Advertisement

ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ಗೆ ಮೇಯರ್‌ ಚಾಲನೆ

12:22 PM Dec 12, 2017 | Team Udayavani |

ಬೆಂಗಳೂರು: ನಗರದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿರುವ “ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ಗೆ ಮೇಯರ್‌ ಆರ್‌.ಸಂಪತ್‌ರಾಜ್‌ ಚಾಲನೆ ನೀಡಿದರು. ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗ ಅವ್ಯವಸ್ಥೆ, ಹಾಳಾದ ಬೀದಿ ದೀಪ ಸೇರಿದಂತೆ ಇತರೆ ನಾಗರಿಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ಉದ್ದೇಶದಿಂದ ಹೊಸ ಆ್ಯಪ್‌ ಜಾರಿಗೊಳಿಸಲಾಗಿದೆ.

Advertisement

ನಗರದ ಯಾವುದೇ ಭಾಗದಲ್ಲಿ ಸಮಸ್ಯೆಗಳು ಕಂಡುಬಂದರೆ ಸ್ಥಳದ ಛಾಯಾಚಿತ್ರ ಸಮೇತವಾಗಿ ದೂರು ಸಲ್ಲಿಸಬಹುದಾಗಿದ್ದು, ಸ್ವಯಂಪ್ರೇರಿತವಾಗಿ ಗೂಗಲ್‌ ನಕ್ಷೆಯೊಂದಿಗೆ ಸ್ಥಳದ ವಿಳಾಸ ಪಾಲಿಕೆಯ ಅಧಿಕಾರಿಗಳಿಗೆ ತಿಳಿಯಲಿದೆ ಎಂದರು. ದೂರಿಗಳಿಗೆ 10ದಿನದಲ್ಲಿ ಸಂದೇಶದ ಮೂಲಕ ಸ್ಪಂದನೆ ಸಿಗಲಿದೆ ಎಂದು ತಿಳಿಸಿದರು.

ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾತನಾಡಿ, ನಗರದಲ್ಲಿ ಹಾಲಿ ಇರುವ ಬೀದಿ ದೀಪಗಳನ್ನು ತೆಗೆದು ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸುವ ಕುರಿತು ಡಿಪಿಆರ್‌ ಸಿದ್ಧಪಡಿಸಲಾಗುತ್ತಿದ್ದು, ಮೂರು-ನಾಲ್ಕು ತಿಂಗಳೊಳಗೆ ಜಾಗತಿಕ ಟೆಂಡರ್‌ ಕರೆದು 8 ತಿಂಗಳೊಳಗೆ ನಗರದಲ್ಲ ಎಲ್ಲ ಕಡೆಗಳಲ್ಲಿ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next