Advertisement
ರಾಮಮಂದಿರ ನಿರ್ಮಾಣಕ್ಕೆ ದೀರ್ಘಾವಧಿ ತಗಲಿದ್ದು ಯಾಕೆ ಎಂಬುದು ನನ್ನನ್ನು ಸದಾ ಕಾಡುತ್ತಿತ್ತು. ಅದಕ್ಕೆ ರಾಮನ ಜನ್ಮ ಕುಂಡಲಿಯ ಸಮಸ್ಯೆಯೇ ಕಾರಣವಾಗಿರಬೇಕು ಎಂದೆನಿಸುತ್ತದೆ. ಯಾಕೆಂದರೆ, ಲೋಕ ಕಲ್ಯಾಣಕ್ಕಾಗಿ ರಾಮನ ಜನ್ಮವಾಗಿದ್ದರೂ, ಆತ ಶಿಕ್ಷಣ ಹಾಗೂ ಸಿಂಹಾಸನ ಏರುವ ಸಂದರ್ಭದಲ್ಲಿ ಸುದೀರ್ಘ ವರ್ಷ ವನವಾಸ ಅನುಭವಿಸಬೇಕಾಯಿತು. ಇದೇ ರೀತಿ, ರಾಮಮಂದಿರ ನಿರ್ಮಾಣಕ್ಕೂ ಸಮಯ ತಗುಲಿದ್ದಾಗಿರಬೇಕು.
Related Articles
Advertisement
ಹಿಂದೂಗಳ ಮೇಲೆ ಆಕ್ರಮಣ ಸಲ್ಲದು: ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೋಕ್ಜೆ ಮಾತನಾಡಿ, ನಮ್ಮದೇ ಹಿಂದೂ ಧರ್ಮದೊಳಗೆ ಇದ್ದವರನ್ನು ನಮ್ಮಿಂದ ಬೇರ್ಪಡಿಸಿ ಮತಾಂತರ ಮಾಡುವುದನ್ನು ನಾವು ತಡೆಯಲು ಪೂರ್ಣವಾಗಿ ಸಾಧ್ಯವಾಗಿಲ್ಲ. ಧರ್ಮ ನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂಗಳ ಮೇಲೆ ಆಕ್ರಮಣಕಾರಿ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಇದನ್ನು ವಿರೋಧಿಸಬೇಕಾಗಿದೆ. ಆದರೆ, 2014ರಿಂದೀಚೆಗೆ ಸಂಕುಚಿತವಾಗಿದ್ದ ಹಿಂದೂ ಧರ್ಮದವರು ತಮ್ಮನ್ನು ತಾವು ಹಿಂದೂಗಳೆಂದು ಕರೆಸಿಕೊಳ್ಳಲು ಹೆಮ್ಮೆ ಪಡುವಂತಾಗಿದೆ. ಇದು ವಿಎಚ್‌ಪಿಯ ಶಕ್ತಿ ಸಾಮರ್ಥ್ಯದಿಂದ ಸಾಧ್ಯವಾಗಿದೆ. ಜನಜಾಗೃತಿಯ ಮೂಲಕ ಹಿಂದೂಗಳ ಭಾವನೆಗಳಿಗೆ ಮಾನ್ಯತೆ ದೊರೆಯಬೇಕಾಗಿದೆ ಎಂದರು.
