Advertisement

ಬಯಲು ಶೌಚ ಮುಕ್ತ ನಗರಕ್ಕೆ ಪ್ರಯತ್ನ

04:15 AM Jan 27, 2019 | |

ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ಸ್ವಚ್ಛ ಭಾರತ ಯೋಜನೆಯಡಿ ಅವಳಿ ನಗರದಲ್ಲಿ ಅವಶ್ಯವಿರುವೆಡೆ ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚ ಮುಕ್ತ ನಗರವಾಗಿಸಲು ಪ್ರಯತ್ನಿಸಲಾಗುವುದು. ಇದಕ್ಕೆ ಜನರ ಸಹಕಾರ ಅವಶ್ಯವೆಂದು ಮಹಾಪೌರ ಸುಧೀರ ಸರಾಫ ಹೇಳಿದರು.

Advertisement

ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಪಾಲಿಕೆ ಆವರಣದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅವಳಿ ನಗರದಲ್ಲಿ 24×7 ಕುಡಿಯುವ ನೀರು, ರಸ್ತೆಗಳ ದುರಸ್ತಿ, ಒಳಚರಂಡಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಕಸಮುಕ್ತ ನಗರವನ್ನಾಗಿಸಲು ಕ್ರಮಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಆಟೋ ಟಿಪ್ಪರ್‌ಗಳ ಮೂಲಕ ಪ್ರತಿ ಮನೆ ಮನೆಗೆ ತೆರಳಿ ಕಸ ಪಡೆದು ಕಾರವಾರ ರಸ್ತೆಯಲ್ಲಿರುವ ಕಸದಗುಡ್ಡೆಯಲ್ಲಿ ಸಂಗ್ರಹಿಸಲಾಗುತ್ತಿದೆ. ದಿನನಿತ್ಯ ಸಂಗ್ರಹವಾಗುವ ಕಸವನ್ನು ವಿಂಗಡಣೆ ಮಾಡಿ, ಕಾಂಪೋಸ್ಟ್‌ ಮತ್ತು ನಿರುಪಯುಕ್ತ ವಸ್ತು ತೆಗೆದು ಪ್ರತಿದಿನ ವಿಲೇವಾರಿ ಮಾಡಲಾಗುತ್ತಿದೆ. ಅವಳಿ ನಗರವವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದರು.

ಭಾರತದ ಅಖಂಡ ಸಂಸ್ಕೃತಿ, ಸಾರ್ವಭೌಮತ್ವ, ಏಕತೆ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಜಾಗತೀಕರಣದ ಇಂದಿನ ಪೈಪೋಟಿಯಲ್ಲಿ ನಮ್ಮ ಸಂಸ್ಕೃತಿ, ಸಂಪತ್ತು ಉಳಿಸಿಕೊಂಡು ದೇಶವನ್ನು ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಿ ಮೊದಲ ಸ್ಥಾನದತ್ತ ಕೊಂಡೊಯ್ಯೋಣ ಎಂದು ಹೇಳಿದರು.

ಪಾಲಿಕೆ ಸದಸ್ಯರಾದ ಗಣೇಶ ಟಗರಗುಂಟಿ, ಅಲ್ತಾಫ ಕಿತ್ತೂರ, ಆಯುಕ್ತ ಸಿಡಬ್ಲು ್ಯ ಶಕೀಲ ಅಹ್ಮದ, ಎಸ್‌.ಎಚ್. ನರೇಗಲ್‌, ಎಸ್‌.ಸಿ. ಬೇವೂರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next