Advertisement

ಮಯ್ಯ ಆತ್ಮಹತ್ಯೆ ಪ್ರಕರಣ: 11 ಅಧಿಕಾರಿಗಳ ವಿರುದ್ಧ ಎಫ್ಐಆರ್‌

05:31 AM Jul 09, 2020 | Lakshmi GovindaRaj |

ಬೆಂಗಳೂರು: ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ ಮಾಜಿ ಮುಖ್ಯ ಕಾರ್ಯನಿರ್ವಣಾಧಿಕಾರಿ, ವಂಚನೆ ಪ್ರಕರಣದ ಪ್ರಮುಖ ಆರೋಪಿ ವಾಸುದೇವ ಮಯ್ಯ ಆತ್ಮಹತ್ಯೆ ಕೇಸ್‌ಗೆ ಹೊಸ ತಿರುವು ಸಿಕ್ಕಿದ್ದು, ರಾಘವೇಂದ್ರ ಸಹಕಾರ ಬ್ಯಾಂಕ್‌ ಹಾಲಿ ಸಿಇಒ ಸೇರಿ 11ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.

Advertisement

ವಾಸುದೇವ ಮಯ್ಯ ಅವರ ಪುತ್ರಿ ರಶ್ಮಿ ಅವರು ನೀಡಿರುವ ದೂರಿನಲ್ಲಿ ತಮ್ಮ ತಂದೆ ಅವರ  ಬಳಿ ಬ್ಯಾಂಕ್‌ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಬಲವಂತದಿಂದ ಸಹಿ ತೆಗೆದುಕೊಂಡು ಅವರನ್ನು ವಂಚನೆ ಕೇಸ್‌ನಲ್ಲಿ ಸಿಲುಕಿಸಲಾಗಿದೆ. ಅವರಿಗೆ ಹಾಲಿ ಸಿಇಒ ಸಂತೋಷ್‌ ಕುಮಾರ್‌, ನಿರ್ದೇಶಕರಾದ ರವಿ ಐತಾಳ, ರಾಕೇಶ್‌,  ಶ್ರೀಪಾದ ಹೆಗಡೆ, ಪ್ರಶಾಂತ್‌ ಇನ್ನೂ ಮುಂತಾದವರು ಮಾನಸಿಕ ಕಿರುಕುಳ ನೀಡಿದ್ದಾರೆ.

ಜತೆಗೆ ಅವರ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ದೂರು ಹಾಗೂ ವಾಸುದೇವ ಮಯ್ಯ  ಅವರು ಬರೆದಿಟ್ಟಿದ್ದ ಡೆತ್‌ ನೋಟ್‌ ಆಧರಿಸಿ ಸಂತೋಷ್‌ ಕುಮಾರ್‌, ರವಿ ಐತಾಳ, ರಾಕೇಶ್‌, ತಲ್ಲಂ, ರಘುನಾಥ್‌, ರಾಕೇಶ್‌, ಪ್ರಶಾಂತ್‌, ಶಮಿನ್ಸ್‌, ಕುಮರೇಶ್‌, ರೆಡ್ಡಿ ಬ್ರದರ್ಸ್‌ ಸೇರಿದಂತೆ 11 ಮಂದಿ ವಿರುದ್ಧ ಸುಬ್ರಮಣ್ಯ ಪುರ ಠಾಣೆಯಲ್ಲಿ  ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜು.6 ರಂದು ವಾಸುದೇವ ಮಯ್ಯ, ಸುಬ್ರಹ್ಮಣ್ಯಪುರದ ಚಿಕ್ಕಲಸಂದ್ರದ ಪೂರ್ಣಪ್ರಜ್ಞಾ ಲೇಔಟ್‌ನ ಸಂಬಂಧಿಕರ ಮನೆಯಿಂದ  ಹೋಗುವಾಗ ಮಾರ್ಗ ಮಧ್ಯೆ ಕಾರಿನಲ್ಲಿ ಮದ್ಯಕ್ಕೆ ವಿಷ ಬೆರೆಸಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದರು. ಅದಕ್ಕೂ ಮೊದಲು ಬರೆದಿಟ್ಟಿದ್ದ 12 ಪುಟಗಳ ಡೆತ್‌ ನೋಟ್‌ ಕೂಡ ಪೊಲೀಸರಿಗೆ ಸಿಕ್ಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next