ಹೊಸದಿಲ್ಲಿ: ಐಐಎಂ ಕಲ್ಕತ್ತಾಗೆ ತನ್ನ 2 ವರ್ಷಗಳ ಎಂಬಿಎ ಪದವಿ ವ್ಯಾಸಾಂಗಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 17ನೇ ರ್‍ಯಾಂಕ್ ಪಡೆದುಕೊಂಡಿದೆ. ಫಿನಾಶಿಯಲ್ ಟೈಮ್ಸ್ ಮಾಸ್ಟರ್ಸ್ ರ್‍ಯಾಂಕಿಂಗ್ ಬಿಡುಗಡೆ ಮಾಡಿರುವ 2019ನೇ ವರ್ಷದ ರ್‍ಯಾಂಕಿಂಗ್‌ನಲ್ಲಿ 6 ಸ್ಥಾನಗಳ ಜಿಗಿತ ಕಂಡು 17ನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಕಳೆದ ಬಾರಿ 23ನೇ ಸ್ಥಾನದಲ್ಲಿತ್ತು. ಈ ಮೂಲಕ ಭಾರತದಲ್ಲಿ ಎಂಬಿಎ ವ್ಯಾಸಾಂಗಕ್ಕೆ ಐಐಎಂ ಕಲ್ಕತ್ತಾ ಮೊದಲ ಆಯ್ಕೆ ಎಂದು ದೃಢಪಟ್ಟಿದೆ.
ಐಐಎಂ ಅಹಮದಾಬಾದ್ 19ನೇ ರ್‍ಯಾಂಕಿಂಗ್‌ನಿಂದ 21ಕ್ಕೆ ಕುಸಿತ ಕಂಡಿದೆ. ಐಐಎಂ ಬೆಂಗಳೂರು 44ನೇ ಸ್ಥಾನವನ್ನು ಪಡೆಯಲಷ್ಟೇ ಶಕ್ತವಾಗಿದೆ. ಸ್ವೀಸ್ ಬುಸಿನೆಸ್ ಸ್ಕೂಲ್ ಯುನಿವರ್ಸಿಟಿ ಆಫ್ ಸೈಂಟ್ ಗ್ಯಾಲೆನ್ ಈ ವರ್ಷವೂ ಪ್ರಥಮ ರ್‍ಯಾಂಕ್ ಅನ್ನು ಕಾಯ್ದುಕೊಂಡಿದೆ.
ಈ ರ್‍ಯಾಂಕಿಂಗ್‌ನಲ್ಲಿ ಒಟ್ಟು 100 ಪ್ರತಿಷ್ಠಿತ ಐಐಎಂ ಕಾಲೇಜುಗಳನ್ನು ಆಯ್ಕೆ ಮಾಡಲಾಗುತ್ತದೆ. ಅವುಗಳಲ್ಲಿ ರ್‍ಯಾಂಕ್ ಪ್ರಕ್ರಿಯೆಯನ್ನು ನೀಡಲಾಗುತ್ತದೆ. ಮೌಲ್ಯಾಧಾರಿತ ಶಿಕ್ಷಣ, ವಿದ್ಯಾರ್ಥಿಗಳ ವೈಯಕ್ತಿಕ ಗುಣಮಟ್ಟ ವೃದ್ಧಿ, ಪದವಿ ಪಡೆದ 3 ತಿಂಗಳೊಳಗೆ ಉದ್ಯೋಗ ದೊರಕುವ ಪ್ರಮಾಣ, ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅವಕಾಶ, ಪಿಎಚ್.ಡಿ. ಹೊಂದಿರುವ ಪ್ರಾಧ್ಯಾಪಕ, ವೃತ್ತಿ ಶಿಕ್ಷಣದ ಸಮಯ ಮತ್ತು ಶೈಕ್ಷಣಿಕ ಮೊತ್ತ, ಶೈಕ್ಷಣಿಕ ಅವಧಿಯಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ಮೊದಲಾದ ಮಾಹಿತಿಗಳು ಸೇರಿದಂತೆ ಸಂಸ್ಥೆಯ ಗುಣಮಟ್ಟ ಹಾಗೂ ಮೂಲ ಸೌಲಭ್ಯಗಳನ್ನು ಈ ರ್‍ಯಾಂಕ್ ನೀಡುವ ಸಂದರ್ಭ ಪರಿಗಣಿಸಲಾಗುತ್ತದೆ.