Advertisement
ಪ್ರಧಾನಿ ನರೇಂದ್ರ ಮೋದಿ ಅವರು ನವರಾತ್ರಿ ಸಮಯದಲ್ಲಿ ಬರೀ ನೀರು ಸೇವಿಸುತ್ತಾರೆ ಎನ್ನುವ ವಿಚಾರ ಜಗತ್ತಿನಾದ್ಯಂತ ಸುದ್ದಿ ಮಾಡಿರುವ ಬೆನ್ನಲ್ಲೇ ಮೇಯರ್ ಕೂಡ ಹಬ್ಬವನ್ನು ಅದೇ ರೀತಿಯಲ್ಲಿ ಆಚರಿಸುತ್ತಿರುವುದು ವಿಶೇಷ. ದೇವಿಯ ಆರಾಧಕಿ ಯಾಗಿರುವ ಮೇಯರ್ 2009ರಿಂದ ನವರಾತ್ರಿಯ ಒಂಬತ್ತು ದಿನ ಅನ್ನ, ಆಹಾರ, ಫಲವಸ್ತುಗಳನ್ನು ತ್ಯಜಿಸಿ ಕೇವಲ ನೀರನ್ನು ಸೇವಿಸುತ್ತಿದ್ದಾರೆ. ನವ ರಾತ್ರಿಯ ಮೊದಲ ದಿನ ಮನೆಯಲ್ಲಿ ಪೂಜೆ ಮಾಡಿ ವ್ರತ ಪ್ರಾರಂಭಿಸಿದರೆ, ಕೊನೆಯ (ವಿಜಯ ದಶಮಿ) ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅನ್ನ ಸೇವಿಸಿ ವ್ರತ ಬಿಡುತ್ತಾರೆ. ಈ ಮಧ್ಯೆ ಅವರು ನೀರು ಹೊರತುಪಡಿಸಿ ಯಾವುದೇ ಫಲ ವಸ್ತುಗಳನ್ನು ಸೇವಿಸುವುದಿಲ್ಲ. ತಮ್ಮ ನಿವಾಸ ಬಿಜೈಯಿಂದ ಕಟೀಲು ದೇಗುಲಕ್ಕೆ ಪಾದ ಯಾತ್ರೆ ಮಾಡಿ, ದೇವಿಯ ದರ್ಶನ ಪಡೆಯುತ್ತಾರೆ. ನಿತ್ಯ ಎರಡು ಸಲ ಮನೆಯಲ್ಲೇ ದೇವಿ ಪೂಜೆ ಮಾಡುವ ಕವಿತಾ, ನಿತ್ಯವೂ ಒಂದು ದೇವಾಲಯಕ್ಕೆ ತೆರಳಿ ಪ್ರಾರ್ಥಿಸುತ್ತಾರೆ.
ಮೇಯರ್ ಅವರ ಈ ವ್ರತಕ್ಕೆ ಪತಿ ಹಾಗೂ ಮಕ್ಕಳು ಪೂರ್ಣ ಸಹಕಾರ ನೀಡುತ್ತಾರೆ. ಪತಿ ಜಿ. ಅರುಣ್ ಕುಮಾರ್ ಕಳೆದ ಬಾರಿ ಒಂದು ಹೊತ್ತಿನ ಊಟ ಸೇವಿಸಿ ವ್ರತ ಆಚರಿಸಿದ್ದರು. ಆದರೆ ಈ ಬಾರಿ ಅವರು ವ್ರತ ಮಾಡುತ್ತಿಲ್ಲ. ಆದರೆ, ಮಗಳು ಪ್ರಿಶಾ (9) ಅಮ್ಮನೊಂದಿಗೆ ಈ ಬಾರಿ ವ್ರತದಲ್ಲಿ ಭಾಗಿಯಾಗುತ್ತೇನೆ ಎಂದು ಹಠ ಹಿಡಿದರೂ ಮೇಯರ್ ಅನುಮತಿ ನೀಡಿಲ್ಲ. ದೈನಂದಿನ ಕೆಲಸಕ್ಕೆ ಅಡ್ಡಿ ಇಲ್ಲ
ಒಂಬತ್ತು ದಿನಗಳ ಯಾವುದೇ ಆಹಾರ ಸೇವಿಸದೆ ಬರೀ ನೀರು ಕುಡಿಯುತ್ತಿದ್ದರೂ ಮೇಯರ್ ತಮ್ಮ ನಿತ್ಯದ ಕೆಲಸಗಳಲ್ಲಿ ಯಾವುದೇ ಬದಲಾವಣೆ ಮಾಡಿ ಕೊಂಡಿಲ್ಲ. ಮನೆಗೆಲಸ ಮುಗಿಸಿ ಅಧಿಕಾರಿಗಳೊಂದಿಗೆ ಸಭೆ, ಉಳಿದ ಕಾರ್ಯಕ್ರಮಗಳಲ್ಲಿ ಎಂದಿನಂತೆ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿರುವುದರಿಂದ ದಿನನಿತ್ಯ ಎರಡು ಗಂಟೆ ತಯಾರಿ ನಡೆಸುತ್ತಿದ್ದ ಮೇಯರ್, ಈ ಒಂಬತ್ತು ದಿನಗಳಲ್ಲಿ ಅಭ್ಯಾಸ ಮಾಡುವ ಸಮಯಗಳಲ್ಲಿ ಬದ ಲಾವಣೆ ಆಗಬಹುದು ಎನ್ನುತ್ತಾರೆ.
Related Articles
9 ದಿನವೂ ನೀರು ಮಾತ್ರ ಸೇವನೆ
ಕೆಲಸಕ್ಕೆ ಏನೂ ಅಡ್ಡಿಯಿಲ್ಲ
Advertisement
ದೇವರ ಕೃಪೆಯಿಂದ ಜನಸೇವೆ ಮಾಡಲು ಸಾಧ್ಯವಾಗಿದೆ
ನಾನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೀರು ಮಾತ್ರ ಸೇವಿಸುತ್ತೇನೆ. ನನ್ನ ವ್ರತದಿಂದ ಜನಸೇವೆಗೆ ಯಾವುದೇ ರೀತಿಯ ಧಕ್ಕೆಯಾಗದು. ದೇವರ ಆಶೀರ್ವಾದದಿಂದಲೇ ನಾನು ಜನಸೇವೆ ಮಾಡಲು ಸಾಧ್ಯವಾಗಿದೆ. ಅದಕ್ಕಾಗಿ ಒಂಬತ್ತು ದಿನ ಅನ್ನ ತ್ಯಜಿಸಿದರೆ ಏನೂ ಆಗದು. ವ್ರತ ದಿಂದಾಗಿ ಯಾವುದೇ ಆರೋಗ್ಯ ಸಮಸ್ಯೆ ನನ್ನನ್ನು ಕಾಡಿಲ್ಲ.
ಕವಿತಾ ಸನಿಲ್ , ಮೇಯರ್ ಪ್ರಜ್ಞಾ ಶೆಟ್ಟಿ