Advertisement
ಈ ನೆಲೆಗಟ್ಟಿನಲ್ಲಿ ನಮ್ಮ ಸಂವಿಧಾನದ ಗೆರೆಯೊಳಗೆ ಮೂಡಿನಿಂತ ಸಮಗ್ರ ವಿಧಿ ವಿಧಾ ನಗಳ ವಿನ್ಯಾಸ, ಒಳ ಹೊರಗುಗಳನ್ನು ಎಳೆ ಎಳೆಯಾಗಿ ರೂಪಿಸಬಹುದು. ಮೊದಲಿಗೆ ಕೇಂದ್ರದ ಲೋಕಸಭೆ ಅಂತೆಯೇ 28 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಆಯ್ಕೆಯ ಲಂಬ ವ್ಯವಸ್ಥೆಯ ಚುನಾವಣ ಪದ್ಧತಿ ನಮ್ಮದು. ಇದರೊಂದಿಗೆ ನಗರ, ಜಿಲ್ಲೆ, ತಾಲೂಕು, ಪಂಚಾಯತ್‌ಗಳ ಅಪರಿಮಿತ ಚುನಾವಣ ಜಾಲ ಹೆಣೆದು ನಿಂತ ಭಾರತ ನಮ್ಮದು.
Related Articles
Advertisement
ಇವೆಲ್ಲ ಯಾವುದೋ “ಕಾಗೆ-ಗುಬ್ಬಚ್ಚಿ’ಯ ಕಥೆಯಲ್ಲ; ಬದಲಾಗಿ ವಿಶ್ವದ ಬೃಹತ್ ಖ್ಯಾತಿಯ ಚುನಾಯಿತ ಪ್ರತಿನಿಧಿತ್ವದ ಭಾರತದ ಕೆಳಮನೆ, ಲೋಕಸಭೆ (House of People) ತೆರೆದಿಟ್ಟ, ಅಳಿಸಲಾಗದ ರಾಜಕೀಯ ಚರಿತ್ರೆ.ಲೋಕಸಭೆಯ ನಿಗದಿತ ಅವಧಿ 5 ವರ್ಷಗಳು. ಕೇವಲ ತುರ್ತು ಪರಿಸ್ಥಿತಿ (Emergency) ರಾಷ್ಟ್ರವ್ಯಾಪಿ ಜಾರಿಗೆ ಇರುವಲ್ಲಿ ಮಾತ್ರ ಒಮ್ಮೆಗೆ ಒಂದು ವರ್ಷ ಅವಧಿ ವಿಸ್ತರಣೆಗೆ ಅವಕಾಶ ಸಂವಿಧಾ ನದತ್ತವಾಗಿ 83(2)ನೇ ವಿಧಿಯ ಅನ್ವಯ ಪಡೆಯಲಾಗಿದೆ. ಕೇಂದ್ರದ ಈ ಲೋಕ ಸಭೆಯನ್ನೇ ಅಕ್ಷವಾಗಿ ಆಧರಿಸಿ, ಎಲ್ಲ 28 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇ ಶಗಳ ಚುನಾವಣೆಗಳ “ಸೌರವ್ಯೂಹ’ ನಿರ್ಮಿ ಸುವಿಕೆಯು ಸಾಧ್ಯವೇ ಎಂಬುದು ಇಂದಿನ ಹಾಗೂ ಮುಂದಿನ ಪ್ರಶ್ನಾರ್ಥಕ ಚಿಹ್ನೆ. ಮಾತ್ರ ವಲ್ಲ, ಈ ಎಲ್ಲ ಕೇಂದ್ರ ಹಾಗೂ ರಾಜ್ಯಗಳ ಚುನಾವಣೆಗಳನ್ನು ಏಕದಾರದಲ್ಲಿ ಪೋಣಿ ಸುವ ಸಾಂವಿಧಾನಿಕ ಹಗ್ಗ (Constitutional Rope) ಹೇಗೆ ತಾನೆ ಹೊಸೆಯೋಣ?, ಇಲ್ಲಿ ಕೇಂದ್ರದ ಲೋಕಸಭೆಯ ಮುಂದಿನ ದಿನಗಳ ಅಲ್ಪಾಯುಷ್ಯದ ಸಾಧ್ಯತೆಗಳನ್ನು ನಿವಾರಿಸಲು