Advertisement

ಮಹಾಘಟಬಂಧನದಲ್ಲಿ ಒಡಕು ? ಸೋಲಿಗೆ ಅಖೀಲೇಶ್‌ ಕಾರಣ: ಮಾಯಾವತಿ

10:15 AM Jun 05, 2019 | Sathish malya |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ತೋರಿರುವ ಉತ್ತರ ಪ್ರದೇಶದ ಮಹಾ ಘಟಬಂಧನದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಇದೀಗ ಪರಸ್ಪರರಿಂದ ದೂರವಾಗುವ ಕಾಲಘಟ್ಟ ಸನ್ನಿಹಿತವಾದಂತಿದೆ.

Advertisement

ಮಹಾ ಘಟಬಂಧನದ ಕಳಪೆ ನಿರ್ವಹಣೆಗೆ ಕಾರಣ ಶೋಧಿಸುವ ಪಕ್ಷದ ಸಭೆಯಲ್ಲಿ BSP ನಾಯಕರು, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರೇ ಕಾರಣ ಎಂದು ದೂರಿದ್ದಾರೆ.

ಉತ್ತರ ಪ್ರದೇಶದ 80 ಲೋಕಸಭಾ ಸೀಟುಗಳ ಪೈಕಿ 62 ಸೀಟುಗಳನ್ನು ಭಾರತೀಯ ಜನತಾ ಪಕ್ಷ ಬಾಚಿ ಕೊಂಡು ಮಹಾಘಟಬಂಧನದ ಎಸ್‌ಪಿ – ಬಿಎಸ್‌ಪಿ ಗೆ ಶಾಕ್‌ ನೀಡಿತ್ತು.

ಎಸ್‌ಪಿ-ಬಿಎಸ್‌ಪಿ ಮಾತ್ರವಲ್ಲದೆ ರಾಷ್ಟ್ರೀಯ ಲೋಕ ದಳವನ್ನು ಕೂಡ ಒಳಗೊಂಡಿದ್ದ ಮಹಾ ಘಟಬಂಧನಕ್ಕೆ ದಕ್ಕಿದ್ದ ಒಟ್ಟು ಸ್ಥಾನಗಳು 17. ಕಾಂಗ್ರೆಸ್‌ ಪಕ್ಷಕ್ಕೆ ರಾಯ್‌ಬರೇಲಿ ಮೂಲಕ ದಕ್ಕಿದ್ದು ಕೇವಲ ಒಂದು ಸ್ಥಾನ !

ಕನೋಜ್‌ ಕ್ಷೇತ್ರದಿಂದ ಸ್ಪರ್ಧಿಸಿ 12,000 ಮತಗಳ ಅಂತರದಲ್ಲಿ ಸೋತ ಪತ್ನಿ ಡಿಂಪಲ್‌ ಅವರನ್ನು ಕೂಡ ಗೆಲ್ಲಿಸಲು ಅಖೀಲೇಶ್‌ ಯಾದವ್‌ಗೆ ಸಾಧ್ಯವಾಗಿಲ್ಲ ಎಂದು ಮಾಯಾವತಿ ಅವರು ಪಕ್ಷದ ಸಭೆಯಲ್ಲಿ ಜರೆದಿರುವುದಾಗಿ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next