Advertisement

ಬಿಲ್ಲವ ಯುವಕರು ಶಕ್ತಿಯಾಗಲಿ: ಉಮಾನಾಥ

11:29 PM Jul 02, 2019 | mahesh |

ಉಪ್ಪಿನಂಗಡಿ: ನಾರಾಯಣ ಗುರುಗಳ ತತ್ತ್ವಾದರ್ಶದಂತೆ ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂದ ಬಲಯುತರಾಗಿ ಎನ್ನುವ ಸಂದೇಶವನ್ನು ನಮ್ಮ ಜೀವನದಲ್ಲಿ ಅಳ ವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುದರ ಜತೆಗೆ ಬಿಲ್ಲವ ಯುವಕರು ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಅವರು ತಿಳಿಸಿದರು.

Advertisement

ಸಿ.ಎ. ಬ್ಯಾಂಕಿನ ಸಂಗಮ ಕೃಪಾ ಸಭಾಂಗಣದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಉಪ್ಪಿನಂಗಡಿ ಘಟಕದ 2019-20ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಖ್ಯಾ ಬಲದಲ್ಲಿ ಬಲಿಷ್ಠವಾಗಿರುವ ನಾವು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದೇವೆ. ಸಾಮಾಜಿಕ, ರಾಜಕೀಯ, ಧಾರ್ಮಿಕವಾಗಿ ನಮ್ಮ ಸ್ಥಾನಮಾನ ಪಡೆಯುವಲ್ಲಿ ಯುವ ವಾಹಿನಿಯಂತಹ ಸಂಘಟ ನೆಯ ಯುವಕರಿಂದ ಮಾತ್ರ ಸಾಧ್ಯ ಎಂದರು.

ಉಪ್ಪಿನಂಗಡಿ ಘಟಕದ ಅಧ್ಯಕ್ಷ ಅಜಿತ್‌ ಕುಮಾರ್‌ ಪಾಲೇರಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಉಪ್ಪಿನಂಗಡಿ ಘಟಕದ 2018-19ನೇ ಸಾಲಿನ ಪ್ರಗತಿಯ ಮುನ್ನೋಟ ಯುವದರ್ಶಿನಿ ಕಿರು ಹೊತ್ತಿಗೆಯನ್ನು ಮಡಂತ್ಯಾರಿನ ಉದ್ಯಮಿ ಯೋಗೀಶ್‌ ಕಡ್ತಿಲ ಬಿಡುಗಡೆಗೊಳಿಸಿದರು. ಕೇಂದ್ರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಪ್ರಮಾಣ ವಚನ ಬೋಧಿಸಿದರು.

ಪೊಲೀಸ್‌ ನಿರೀಕ್ಷಕ ಸುದರ್ಶನ್‌, ಚಲನಚಿತ್ರ ನಟಿ ಅಂಕಿತಾ ಪಟ್ಲ, ಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ| ರಾಜಾರಾಮ್‌ ಕೆ.ಬಿ., ಘಟಕದ ಗೌರವ ಸಲಹೆಗಾರರಾದ ಗೋಪಾಲ ಸುವರ್ಣ, ವರದ್ರಾಜ್‌ ಎಂ., ನೂತನ ಅಧ್ಯಕ್ಷ ಡಾ| ಆಶಿತ್‌ ಎಂ.ವಿ., ಕಾರ್ಯದರ್ಶಿ ಅನಿಲ್ ಕುಮಾರ್‌ ದಡ್ಡು, ನೂತನ ಕಾರ್ಯದರ್ಶಿ ಪುನೀತ್‌ ದಾಸರಮೂಲೆ ಉಪಸ್ಥಿತರಿದ್ದರು. ಡಾ| ಸದಾನಂದ ಕುಂದರ್‌ ಪ್ರಸ್ತಾವನೆಗೈದರು. ಪದಾಧಿಕಾರಿಗಳ ಪರಿಚಯವನ್ನು ಚುನಾವಣಾಧಿಕಾರಿ ಅಶೋಕ್‌ ಕುಮಾರ್‌ ಪಡ್ಪು ವಾಚಿಸಿದರು. ಡೀಕಯ್ಯ ಗೌಂಡತ್ತಿಗೆ ಸ್ವಾಗತಿಸಿ, ಪುನೀತ್‌ ದಾಸರಮೂಲೆ ವಂದಿಸಿದರು. ಲೋಕೇಶ್‌ ಬೆತ್ತೋಡಿ ನಿರೂಪಿಸಿದರು. ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ನಿವೃತ್ತ ಪೊಲೀಸ್‌ ನಿರೀಕ್ಷಕ ಸುದರ್ಶನ್‌, ನಿವೃತ್ತ ದೈಹಿಕ ಶಿಕ್ಷಕ ಬೊಮ್ಮಯ ಬಂಗೇರ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಅವರನ್ನು ಸಮ್ಮಾನಿಸಲಾಯಿತು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಿ ಅಭಿನಂದಿಸಲಾಯಿತು. 2018-19ನೇ ಸಾಲಿನ ಶ್ರೇಷ್ಠ ಸಾಧನೆಗಾಗಿ ಅಜಿತ್‌ ಕುಮಾರ್‌ ದಂಪತಿಯನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.

ಸಾಧಕರಿಗೆ ಅಭಿನಂದನೆ
ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌, ನಿವೃತ್ತ ಪೊಲೀಸ್‌ ನಿರೀಕ್ಷಕ ಸುದರ್ಶನ್‌, ನಿವೃತ್ತ ದೈಹಿಕ ಶಿಕ್ಷಕ ಬೊಮ್ಮಯ ಬಂಗೇರ ಮತ್ತು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಅವರನ್ನು ಸಮ್ಮಾನಿಸಲಾಯಿತು. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಿ ಅಭಿನಂದಿಸಲಾಯಿತು. 2018-19ನೇ ಸಾಲಿನ ಶ್ರೇಷ್ಠ ಸಾಧನೆಗಾಗಿ ಅಜಿತ್‌ ಕುಮಾರ್‌ ದಂಪತಿಯನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next