Advertisement

ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ

11:06 AM Feb 29, 2020 | Naveen |

ಮಾಯಕೊಂಡ: ಗ್ರಾಮದ ಜನರ ಬಹು ದಿನಗಳ ಬೇಡಿಕೆ ದ್ವಿಪಥ ರಸ್ತೆ ಕಾಮಗಾರಿಗೆ ಚಾಲನೆ ದೊರಕಿರುವುದು ತುಂಬ ಸಂತಸ ತಂದಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ ಹೇಳಿದರು.

Advertisement

ಮಾಯಕೊಂಡ ಗ್ರಾಮದಲ್ಲಿ 7.30 ಕೋಟಿ ವೆಚ್ಚದ 1.40 ಕಿ.ಮೀ ದ್ವಿಪಥ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಅವರ ಕಾಲದಲ್ಲಿ ಯೋಜನೆ ಮಂಜೂರಾದರು ಸರ್ಕಾರ ಬದಲಾದ ಕಾರಣಕ್ಕೆ ತಡವಾಗಿದ್ದು, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಲಾಗಿದೆ. ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಯಾವುದೆ ಸಬೂಬು ಹೇಳದೆ ಮಾಡಬೇಕು ಎಂದು ಗುತ್ತಿಗೆದಾರನಿಗೆ ತಾಕೀತು ಮಾಡಿದರು.

ರಸ್ತೆ ಮಾಡುವಾಗ ಮನೆ ಕಳೆದುಕೊಳ್ಳುವ ಬಡವರನ್ನು ಬೀದಿಗೆ ನಿಲ್ಲಿಸಬಾರದು. ಮನೆಗಳಿಗೆ ತೊಂದರೆ ಅದರೆ ಅವರಿಗೆ ಗ್ರಾಂಪ ಯವರು ಸರ್ಕಾರದಿಂದ ಜಾಗ ಮತ್ತು ಮನೆಯನ್ನು ನಿರ್ಮಾಣ ಮಾಡಿ ಕೊಡಬೇಕು. ಅಂಥವರಿಗೆ ವಸತಿ ಸಚಿವರ ಬಳಿ ಅತಿ ಶೀಘ್ರದಲ್ಲಿ ಮನೆಗಳನ್ನು ಮಂಜೂರು ಮಾಡಿಸುತ್ತೇನೆ. ಕಳೆದುಕೊಳ್ಳುವ ಜಾಗಕ್ಕೆ ಉತ್ತಮ ಬೆಲೆ ನೀಡಲಾಗುವುದು ಎಂದರು.

ಹುಚ್ಚವನಹಳ್ಳಿ ಕೆರೆಗೆ ಅಳವಡಿಸಿರುವ ಸಾಸ್ವೆಹಳ್ಳಿ ಏತ ನೀರಾವರಿಯ ಪೈಪ್‌ಲೈನ್‌ ಆಳವಡಿಕೆಯಲ್ಲಿ ಲೋಪವಾಗಿದೆ ಎಂದು ದೂರಿದಾಗ ಸಂಬಂಧಿತ ಇಂಜಿನೀಯರ್‌ ಅವರನ್ನು ಕಚೇರಿಗೆ ಕರೆತನ್ನಿ. ನಾವು ಚರ್ಚಿಸುತ್ತೇವೆ. ರೈತರ ಖಾತೆಗೆ ಕೃಷಿ ಸಮ್ಮಾನ್‌ ಯೋಜನೆಯ ಆರು ಸಾವಿರ ಹಣ ಜಮೆಯಾಗಿದೆ. ಮೆಕ್ಕೆಜೋಳ ದರ ಕುಸಿತದಿಂದ ರಾಜ್ಯ ಬಜೆಟ್‌ನಲ್ಲಿ ಆವರ್ತ ನಿಧಿ  ತೆರೆಯಲಾಗುತ್ತಿದೆ ಎಂದರು.

ಶಾಸಕ ಪ್ರೊ| ಎನ್‌. ಲಿಂಗಣ್ಣ ಮಾತನಾಡಿ, ನಿಮ್ಮೆಲ್ಲರ ಆಸೆಯಂತೆ ಈಗ ರಸ್ತೆ ಆಗಲೀಕರಣ ಕೆಲಸ ನಡೆಯುತ್ತಿದೆ. ಎಲ್ಲರು ಸಹಕರಿಸಬೇಕು ಎಂದರು.

Advertisement

ಗಾಯತ್ರಿ ಗ್ರಾಮೀಣ ಸಂಸ್ಥೆಯ ಕೆ.ಪಿ. ಮರಿಯಚಾರ್‌, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹೆದ್ನೆ ಮುರುಗೇಂದ್ರಪ್ಪ, ಮುಖಂಡ ಪುಟ್ಟರಂಗಾಸ್ವಾಮಿ ಮಾತನಾಡಿದರು. ಜಿಪಂ ಸದಸ್ಯ ನಟರಾಜ್‌, ತಾಪಂ ಸದಸ್ಯ ನಾಗರಾಜು ಉಮೇಶ್‌ನಾಯ್ಕ, ಗ್ರಾಪಂ ಸದಸ್ಯೆ ರೂಪ ರಾಘುರಾಮ್‌, ಸದಸ್ಯರಾದ ಮಲ್ಲಿಕಾರ್ಜುನ, ರುದ್ರೇಶ್‌ ರಾಜಶೇಖರ್‌, ದ್ರಾಕ್ಷಯಣಮ್ಮ, ಗಿರಿಜ, ಕೃಷಿ ಪತ್ತಿನ ಸಂಘದ ಸದಸ್ಯ ಮೋಹನ್‌ ಪೂಜಾರ್‌, ಮುಖಂಡರಾದ ಹೆಬ್ಟಾಳು ಮಹೇಂದ್ರ, ಮುರಿಗೇಂದ್ರಪ್ಪ, ಹನುಮಂತನಾಯ್ಕ, ಬಸವಪೂರ ರಮೇಶ್‌, ಹೆದೆ° ದಿವಾಕರ ಶ್ರೀನಿವಾಸ, ಗೋಪಾಲ ಪೂಜರ್‌, ಅಶೋಕ್‌, ಮಹಾಂತೇಶ್‌, ಗೌಡ್ರ ಅಶೋಕ, ನಿಂಗಪ್ಪ, ಬಾಲರಾಜು, ಸಿ.ಪಿ.ಐ ಗುರು ಬಸವರಾಜು, ಪಿ.ಎಸ್‌.ಐ ವೀರಭದ್ರಪ್ಪ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next