ಸಂವಿಧಾನಕ್ಕೆ ಹೇಗೆ, ಎಲ್ಲಿಂದ ತಿದ್ದುಪಡಿಗೆ ಅಡಿ ಇಡೋಣ?, ಅದೇ ರೀತಿ ಒಂದೆಡೆ ನೆರೆ, ಇನ್ನೊಂದೆಡೆ ಬರ ಇರುವಂತೆ ಉತ್ತರಾ ಖಂಡದಿದ ತಮಿಳುನಾಡಿನ ವರೆಗಿನ, ಗುಜರಾತಿನಿಂದ ಮೇಘಾಲಯದವರೆಗಿನ ವಿಭಿನ್ನ ನೆಲ, ಜಲ, ಗಾಳಿಯ ಈ ವಿಶಾಲ ಭಾರತದ ರಾಜ್ಯ-ರಾಜಕೀಯ ಕಂಪನಕ್ಕೂ ಹೇಗೆ ಸಾಂವಿಧಾನಿಕ ತಿದ್ದುಪಡಿಯ ಧೃಢ ಸ್ತಂಭ ನೆಟ್ಟು ಬಿಡೋಣ?, 356ನೇ ವಿಧಿ ಯನ್ವಯ “ಯಾವುದೇ ರಾಜ್ಯದಲ್ಲಿನ ಸರಕಾರ ರಾಜ್ಯಾಂಗ ಘಟನೆಯ ಗೆರೆಯೊಳಗೆ ನಡೆಯುತ್ತಿಲ್ಲ’ ಎಂಬುದು ರಾಷ್ಟ್ರಪತಿಯವರಿಗೆ ಮನವರಿಕೆ ಆದರೆ ಅಲ್ಲಿ ಥಟ್ಟನೆ “ರಾಷ್ಟಪತಿಯವರ ಆಳ್ವಿಕೆ’ ಅಪ್ಪಳಿಸಲು ಅವಕಾಶವಿದೆ. ಎಸ್.ಆರ್. ಬೊಮ್ಮಾಯಿ ತೀರ್ಪಿನ ಬಳಿಕ ಮಾತ್ರ ಒಂದಿಷ್ಟು ಈ ವಿಧಿಯ ಬಳಕೆಗೆ (ದುರ್ಬಳಕೆಗೆ) ಸರ್ವೋಚ್ಚ ನ್ಯಾಯಾಲಯ ಕಡಿವಾಣ ಹಾಕಿದೆ. ಆದರೂ ಬರಲಿರುವ ನಾಳೆಗಳ ಚಿತ್ರಣದಲ್ಲಿ, ರಾಷ್ಟ್ರಪತಿಯ ಆಳ್ವಿಕೆ (Presidents Rules) ಒಂದಿನಿತೂ ಗೋಚರಿಸದು ಎಂದುಸುರುವಂತಿಲ್ಲ. ಹೀಗಿರುವಾಗ ದಿಢೀರನೆ ರಾಜ್ಯ ಸರಕಾರ, ಸ್ವಯಂಕೃತ ಅಪರಾಧದಿಂದ, ಪ್ರತಿಸ್ಪರ್ಧಿಗಳ ಶಸ್ತ್ರಕ್ರಿಯೆಯಿಂದ ಅಥವಾ ಸಾಮೂಹಿಕ ರಾಜೀ ನಾಮೆಯಂತಹ ಸಾಧ್ಯತೆಯಿಂದ ಅಥವಾ ಕಾನೂನು ಭಂಗದ ಪರಮಾವಧಿಯಿಂದ ಅಧ್ಯಕ್ಷರ ಆಳ್ವಿಕೆಗೆ ಕೇವಲ ವರ್ಷವೊಂದರ ಒಳಗೇ ತುತ್ತಾದರೆ, ಆಗ ಪರಿಹಾ ರವಾದರೂ ಏನು?, “ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳೂ ಇಲ್ಲ; ಶಾಶ್ವತ ಮಿತ್ರರೂ ಇಲ್ಲ’ ಎಂಬ ಕೌಟಿಲ್ಯ ನೀತಿ ಸಾರ್ವಕಾಲಿಕ ಸತ್ಯ; ಅದೇ ರೀತಿ, ಭವಿಷ್ಯದ ರಾಜಕೀಯ ಗರ್ಭದಲ್ಲಿ ಯಾವುದೇ ಅಸಾಧ್ಯತೆಗಳು ಎಂಬುದು ಹುಟ್ಟುವುದೇ ಇಲ್ಲ. ಇನ್ನು ಒಂದು ಸೂಕ್ಷ್ಮ ಜನಮನ ಆಶಯದ ಬಿಂದು ಇಲ್ಲಿದೆ. ಸಮಗ್ರ ರಾಷ್ಟ್ರದ ಆಶಯ ರಾಜ್ಯಗಳ ಬಗೆಗಿನ ಬಯಕೆಗಳು ಹಾಗೂ ಸ್ಥಳೀಯ ಬೇಕು-ಬೇಡಗಳು- ಇವೆಲ್ಲ ಸಮಾನಾಂತರದಲ್ಲಿ ಚಲಿಸುವ ಚಿಂತನೆಗಳು; ಬದಲಾಗಿ ಏಕತೆಯ ಆಶಾ ರೇಖೆಗಳು ಎಂದೆನಿಸುವುದಿಲ್ಲ. ಒಂದೊಮ್ಮೆ “ಇಂದಿರಾ ಗಾಂಧಿಯವರಿಗೆ ಓಟು ಹಾಕಿ ಬಂದೆ’ ಎಂದು ವಿಧಾನಸಭಾ ಉಮೇದ್ವಾರರಿಗೆ ಮತಹಾಕಿ ಬಂದು ಸಂಭ್ರಮಿಸಿದ ಹಳ್ಳಿಗರನ್ನು ಕಂಡಿದ್ದೇವೆ. ಅದೇ ರೀತಿ ನರೇಂದ್ರ ಮೋದಿಯಂತಹ ನಾಯಕರನ್ನು ಆಧರಿಸಿ ಮತಗಳಿಕೆಯ ಮಹಾಪೂರ ಬರಲಾರದು ಎನ್ನುವಂತಿಲ್ಲ. ಇಲ್ಲಿ ಮತ ದಾರರಿಗೆ ಚಿಂತನೆ, ಕಾರ್ಯಶೀಲತೆ ಹಾಗೂ ಮತಾಧಿಕಾರ ಚಲಾವಣೆಗೆ ಸುಯೋಗ್ಯ ಭವಿಷ್ಯದ ಅವಕಾಶ (Space)ನೀಡುವಿಕೆಯೂ ಅತ್ಯಗತ್ಯ. ಮಹಾ ಚುನಾವಣೆ ಯಲ್ಲಿ ಕೇವಲ 30-40 ಪ್ರತಿಶತ ಒಟ್ಟು ಮತಗಳನ್ನೂ ಬಾಚಿಕೊಳ್ಳದೇ, 70-80 ಪ್ರತಿ ಶತ ಜಯಶೀಲ ಪ್ರತಿನಿಧಿಗಳನ್ನು ಹೊಂದಿ ಸರಕಾರ ರಚನೆಯ ಸಾಧ್ಯತೆಯ ರಾಜ ಕೀಯ ಮ್ಯಾಜಿಕ್ ಕೂಡ ಘಟಿಸಬಹುದು! ಹೀಗಿರುವಲ್ಲಿ, ರಾಷ್ಟ್ರೀಯ ರಾಜಕೀಯ ಧಾರೆಯ ಯಥಾವತ್ತಾದ ಪ್ರವಾಹಕ್ಕೆ ಅಡ್ಡಿಯೊಡ್ಡದೇ ತನ್ನ ಸ್ವಾಭಾವಿಕ ಹರಿವಿಗೆ ತಡೆ ಇರಿಸದೆ, ಕೇವಲ ಮಾಲಿನ್ಯವನ್ನಷ್ಟೇ ಪ್ರಮಾಣಬದ್ಧವಾಗಿ ತಗ್ಗಿಸಿ, ಮುಂದೆ ಸರಿಯಲು ಬಿಡುವಿಕೆ ಉತ್ತಮ ಎನಿಸೀತು. ಬದಲಾಗಿ ಒಂದು ದೇಶ-ಒಂದು ಚುನಾವಣೆಯ ಸಾಧ್ಯತೆಯನ್ನು ಬಲವಂತವಾಗಿ ಸಾಂವಿಧಾನಿಕ ಚೌಕಟ್ಟಿನೊಳಗೆ ತುರುಕಿಸಿದಾಗ, ಅದೇ ಭವಿಷ್ಯದ ಪ್ರಶ್ನಾರ್ಥಕ ಚಿಹ್ನೆಯಾಗಿ ಮತಯಂತ್ರದಲ್ಲಿ ಧ್ವನಿಸೀತು!. ಚುನಾವಣೆ ಎಂಬುದು ಜನಮನಅರಿಯುವ ಸಾಧನ.ಸಮಗ್ರ ರಾಷ್ಟ್ರದ ಆಶಯ ರಾಜ್ಯಗಳ ಬಗೆಗಿನ ಬಯಕೆಗಳು, ಸ್ಥಳೀಯ ಬೇಕು-ಬೇಡಗಳು- ಇವೆಲ್ಲ ಸಮಾನಾಂತರದಲ್ಲಿ ಚಲಿಸುವ ಚಿಂತನೆಗಳು. -ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು