Advertisement

ಎಂ.ಬಿ.ಪಾಟೀಲ್ ಟೆಂಪಲ್ ರನ್; ಅಂಜನಾದ್ರಿ ಬೆಟ್ಟಕ್ಕೆ ಭೇಟಿ

08:59 PM Sep 05, 2022 | Team Udayavani |

ಗಂಗಾವತಿ :ಕಾಂಗ್ರೆಸ್ ಪ್ರದೇಶ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರ ಟೆಂಪಲ್ ರನ್ ಮುಂದುವರೆದಿದ್ದು, ಸೋಮವಾರ ಸಂಜೆ ಗಂಗಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಬೆಟ್ಟದ ಕೆಳಗಿನ ಆಂಜನೇಯನ ಮೂರ್ತಿ ಮತ್ತು ಪಾದಗಟ್ಟೆಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ದೇವಾಲಯ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವರು ಮತ್ತು ದೇವತೆಗಳು ಬಿಜೆಪಿ ಮತ್ತು ಆರೆಸ್ಸೆಸ್ ಸಂಘಪರಿವಾರದ ಆಸ್ತಿಗಳಲ್ಲ .ಪ್ರತಿಯೊಬ್ಬ ಹಿಂದೂವಿಗೂ ದೇವರು ದೇವತೆಗಳ ಬಗ್ಗೆ ಅಭಿಮಾನವಿರುತ್ತದೆ. ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೂಲತಃ ದೈವಭಕ್ತರಾಗಿದ್ದಾರೆ.ನಾನು ಸಹ ನಮ್ಮ ಹಿರಿಯರಂತೆ ಮನೆ ದೇವರು ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಿಗೆ, ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಸೇವೆಯನ್ನು ಸಲ್ಲಿಸುತ್ತಿದ್ದೇನೆ .ಬಿಜೆಪಿಯವರು ಮಾತ್ರ ಅವರೇ ದೇವರು ದೇವತೆಗಳನ್ನು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದುಕೊಂಡವರಂತೆ ಮಾತನಾಡುತ್ತಾರೆ ಅವರಲ್ಲಿರುವುದು ನೈಜ ಭಕ್ತಿಯಲ್ಲ ತೋರಿಕೆಯ ಭಕ್ತಿಯಾಗಿದೆ.ಆದ್ದರಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಯಾವುದೇ ಕ್ಷೇತ್ರವನ್ನು ಅವರು ಸಮಗ್ರವಾಗಿ ಅಭಿವೃದ್ಧಿ ಮಾಡಿಲ್ಲ ತೋರಿಕೆಗಾಗಿ ಚುನಾವಣೆಗಾಗಿ ದೇವರು ಧರ್ಮವನ್ನು ಜಾತಿಯನ್ನು ಬಿಜೆಪಿಯವರು ಸಂಘಪರಿವಾರ ದುರ್ಬಳಕೆ ಮಾಡುತ್ತಿದ್ದು ಯುವಕರ ತೆಲೆ ಕೆಡಿಸುತ್ತಿದ್ದಾರೆ ಎಂದರು.

ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯವಿಲ್ಲ. ಬಿಜೆಪಿ ಸರ್ಕಾರ ಘೋಷಣೆ ಮಾಡಿರುವ ನೂರಾರು ಕೋಟಿಗಳ ಯೋಜನೆಯನ್ನು ಕೂಡಲೇ ಅನುಷ್ಠಾನ ಮಾಡಬೇಕು ಮತ್ತು ಈ ಭಾಗಕ್ಕೆ ಬರುವ ಪ್ರವಾಸಿಗರಿಗೆ ಮತ್ತು ಆಂಜನೇಯನ ಭಕ್ತರಿಗೆ ಮೂಲಸೌಲಭ್ಯ ಒದಗಿಸಬೇಕು. ಜತೆಗೆ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಗ್ರಾಮಗಳಲ್ಲಿ ಜಾಗವನ್ನು ಕಳೆದುಕೊಳ್ಳುವ ಮನೆಗಳ ಮಾಲೀಕರಿಗೆ ಕೂಡಲೇ ಸರ್ಕಾರ ಪರಿಹಾರವನ್ನು ವೈಜ್ಞಾನಿಕ ರೀತಿಯಲ್ಲಿ ಕೊಡಬೇಕು ಎಂದರು.

ನವಲಿ ಜಲಾಶಯ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಯೋಜನೆಯನ್ನು ರೂಪಿಸಲಾಗಿತ್ತು ಬಿಜೆಪಿಯವರು ಸರ್ವೆಯಲ್ಲಿ ತಮ್ಮ ಅವಧಿಯ ಮುಗಿಸಿದ್ದಾರೆ .ಪುನಃ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಆ ಸಂದರ್ಭದಲ್ಲಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಿ ಮಳೆಗಾಲದಲ್ಲಿ ನದಿ ಮೂಲಕ ಹರಿದು ಹೋಗುವ ತುಂಗಭದ್ರ ನದಿ ಸಂರಕ್ಷಣೆ ಮಾಡಿ ತಮ್ಮ ಕೊನೆ ಭಾಗದ ರೈತರಿಗೆ ತಲುಪಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದರು.

ಬಿಜೆಪಿ ಸರಕಾರ ಶೇ.50 ಕಮಿಷನ್ ಸರ್ಕಾರವಾಗಿದೆ ಪ್ರತಿಯೊಂದು ಇಲಾಖೆಯಲ್ಲಿಯೂ ಬಿಜೆಪಿ ಸರ್ಕಾರ ಕಮಿಷನ್ ಪಡೆಯುವ ಮೂಲಕ ಭ್ರಷ್ಟಾಚಾರವನ್ನು ತಲುಪಿದೆ ಆದ್ದರಿಂದ ಇವರ ಭ್ರಷ್ಟಾಚಾರದಿಂದ ಸರ್ಕಾರದ ಹಣ ಲೂಟಿಯಾಗುತ್ತಿದೆ ಎಂದು ಪಾಟೀಲ್ ಆಕ್ರೋಶ ಹೊರ ಹಾಕಿದರು.

Advertisement

ಈ ಸಂದರ್ಭದಲ್ಲಿ ಅಂಜನಾದ್ರಿ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ,ಇಕ್ಬಾಲ್ ಅನ್ಸಾರಿ ಮಾಜಿ ಸಂಸದ ಶಿವರಾಮಗೌಡ, ಕಾಂಗ್ರೆಸ್ ಮುಖಂಡರಾದ ಬಸವರಾಜ ಮಳಿಮಠ , ಶಾಮೀದ್ ಮನಿಯಾರ್, ಫಕೀರಪ್ಪ ಎಮ್ಮೆ, ಅಮರೇಶ ಗೋನಾಳ, ಸಲ್ಮಾನ್ ಬಿಚ್ಚುಗತ್ತಿ ,ಸೋಮನಾಥ ಭಂಡಾರಿ ,ರಾಜು ನಾಯಕ ಆಸಿಫ್ ,ತಿಮ್ಮಪ್ಪ ಬಾಳೆಕಾಯಿ, ಕೆ ವಿ ಬಾಬು,ಶಾಂತರಾಜು, ಮಧುಸೂದನ್ , ಯುವರಾಜ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಗ್ರಾಮ ಪಂಚಾಯಿತಿಯ ಸದಸ್ಯರು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next