Advertisement

ಮೋದಿ ಸೋಲಿಸಲು ನಾವೇ ಸಾಕು ; ‘ಕೈ’ ಜೊತೆ ಮೈತ್ರಿಯಿಲ್ಲ: ಮಾಯಾವತಿ

12:14 PM Mar 12, 2019 | Team Udayavani |

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗಳಿಗಾಗಿ ಉತ್ತರಪ್ರದೇಶದಲ್ಲಿ ತನ್ನ ಬದ್ಧ ರಾಜಕೀಯ ಎದುರಾಳಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿ ಅವರು ಮೋದಿ ನೇತೃತ್ವದ ಎನ್‌.ಡಿ.ಎ.ಯನ್ನು ಕೇಂದ್ರದಲ್ಲಿ ಪದಚ್ಯುತಗೊಳಿಸಲು ನಮ್ಮ ನಡುವಿನ ಮೈತ್ರಿಯೇ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತು ಉತ್ತರಪ್ರದೇಶ ಸೇರಿದಂತೆ ಬೇರಿನ್ಯಾವುದೇ ರಾಜ್ಯದಲ್ಲಿ ಬಿ.ಎಸ್‌.ಪಿ.ಯು ಕಾಂಗ್ರೆಸ್‌ ಪಕ್ಷದ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನೇತೃತ್ವದಲ್ಲಿ  ರೂಪುಗೊಂಡಿರುವ ‘ಮಹಾ ಮೈತ್ರಿ’ಗೆ ಮಾಯಾ ಸಮ್ಮತಿ ಇಲ್ಲವೆಂಬುದು ಮತ್ತೂಮ್ಮೆ ಸ್ಪಷ್ಟವಾಗಿದೆ.

Advertisement

‘ಬಿ.ಎಸ್‌.ಪಿ. ಮತ್ತು ಎಸ್‌.ಪಿ. ನಡುವೆ ‘ಪರಸ್ಪರ ಗೌರವ’ ಮತ್ತು ‘ಪ್ರಾಮಾಣಿಕ ಉದ್ದೇಶ’ದಿಂದ ಕೂಡಿದ ಮೈತ್ರಿ ಏರ್ಪಟ್ಟಿದೆ. ಹಾಗಾಗಿ ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಈ ನಮ್ಮ ಮೈತ್ರಿಯೇ ಸಾಕು’ ಎಂಬುದು ಮಾಯಾವತಿಯವರ ಆತ್ಮವಿಶ್ವಾಸದ ನುಡಿ. ಉತ್ತರಪ್ರದೇಶ ಹೊರತುಪಡಿಸಿ ಇನ್ನುಳಿದ ರಾಜ್ಯಗಳ ಬಿ.ಎಸ್‌.ಪಿ. ನಾಯಕರನ್ನುದ್ದೇಶಿಸಿ ಮಾಯಾವತಿಯವರು ಮಾತನಾಡುತ್ತಾ ಈ ಮೈತ್ರಿ ವಿಚಾರವನ್ನು ಸ್ಪಷ್ಟಪಡಿಸಿದರು. ದೇಶದ ವಿವಿಧ ರಾಜ್ಯಗಳಲ್ಲಿ ಹಲವಾರು ಪಕ್ಷಗಳು ಬಿ.ಎಸ್‌.ಪಿ.ಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿವೆ ಆದರೆ ನಮ್ಮ ಪಕ್ಷವು ಚುನಾವಣಾ ಲಾಭಕ್ಕಾಗಿ ಸಿದ್ಧಾಂತಗಳನ್ನು ಬಲಿಕೊಡಲು ಸಿದ್ಧವಿಲ್ಲ ಎಂಬುದನ್ನು ಮಾಯಾವತಿಯವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next