29, 30ನೇ ವಿಧಿ ಸೌಲಭ್ಯ ಸರ್ವರಿಗೂ ಲಭಿಸಲಿಮಂಗಳೂರು: ಸಂವಿಧಾನದ ವಿಧಿ 29 ಮತ್ತು 30ರಡಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ಸರ್ವರೂ ಸಮಾನತೆ ಎಂಬ ನೆಲೆಯಲ್ಲಿ ಈ ವಿಧಿಯು ಎಲ್ಲ ಧರ್ಮಗಳ ಶಿಕ್ಷಣ ಸಂಸ್ಥೆಗಳಿಗೂ ದೊರೆಯಬೇಕೆಂಬ ವಿಚಾರದ ಬಗ್ಗೆ ಮಂಗಳೂರಿನಲ್ಲಿ ನಡೆಯುತ್ತಿರುವ ವಿಹಿಂಪ ಅಂತಾ ರಾಷ್ಟ್ರೀಯ ಬೈಠಕ್‌ನಲ್ಲಿ ಚರ್ಚೆಯಾಗಲಿದೆ ಎಂದು ವಿಹಿಂಪ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಡಾ| ಸುರೇಂದ್ರ ಕುಮಾರ್ ಜೈನ್ ತಿಳಿಸಿದರು. ಸಂಘನಿಕೇತನದಲ್ಲಿ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸೌಲಭ್ಯಗಳು ಈ ದೇಶದಲ್ಲಿ ಧರ್ಮದ ಆಧಾರದಲ್ಲಿ ಸಿಗುವಂತಾಗ ಬಾರದು. ಆದರೆ, 29 ಹಾಗೂ 30ರ ವಿಧಿಯಲ್ಲಿ ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ ಹಕ್ಕುಗಳನ್ನು ಹಿಂಪಡೆಯಬೇಕೆಂದು ನಾವು ಯಾವುದೇ ಕಾರಣಕ್ಕೂ ಬಯಸುವುದಿಲ್ಲ. ಆದರೆ, ಅವುಗಳಿಗೆ ನೀಡಲಾಗುವ ಸೌಲಭ್ಯಗಳು ಎಲ್ಲ ಧರ್ಮಗಳ ಸಂಸ್ಥೆಗಳಿಗೂ ಲಭಿಸಬೇಕೆಂಬುದು ನಮ್ಮ ಆಗ್ರಹ ಎಂದರು. ಗೌರವಧನ ಅಸಮಾನತೆ ವಿರುದ್ಧ ಆಂದೋಲನ: ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಇತರ ಧರ್ಮದ ಗುರುಗಳಿಗೆ ಅಧಿಕ ಗೌರವಧನ ನೀಡಲಾಗುತ್ತದೆ. ಆದರೆ, ಪುರೋಹಿತರು ಮತ್ತು ಪಂಡಿತರಿಗೆ ಈ ಸೌಲಭ್ಯ ಒದಗಿಸದೆ ಹಿಂದೂ ವಿರೋಧಿ ಮತ್ತು ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಈ ಬಗ್ಗೆ ಬೈಠಕ್‌ನಲ್ಲಿ ಚರ್ಚೆ ನಡೆಯಲಿದೆ. ಅಗತ್ಯವಾದಲ್ಲಿ ಈ ಎರಡೂ ರಾಜ್ಯಗಳ ವಿರುದ್ಧ ಆಂದೋಲನ ರೂಪಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಮಹಿಳೆಯರ ಸುರಕ್ಷತೆ: ಮಹಿಳೆಯರ ಸುರಕ್ಷತೆ ಇಂದು ಅತಿ ಪ್ರಮುಖವಾಗಿದೆ. ಸ್ತ್ರೀ-ಪುರುಷರ ಸಂಬಂಧ ವಿಕೃತಿಯಾಗಿ ಮಾರ್ಪಡುತ್ತಿದೆ. ಮಹಿಳೆಯರ ರಕ್ಷಣೆ ಸರಕಾರದ ಕೆಲಸ ಮಾತ್ರವಲ್ಲ. ಶಿಕ್ಷಣ ಸಂಸ್ಥೆಗಳೂ ಈ ಬಗ್ಗೆ ಗಮನ ಹರಿಸಬೇಕಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಮನವಿ ನೀಡುವ ಕುರಿತು ಕ್ರಿಯಾ ಯೋಜನೆಯನ್ನು ಬೈಠಕ್‌ನಲ್ಲಿ ರೂಪಿಸಲಾಗುವುದು ಎಂದು ಹೇಳಿದರು. ಪೌರತ್ವ ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚೆ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡಿ ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಈ ಕುರಿತಂತೆ ಇತರ ಧರ್ಮಗಳ ಮನವೊಲಿಸುವ “ಒಆರ್‌ಪಿ’ ಬಗ್ಗೆಯೂ ಬೈಠಕ್‌ನಲ್ಲಿ ಚರ್ಚೆ ಆಗಲಿದೆ. ಆದಿವಾಸಿಗಳನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ಕಾರ್ಯವನ್ನು ಬ್ರಿಟಿಷರು ಆರಂಭಿಸಿದ್ದರು. ಆದಿವಾಸಿಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದವರು. ಆದರೆ, ವ್ಯವಸ್ಥಿತ ಷಡ್ಯಂತ್ರದಿಂದಾಗಿ ಅವರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಲಾಗಿದೆ. ಇದೀಗ ಅವರನ್ನು ಮನವೊಲಿಸುವ ಕಾರ್ಯ ಆಗಬೇಕಾಗಿದೆ. ಇದೇ ವೇಳೆ, ಮತಾಂತರದ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಯಲಿದೆ ಎಂದರು.