Advertisement

ಎಂ.ಬಿ.ಪಾಟೀಲ ಸಿ.ಎಂ ಆಗಲೆಂದು ಹರಕೆ ಹೊತ್ತು ಶಬರಿಗೆ ಪಾದಯಾತ್ರೆ ಹೊರಟ ಅಯ್ಯಪ್ಪ ಭಕ್ತ

06:06 PM Dec 13, 2022 | Team Udayavani |

ವಿಜಯಪುರ : ಬಬಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಆಗಲೆಂದು ಜಿಲ್ಲೆಯ ಅಯ್ಯಪ್ಪಸ್ವಾಮಿ ಭಕ್ತರೊಬ್ಬರು ಹರಕೆಹೊತ್ತು, ಶಬರಿಗೆ ಆದಯಾತ್ರೆ ಹೊರಟಿದ್ದಾರೆ.

Advertisement

ಬಬಲೇಶ್ವರ ಕ್ಷೇತ್ರ ವ್ಯಾಪ್ತಿಯ ತಿಕೋಟಾ ತಾಲೂಕಿನ ಬಾಬಾನಗರದ ರೈತ ರಾಜಕುಮಾರ ರವೀಂದ್ರ ಹೊನವಾಡ (28) ಎಂಬ ಮಾಲಾಧಾರಿ ಅಯ್ಯಪ್ಪಸ್ವಾಮಿ ಭಕ್ತರನೇ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಆಗಲೆಂದು ಹರಕೆ ಹೊತ್ತು, ಶಬರಿಗೆ ಪಾದಯಾತ್ರೆ ಹೊರಟ ಯುವಕ.

ಸುಮಾರು 1300 ಕಿ. ಮೀ. ಪಾದಯಾತ್ರೆ ಕೈಗೊಂಡಿರುವ ರಾಜಕುಮಾರ ಏಕಾಂಗಿಯಾಗಿ ಶಬರಿಗೆ ಹೊರಟಿದ್ದಾರೆ. ಅಯ್ಯಪ್ಪಸ್ವಾಮಿ ಸನ್ನಿಧಾನಕ್ಕೆ ಹರಕೆ ಹೊತ್ತು ಹೊರಟಿರುವ ನನಗೆ ಯಾವ ಸಮಸ್ಯೆ ಆಗದು ಎಂಬುದು ಈ ಭಕ್ತನ ಆಶಯ.

ಡಿ.6 ರಿಂದ ಬಾಬಾನಗರದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡಿರುವ ಯುವಭಕ್ತ, ನಿತ್ಯವೂ ಸುಮಾರು 40 ಕಿ.ಮೀ. ಪಾದಯಾತ್ರೆ ನಡೆಸುತ್ತಾರೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಕಾರವಾರ ದಾಟಿರುವ ಅಯ್ಯಪ್ಪ ಮಾಲಾಧಾರಿ, ತಲೆ ಮೇಲೆ ಇರುಮುಡಿ ಹೊತ್ತು, ಕೊರಳಲ್ಲಿ ಅಯ್ಯಪ್ಪಸ್ವಾಮಿ, ವಿಪಕ್ಷ ನಾಯಕರ ಸಿದ್ಧರಾಮಯ್ಯ ಅವರ ಸಾಂಕೇತಿಕ ಹಾಗೂ ಎಂ.ಬಿ.ಪಾಟೀಲ ಅವರ ಪ್ರಧಾನ ಚಿತ್ರ ಹಾಕಿಕೊಂಡ ಫೋಟೋ ಕೊರಳಲ್ಲಿ ಹಝಾಕಿಕೊಂಡು ಪಾದಯಾತ್ರೆ ನಡೆಸಿದ್ದಾರೆ.

ಸಾವಿರಾರು ಅಡಿ ಹತ್ತಾರು ಕೊಳವೆಭಾವಿ ಕೊರೆಸಿದರೂ ಬೊಗಸೆ ನೀರು ಸಿಗದ ದುಸ್ಥಿತಿ ನಮ್ಮ ಭಾಗದಲ್ಲಿತ್ತು. ಎಂ.ಬಿ.ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗುವ ಮೂಲಕ ನಮ್ಮ ಭಾಗದಲ್ಲಿ ರೈತರ ಜಮೀನಿಗೆ ನೀರು ಹರಿಸಿ ಸಂಕಷ್ಟ ನೀಗಿದ್ದಾರೆ.

Advertisement

ತಿಕೋಟಾ, ಬಬಲೇಶ್ವರ ಮಾತ್ರವಲ್ಲ ಇಡೀ ಜಿಲ್ಲೆಯ ರೈತರು ನೆಮ್ಮದಿಯ ಜೀವನ ನಡೆಸಲು ಸಹಕಾರಿ ಆಗಿದೆ. ಹೀಗಾಗಿ ಎಂ.ಬಿ.ಪಾಟೀಲ ಅವರು ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂಬ ಹರಕೆ ಹೊತ್ತು ಅಯ್ಯಪ್ಪ ಸನ್ನಿಧಿಗೆ ಪಾದಯಾತ್ರೆ ಹೊರಟಿದ್ದೇನೆ ಎಂದು ವಿವರಿಸಿದರು.

ನನಗೆ 5.5 ಎಕರೆ ಜಮೀನಿದ್ದು, ದ್ರಾಕ್ಷಿ ಬೆಳೆದಿರುವ ನನಗೆ ಬೆಳೆಗೆ ನೀರು ಹೊಂದಿಸುವುದು ಕಷ್ಟವಾಗಿ, ಟ್ಯಾಂಕರ್ ಮೂಲಕ ನೀರು ಹಾಕಿಸುತ್ತಿದ್ದೆ. ಎಂ.ಬಿ.ಪಾಟೀಲ ಅವರ ರೈತ ಪರ ಕಾಳಜಿಯ ಬದ್ಧತೆಯ ಪರಿಣಾಮ ನನ್ನ ಕೊಳವೆ ಬಾವಿಗಳಲ್ಲಿ ಜೀವಸೆಲೆ ಉಕ್ಕುತ್ತಿದ್ದು, ತೋಟಗಾರಿಕೆ ಬೆಳೆ ಬೆಳೆದು ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿ ಆಗಿದೆ. ಇದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು ಅಯ್ಯಪ್ಪ ದೇವರಿಗೆ ಹರಕೆ ಹೊತ್ತಿದ್ದೇನೆ ಎಂದು ರಾಜಕುಮಾರ ಹೇಳುತ್ತಾರೆ.

ತಮ್ಮೂರಿನ ಯುವಕನ ಈ ವಿಶಿಷ್ಟ ಹರಕೆ ಹಾಗೂ ಸಾಹಸದ ಪಾದಯಾತ್ರೆಗೆ ಬಾಬಾನಗರ ಗ್ರಾಮಸ್ಥರು ಏಕಾಂಗಿ ಪಾದಯಾತ್ರೆ ಬೇಡ ಎಂದರೂ ಛಲಗಾರಿಕೆಯಿಂದ ಪಾದಯಾತ್ರೆ ಆರಂಭಿಸಿದ್ದಾಗಿ ಶಂಕರಗೌಡ ಗುರನಗೌಡ ಬಿರಾದಾರ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಕುಣಿಗಲ್: ಪ್ರತ್ಯೇಕ ಘಟನೆ; ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಇಬ್ಬರು ಸಾವು

Advertisement

Udayavani is now on Telegram. Click here to join our channel and stay updated with the latest news.

Next