Advertisement

ಕೆನಡ ಹೊರತುಪಡಿಸಿ ಎಂಬಿಎಗೆ ಬೇಡಿಕೆ ಕುಸಿತ

11:34 AM Oct 19, 2019 | mahesh |

ವಾಷಿಂಗ್ಟನ್: ಜಾಗತಿಕವಾಗಿ ಎಂಬಿಎ ಪದವಿಧರರಿಗೆ ಬೇಡಿಕೆ ಸದ್ಯದ ಮಟ್ಟಿಗೆ ಇಳಿಕೆಯಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 6.9 ಬೇಡಿಕೆ ಇಳಿಕೆಯಾಗಿದೆ. ಅಮೆರಿಕದ ಸಂಸ್ಥೆಗಳಿಗೆ ಉದ್ಯೋಗ ಅರಸಿಕೊಂಡು ಹೋಗುವವರ ಸಂಖ್ಯೆಗೂ ಕಡಿಮೆಯಾಗಿದೆ ಎಂದು ವರದಿಯೊಂದು ಹೇಳಿದೆ. ಆಯಾ ದೇಶಗಳು ತನ್ನ ದೇಶದ ಪದವಿಧರರಿಗೆ ಉದ್ಯೋಗ ನೀಡಲು ಉತ್ಸುಕವಾಗಿರುವುದರಿಂದ ಯಾರೂ ಅರ್ಜಿಸಲ್ಲಿಸಲು ಮುಂದೆ ಬರುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.

Advertisement

ಇಂದು ಜಗತ್ತಿನಾದ್ಯಂತ ಸಾವಿರಾರು ಪ್ರತಿಷ್ಠಿತ ಎಂಬಿಎ ಕಾಲೇಜುಗಳು ಇದ್ದು, ಅವುಗಳು ಗುಣಮಟ್ಟದ ಶಿಕ್ಷಣದ ಜತೆ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತಿವೆ. ಇದೇ ಸಂಪ್ರದಾಯ ಬಹುತೇಕ ರಾಷ್ಟ್ರಗಳಲ್ಲಿ ಇದೆಯಾದರೂ ಅಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗಗಳು ದೊರಕುತ್ತಿಲ್ಲ. ಅಮೆರಿಕದಲ್ಲಿ ಭಾರತೀಯ ಪದವಿಧರರಿಗೆ ಲಭಿಸುತ್ತಿದ್ದ ಅವಕಾಶಗಳು ಕಡಿಮೆಯಾಗಿದೆ. ಅಮೆರಿಕದಲ್ಲಿ 50 ವಿಷಯಗಳಿಗೆ ವಿದೇಶಗಳಿಂದ ಬರುತ್ತಿದ್ದ ಅರ್ಜಿಗಳಲ್ಲಿ ಶೇ. 47 ಇಳಿಕೆಯಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 21ರಷ್ಟು ಕುಸಿತ ಕಂಡಿದೆ ಎಂದು ಅಂದಾಜಿಸಲಾಗಿದೆ.

ಆದರೆ ಕೆನಡದಲ್ಲಿ ಮಾತ್ರ ಭಾರತೀಯ ಎಂಬಿಎ ಪದವಿಧರರಿಗೆ ಒಳ್ಳೆಯ ಬೇಡಿಕೆ ಇನ್ನೂ ನೀಡಲಾಗುತ್ತಿದೆ. ಅತ್ಯುತ್ತಮ ವೇತನ ಜತೆ ಒಳ್ಳೆಯ ಉದ್ಯೋಗ ಅವಕಾಶವನ್ನು ಕೆನಡ ಕಲ್ಪಿಸುತ್ತಿದೆ. ಇದು ವಿದೇಶದ ಮತ್ತು ದೇಶಿಯ ಎಂಬಿಎ ಪದವಿಧರರಿಗೆ ಸಮಾನ ಉದ್ಯೋಗ ಅವಕಾಶವನ್ನು ನೀಡುತ್ತಾ ಬಂದಿದೆ. ಇಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ. 11ರಷ್ಟು ವೃದ್ಧಿಯಾಗಿದೆ.

2015ರಲ್ಲಿ ಇದ್ದ ಎಂಬಿಎ ಜಾಬ್ ಮಾರ್ಕೆಟ್ ಮತ್ತು 2019ರ ಮಾರ್ಕೆಟ್ ನಡುವೆ ಶೇ. 59 ಇಳಿಕೆ ಕಂಡುಬಂದಿದೆ. ಇದರಿಂದ ಶೇ. 13.7ರಷ್ಟು ವಿದೇಶಗಳಿಂದ ಬರುವ ಅರ್ಜಿಗಳು ಇಳಿಕೆಯಾಗಿದೆ. ಇದು ಪರೋಕ್ಷವಾಗಿ ಉದ್ಯೋಗ ಅವಕಾಶಗಳು ಕಡಿಮೆಯಾಗಲು ಕಾರಣವಾಗಿದೆ. ಅಮೆರಿಕದಲ್ಲಿ ಕೆಲಸ ಮಾಡಲು ವಿಶೇಷವಾಗಿ ಭಾರತೀಯ ಮುಂದೆ ಬರುತ್ತಿಲ್ಲ. ಇದಕ್ಕೆ ಅಲ್ಲಿನ ಹೊಸ ನಿಯಮಗಳು ಮತ್ತು ವಿಸಾ ನೀತಿ ಸೇರಿದಂತೆ ಹಲವು ಕಾರಣಗಳನ್ನೂ ಅಂದಾಜಿಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next