Advertisement

ಚಾ.ನಗರ ದಸರಾ ಮಹೋತ್ಸವ ಯಶಸ್ವಿಯಾಗಲಿ

10:06 PM Oct 02, 2019 | Lakshmi GovindaRaju |

ಚಾಮರಾಜನಗರ: ನಮ್ಮ ಸಂಸ್ಕೃತಿ ಹಾಗೂ ಪರ‌ಂಪರೆಯ ದ್ಯೋತಕವಾಗಿ ದಸರಾ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ. ಚಾಮರಾಜನಗರ ದಸರಾ ಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಹಾರೈಸಿದರು.

Advertisement

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾಗಿ ನಗರದಲ್ಲೂ ಹಮ್ಮಿಕೊಳ್ಳಲಾಗಿರುವ ನಾಲ್ಕು ದಿನಗಳ ಚಾಮರಾಜನಗರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿರುವ ವೇದಿಕೆಯಲ್ಲಿ ನಗಾರಿ ಬಾರಿಸುವ ಮೂಲಕ ಅವರು ಚಾಲನೆ ನೀಡಿದರು.

ಮಹೋತ್ಸವವನ್ನು ಸಂಭ್ರಮಿಸಿ: ಇತಿಹಾಸ ಪ್ರಸಿದ್ಧ ಚಾಮರಾಜನಗರ ದಸರಾ ಮಹೋತ್ಸವವನ್ನು ಉದ್ಘಾಟಿಸಿರುವುದು ನನ್ನ ಪುಣ್ಯ. ಈ ಬಾರಿ ದಸರಾ ಕಾರ್ಯಕ್ರಮಗಳನ್ನು ಎಲ್ಲಾ ವಯೋಮಾನದವರಿಗೂ ಇಷ್ಟವಾಗುವ ಮಾದರಿಯಲ್ಲಿ ಏರ್ಪಡಿಸಲಾಗಿದೆ. ಜನರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ದಸರಾ ಮಹೋತ್ಸವವನ್ನು ಸಂಭ್ರಮಿಸಬೇಕು ಎಂದರು.

ವಿಶೇಷ ವಿದ್ಯುತ್‌ ದೀಪಾಲಂಕಾರ: ದಸರಾ ಸಮಿತಿ ಉಪಾಧ್ಯಕ್ಷ ಹಾಗೂ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿ, ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿವಿಧ, ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಹಾರ ಮೇಳವನ್ನು ಪ್ರಪ್ರಥಮ ಬಾರಿಗೆ ಏರ್ಪಡಿಸಲಾಗಿದೆ. ಜತೆಗೆ ಮಹಿಳಾ ದಸರಾ, ನಾಟಕೋತ್ಸವ ಹಾಗೂ ವಸ್ತುಪ್ರದರ್ಶನದಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಶೇಷವಾಗಿ ವಿದ್ಯುತ್‌ ದೀಪಾಲಂಕಾರವನ್ನು ಸಹ ನಗರದಲ್ಲಿ ಮಾಡಲಾಗಿದೆ ಎಂದರು. ಶಾಸಕ ಎನ್‌. ಮಹೇಶ್‌ ಮಾತನಾಡಿ, ಚಾಮರಾಜನಗರ ದಸರಾ ಮಹೋತ್ಸವ ಈ ಬಾರಿ ವೈವಿಧ್ಯತೆಯಿಂದ ಕೂಡಿದೆ. ಇದು ನಾಡಹಬ್ಬ. ದಸರಾ ನಮ್ಮ ನಾಡಿನ ಪರಂಪರೆಯಾಗಿದೆ. ಅದನ್ನು ನಾವು ಮುಂದುವರೆಸಿಕೊಂಡು ಹೋಗಬೇಕು ಎಂದರು.

Advertisement

ದಸರಾ ನಮ್ಮ ಸಂಸ್ಕೃತಿಯ ಪರಂಪರೆ: ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ದಸರಾ ನಮ್ಮ ಸಂಸ್ಕೃತಿಯ ಪರಂಪರೆಯಾಗಿದೆ. ಅದನ್ನು ಜನರ ಆಶಯ, ಅಭಿರುಚಿಗೆ ತಕ್ಕಂತೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ‌ ಕೆ.ಎಸ್‌.ಮಹೇಶ್‌, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಜಿ. ಬಸವಣ್ಣ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ ಆನಂದ್‌ಕುಮಾರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌. ನಾರಾಯಣ್‌ರಾವ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಂದನ್‌ಶೆಟ್ಟಿ ಗಾಯನ: ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ನಡೆದ ಕನ್ನಡದ ರ್ಯಾಪ್‌ ಗಾಯಕ ಚಂದನ್‌ಶೆಟ್ಟಿ ಅವರ ಗಾಯನ ಕಾರ್ಯಕ್ರಮ ಜನರನ್ನು ರಂಜಿಸಿತು. ಕಿರುತೆರೆ ನಿರೂಪಕಿ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next