Advertisement
ತಾಲೂಕಿನ ಸಿಂಗ್ರಿಹಳ್ಳಿ ಗ್ರಾಮದಲ್ಲಿ ಭಾನುವಾರ ಶಿವ ಗಣಪತಿ ದೇವಾಲಯದ ಉದ್ಘಾಟನೆ, ಸಾಮೂಹಿಕ ವಿವಾಹ ಮತ್ತು ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಉದಾಸೀನ ಮಾಡಿದರೆ ಧರ್ಮ ಅವನತಿಯತ್ತ ಸಾಗುತ್ತದೆ. ವೀರಶೈವ ಧರ್ಮಕ್ಕೆ ಜಾತ್ಯತೀತವಾಗಿ ಎಲ್ಲಾ ಸಮುದಾಯಕ್ಕೆ ಮಾರ್ಗದರ್ಶನ, ಸಂಸ್ಕಾರ ನೀಡಿರುವ ಹೆಗ್ಗಳಿಕೆಯಿದೆ. ಭಕ್ತರು ನಿಷ್ಠೆ, ಸಹಿಷ್ಣತೆ, ರಾಷ್ಟ್ರಾಭಿಮಾನ ಮೈಗೂಡಿಸಿಕೊಂಡು ನಡೆದುಕೊಳ್ಳುವುದು ಅವಶ್ಯಕವಾಗಿದೆ. ಧರ್ಮವು ಕೇವಲ ವೇದಿಕೆ ಸಮಾರಂಭಕ್ಕೆ ಸೀಮಿತವಾಗಿಲ್ಲ, ಧಾರ್ಮಿಕ ನುಡಿಯನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಉಜ್ಜಯಿನಿ ಪೀಠಾಧ್ಯಕ್ಷ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ನ್ಯಾಯಾಲಯಗಳು ಇಲ್ಲದ ಸಮಯದಲ್ಲಿ ದೇವಾಲಯಗಳೇ ನ್ಯಾಯಾಲಯಗಳಾಗಿದ್ದವು. ಅಪರಾಧಗಳನ್ನು ಕಡಿಮೆ ಮಾಡುವಂತಹ ಸಾಮರ್ಥ್ಯ ದೇವಸ್ಥಾನಗಳಿಗಿದೆ.
Related Articles
Advertisement
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ನವ ದಂಪತಿಗಳಿಗೆ ಮಠಾಧೀಶರ ಆಶೀರ್ವಾದ ಸಿಗುವುದರಿಂದ ಯೋಗ ಪ್ರಾಪ್ತಿಯಾಗುತ್ತದೆ. ದೇವಸ್ಥಾನ ಉದ್ಘಾಟನೆ ಮೂಲಕ ನವ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ನಿಜಕ್ಕೂ ಧನ್ಯರು ಎಂದರು.
ಶ್ರೀಗಳ ಸಾನ್ನಿಧ್ಯದಲ್ಲಿ 7 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಂದಿಹಳ್ಳಿ ಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಿಂಗ್ರಿಹಳ್ಳಿ ಕೊಟ್ರೇಶ್ವರ ಸ್ವಾಮೀಜಿ, ನೀಲಗುಂದ ಚನ್ನಬಸವ ಸ್ವಾಮೀಜಿ, ಐನಹಳ್ಳಿ ಮಹೇಶ್ವರ ಸ್ವಾಮೀಜಿ, ಲೆಕ್ಕದೇವರ ಮಠ ಬಸವರಾಜಪ್ಪ, ಚಿರಸ್ತಹಳ್ಳಿ ಮಲ್ಲಿಕಾರ್ಜುನ್ ಕಲ್ಮಠ, ಗ್ರಾ.ಪಂ ಅಧ್ಯಕ್ಷ ಮಂಜ್ಯನಾಯ್ಕ, ದೇವಸ್ಥಾನ ಸಮಿತಿ ಜಯಪ್ರಕಾಶ್ ಬಣಕಾರ್, ದೇವೇಂದ್ರಪ್ಪ, ಕೋಟ್ರಯ್ಯಸ್ವಾಮಿ, ಬಸವರಾಜಪ್ಪ, ವೀರಯ್ಯ, ಸೋಮಪ್ಪ, ವಿರಭದ್ರಪ್ಪ, ಬಸಪ್ಪ, ಸಿದ್ದಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.