡಿಕೆಯನ್ನು ಹೊಂದಿವೆ. ವಾಣಿಜ್ಯ ವ್ಯವಹಾರಗಳಿಗೆ ಲಗತ್ತಾದ, ಮುಖ್ಯವಾಗಿ ಕಾರ್ಪೊರೇಟ್ ಜಗತ್ತಿಗೆ ಬೇಕಾದ ಕೌಶಲಗಳನ್ನು ಕಲಿಸುವುದು ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಕೋರ್ಸ್‌ಗಳ ಪ್ರಮುಖ ಉದ್ದೇಶ. ಇವುಗಳಲ್ಲಿ ಬಿ.ಬಿ.ಎ ಮತ್ತು ಎಂ.ಬಿ.ಎ ಬಹು ಮುಖ್ಯವಾದ ಕೋರ್ಸ್‌ಗಳು. ಆದರೆ, ಈ ವಿಷಯಗಳ ಕಲಿಕೆಯೊಂದಿಗೆ ನಾಯಕತ್ವದ ಗುಣಗಳನ್ನು, ನಿರ್ಧಾರ ತಳೆಯುವ ಕೌಶಲವನ್ನು ಎಲ್ಲದರ ಜೊತೆಗೆ ಉತ್ತಮ ಸಂವಹನ ಸಾಮರ್ಥ್ಯವನ್ನು ಕಲಿಯುವುದು ಅವಶ್ಯವಾಗಿದೆ. ಹೀಗಾಗಿ, ಈ ಕೋರ್ಸ್‌ಗಳ ಜೊತೆ ಜೊತೆಗೇ ಉಪ ಕೋರ್ಸ್‌ಗಳೂ ಇವೆ. ಇಲ್ಲೂ ಕೂಡ ಅಂಕವೇ ಮುಖ್ಯ. ಮಾರ್ಕ್Õಕಡಿಮೆ ಇದ್ದರೆ ಫೀ ಹೆಚ್ಚು, ಅಂಕ ಹೆಚ್ಚಿದ್ದರೆ ಫೀ ಕಡಿಮೆ. ಅಂಕವೇ ಎಲ್ಲದರ ಅಂಕೆ.
ಇದರ ಪೂರ್ಣ ಹೆಸರು ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್. ಇದೊಂದು ಪದವಿ ಕೋರ್ಸ್ ಆಗಿದ್ದು, ಇದರಲ್ಲಿ ಪ್ರವೇಶ ಪಡೆಯಲು ದ್ವಿತೀಯ ಪಿ.ಯು.ಸಿ (10 + 2) ಯಶಸ್ವಿಯಾಗಿ ಮುಗಿಸಿ ಕನಿಷ್ಠ 50% ಅಂಕ ಗಳಿಸಿರಬೇಕು (ಪರಿಶಿಷ್ಟ ಜಾತಿ / ವರ್ಗ ಹಿಂದುಳಿದ ವರ್ಗಗಳು ಮತ್ತು ವಿಶೇಷ ಕೌಶಲ್ಯದ ಮಕ್ಕಳಿಗೆ ಶೇ.45ರಷ್ಟು ಅಂಕ ಕಡ್ಡಾಯ) ಆದರೆ, ಕೆಲವು ಕಾಲೇಜುಗಳಲ್ಲಿ ಕಡಿಮೆ ಅಂಕ ಗಳಿಸಿದವರಿಗೂ ಸೀಟು ನೀಡುತ್ತಾರೆ. ಒಳ್ಳೆಯ ಕಾಲೇಜುಗಳಲ್ಲಿ ಸೀಟು ಬೇಕೆಂದರೆ, ಖಂಡಿತ ಉತ್ತಮ ಅಂಕ ಗಳಿಸಿರಬೇಕು. ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಬೇಕಾದವರು ಪ್ರವೇಶ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾದವು: MPJ ಆಪ್ಟಿಟ್ಯೂಡ್ ಟೆಸ್ಟ್ NMAT
(UG), DUET, SET ಮತ್ತು UGAT – AIMA.. ಇದು ಮೂರು ವರ್ಷದ ಆರು ಸೆಮಿಸ್ಟರ್‌ಗಳ ಕೋರ್ಸ್. ಆಪ್ಟಿಟ್ಯೂಡ್ ಟೆಸ್ಟ್‌ಗಳನ್ನು ಎದುರಿಸುವುದೂ ಒಂದು ಕಲೆ. ಅದಕ್ಕೂ ಟ್ಯೂಷನ್‌ಗಳು ಉಂಟು. ಬಿ.ಬಿ.ಎ ಹಿಂದೆ ಎಷ್ಟೆಲ್ಲಾ ಸರ್ಕಸ್ಸುಗಳು ಇವೆ ನೋಡಿ.
ಬಿ.ಕಾಂ ಅಥವಾ ಬಿ.ಬಿ.ಎ ಅಥವಾ ತತ್ಸಮಾನ ಮಾನ್ಯತೆ ಪಡೆದ ಪದವಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಎಂ.ಬಿ.ಎ. ಮಾಡಬಹುದು. ಇಲ್ಲೂ ಕೂಡ ಬೇರೆ ಬೇರೆ ಕಾಲೇಜುಗಳು ಪ್ರವೇಶ ಪರೀಕ್ಷೆಯನ್ನು ನಡೆಸುತ್ತದೆ. ಬಿಬಿಎಗಿಂತ ಸ್ವಲ್ಪ ಭಿನ್ನವಾದ ಪರೀಕ್ಷೆಗಳು ಇವು. ಏಕೆಂದರೆ, ಇದರಲ್ಲಿ ಕಟ್ ಆಫ್ ಅಂಕವನ್ನು ನಿಗದಿಪಡಿಸುತ್ತವೆ. ಕೆಲವು ಮುಖ್ಯ ಪ್ರವೇಶ ಪರೀಕ್ಷೆಗಳೆಂದರೆ: CAT,
CMAT, IIFT, MAT, NMAT, XAT ಮತ್ತು IBSAT ಇದು ಎರಡು ವರ್ಷದ ನಾಲ್ಕು ಸೆಮಿಸ್ಟರ್‌ಗಳ ಕೋರ್ಸ್.
Related Articles
ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್‌ಗೆ ಸಂಬಂಧಿಸಿದಂತೆ ಡಾಕ್ಟೊರಲ್ ಪಡೆಯಲು ಇಚ್ಛಿಸುವವರು ಸ್ನಾತಕೋತ್ತರ ಪದವಿಯಲ್ಲಿ ಶೇ.50ಕ್ಕಿಂತ ಅಧಿಕ ಸರಾಸರಿ ಅಂಕ ಹೊಂದಿರಬೇಕು ಮತ್ತು ಇದಕ್ಕೂ ಪ್ರವೇಶ ಪರೀಕ್ಷೆ ಕಡ್ಡಾಯ. ಬಹುತೇಕ ಎಲ್ಲ ವಿ.ವಿ.ಗಳ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದಿಂದ ವರ್ಷಕ್ಕೊಮ್ಮೆ ಪಿಎಚ್.ಡಿ. ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. MMU ದೆಹಲಿ ಮತ್ತಿತರ MUU ಕೇಂದ್ರಗಳು, ನಾರ್ಸಿ ಮಾಂಜೀ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮೊದಲಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಡಾಕ್ಟೊರಲ್ ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತವೆ. ಇದು 3 ರಿಂದ 5 ವರ್ಷದ ಅವಧಿಯ ಕೋರ್ಸ್.
Advertisement
ದೇಶದ ಪ್ರತಿಷ್ಠಿತ ಬಿ-ಸ್ಕೂಲ್ಗಳುವಿಶ್ವವಿದ್ಯಾಲಯಗಳು, ಅವುಗಳಿಂದ ಮಾನ್ಯತೆ ಪಡೆದ ಕಾಲೇಜುಗಳೇ ಅಲ್ಲದೆ ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಕಲಿಸಲೆಂದೇ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಗಳಿವೆ. ವಿವಿಧ ನಗರಗಳಲ್ಲಿರುವ MMJ ಗಳ ಜೊತೆಗೇ ಕ್ಸೇವಿಯರ್, ಸಿಂಬಯಾಸಿಸ್ ಸಂಸ್ಥೆಗಳೂ ಉನ್ನತ ಪದವಿಗಳನ್ನು ಕೊಡಮಾಡುತ್ತವೆ. ಬಿ.ಬಿ.ಎ, ಎಂ.ಬಿ.ಎ, ಕೋರ್ಸ್‌ಗಳಲ್ಲಿ ಸ್ಪೆಷಲೈಸೇಷನ್ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶವಿದೆ. ವಿದ್ಯಾರ್ಥಿಯು ತನ್ನ ಆಸಕ್ತಿಯ ವಿಷಯ ಅಂದರೆ, ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಅಥವಾ ಇನ್ನಾವುದಾದರೂ ವಿಶೇಷ ವಿಷಯಗಳ ಬಗ್ಗೆ ವಿಚಾರಿಸಿ, ಅದರಲ್ಲಿ ಹೆಚ್ಚಿನ ಅಧ್ಯಯನಕ್ಕೆ ಮುಂದಾಗಬಹುದು. ಎರಡೂ ಕೋರ್ಸ್‌ಗಳಲ್ಲಿ ಇಂಟರ್ನ್ಶಿಪ್‌ಗೆ ಅವಕಾಶ ನೀಡುವಂಥ ಸಂಸ್ಥೆಗಳನ್ನು ಮಾತ್ರ ವಿದ್ಯಾರ್ಥಿಗಳು ಆಯ್ದುಕೊಳ್ಳಬೇಕು. ಏಕೆಂದರೆ, ಮುಂದಿನ ಉದ್ಯೋಗ ಕ್ಷೇತ್ರಕ್ಕೆ ಇದೇ ಮೊದಲ ಹೆಜ್ಜೆ ಎನ್ನುವುದನ್ನು ಮರೆಯಬಾರದು. ಒಳ್ಳೆಯ ಕಂಪೆನಿಗಳಲ್ಲಿ ಇಂಟರ್ನ್ಶಿಪ್ ಪಡೆಯಲು ಪ್ರಯತ್ನಿಸಬೇಕು. ಹಾಗೆಯೇ, ಪ್ರಾಜೆಕ್ಟ್ ಅನ್ನು ಸಾಮಾನ್ಯವಾಗಿ ಅಂತಿಮ ಸೆಮಿಸ್ಟರ್‌ಗಳಲ್ಲಿ ನೀಡಲಾಗುವುದು. ಇದನ್ನು ಕಾಟಾಚಾರಕ್ಕೆ ಮಾಡದೆ ಪೂರ್ಣ ಶ್ರದ್ಧೆಯಿಂದ ತೊಡಗಿಕೊಂಡು ಪ್ರಾಜೆಕ್ಟ್ ಮಾಡಿದರೆ, ಮುಂದೆ ಅದರಿಂದ ಮಹಾ ಅನುಕೂಲ ಆಗುತ್ತದೆ. ಇಂಡಸ್ಟ್ರಿಯ ಪ್ರಾಯೋಗಿಕ ಅಂಶಗಳನ್ನು ಮನದಟ್ಟು ಮಾಡಿಸುವುದೇ ಇಂಟರ್ನ್ಶಿಪ್ ಮತ್ತು ಪ್ರಾಜೆಕ್ಟ್ಗಳ ಮುಖ್ಯ ಉದ್ದೇಶ. ಇವುಗಳನ್ನು ವಿದ್ಯಾರ್ಥಿಗಳು ಗಂಭೀರವಾಗಿ ಪರಿಗಣಿಸುವುದು ಭವಿಷ್ಯದ ಹಿತದೃಷ್ಟಿಯಿಂದ ಒಳಿತು. ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಕೆರಿಯರ್
ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಪರಿಣತರಿಗೆ ಚಿಂತೆ ಇಲ್ಲ. ಇದೊಂಥರಾ ಕಾಮರ್ಸ್‌ಗೆ ಸಂಬಂಧಿಕರಿದ್ದಂತೆ. ಹೀಗಾಗಿ, ವಿಫುಲ ಅವಕಾಶಗಳು ಇವೆ. ಅದು ಹೇಗೆಂದರೆ, ಬ್ಯಾಂಕಿಂಗ್, ಫೈನಾನ್ಸ್, ಮಾರ್ಕೆಟಿಂಗ್, ಬಿ.ಪಿ.ಓ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಇವರು ಬೇಕೇಬೇಕು. ಯಾವುದೇ ಸಂಸ್ಥೆ ಇಂದು ವ್ಯವಹಾರ ನಡೆಸಬೇಕಾದರೆ ಫೈನಾನ್ಸ್, ಮಾರ್ಕೆಟಿಂಗ್, ಆಪರೇಷನ್ಸ್, ಮಾನವ ಸಂಪನ್ಮೂಲ, ಲಾಜಿಸ್ಟಿಕ್ಸ್ ಇವೆಲ್ಲವನ್ನು ತೂಗಿಸಿಕೊಂಡು ನಡೆಯಬೇಕು. ಸಂಸ್ಥೆಯನ್ನು ನಡೆಸಬಲ್ಲ ತಂತ್ರಗಾರರು ಬೇಕು. ಇದನ್ನು ಕಲಿತವರ ಮೇಲೆ ಪ್ರತಿಯೊಂದು ಕಂಪೆನಿಯು ಅವಲಂಬಿತವಾಗಿರುವುದರಿಂದ ಬ್ಯುಸಿನೆಸ್ ಅಡ್ಮಿನಿಷ್ಟ್ರೇಷನ್ ಬಲ್ಲವರಿಗೆ ಬೇಡಿಕೆ ಇದೆ. ಪದವೀಧರರಿಗೆ ಆರಂಭದಲ್ಲಿ 20, 25 ಸಾವಿರ ಪಗಾರ ದೊರೆಯುತ್ತದೆ. ಸ್ನಾತಕೋತ್ತರ ಪದವೀಧರರಿಗೆ ತಿಂಗಳಿಗೆ 25-30 ಸಾವಿರ ದೊರೆಯಬಹುದು. ಕ್ರಮೇಣ ಐದರಿಂದ ಹತ್ತು ವರ್ಷ ಅನುಭವ ಪಡೆದವರು 50 ರಿಂದ 80 ಸಾವಿರದವರೆಗೆ ಸಂಬಳ ಪಡೆಯುವ ಕ್ಷೇತ್ರ ಇದಾಗಿದೆ. ಯಾವುದೇ ವೃತ್ತಿಗೆ ಮಾರ್ಕೆಟ್ ಇರಬೇಕು. ಬಿಬಿಎಗೆ ಅದು ಇದೆ. ಹೀಗಾಗಿ, ಸ್ವಲ್ಪ ಕಷ್ಟ ಎನಿಸಿದರೂ ಈ ಪದವಿಗಳನ್ನು ಪಡೆಯುವುದರಿಂದ ವೃತ್ತಿ ಬದುಕು ದೀರ್ಘವಾಗಿರುತ್ತದೆ. ಭವಿಷ್ಯದಲ್ಲೂ ಯಾವುದೇ ಆತಂಕಗಳು ಎದುರಾಗುವುದಿಲ್ಲ. ಪ್ರೊ. ರಘು ವಿ.