Advertisement

ಸಂಸ್ಕಾರದಿಂದ ಕೂಡಿರಲಿ ನಮ್ಮ ಬದುಕು

12:12 AM Oct 06, 2023 | Team Udayavani |

ಆಚಾರ್ಯಾತ್‌ ಪಾದಮಾದತ್ತೇ
ಪಾದಂ ಶಿಷ್ಯ ಸ್ವಮೇಧಯಾ
ಪಾದಂ ಸಬ್ರಹ್ಮಚಾರಿಭ್ಯಃ
ಪಾದಂ ಕಾಲಕ್ರಮೇಣ ಚ ||

Advertisement

ಜ್ಞಾನವನ್ನು ಶಿಕ್ಷಕರಿಂದ ನಾಲ್ಕನೇ ಒಂದು, ಸ್ವಂತ ಬುದ್ಧಿವಂತಿಕೆಯಿಂದ ನಾಲ್ಕನೇ ಒಂದು, ಸಹಪಾಠಿಗಳಿಂದ ನಾಲ್ಕನೇ ಒಂದು ಮತ್ತು ನಾಲ್ಕನೇ ಒಂದು ಸಮಯದೊಂದಿಗೆ ಪಡೆಯಬಹು ದೆಂಬುದು ಸುಭಾಷಿತದ ಅರ್ಥ.

ಸಂಸ್ಕಾರ ಎಂಬುದು ಎಲ್ಲಿಂದ ಆರಂ ಭವಾಗಬೇಕೆಂದರೆ ಅದು ಶಿಕ್ಷಣ, ಜ್ಞಾನ ಕ್ಕಿಂತ ಮೊದಲೇ ಹುಟ್ಟುತ್ತದೆ. ಮನಸ್ಸಿನಲ್ಲಿ ಹುಟ್ಟಿ ಕಾರ್ಯದಲ್ಲಿ ಪ್ರಸ್ತುತಿ ಯಾಗುತ್ತದೆ.

ಸಂಸ್ಕಾರ ಎಂದರೇನು?
ಮನುಷ್ಯ ಕಾಣುವ ಮತ್ತು ಗ್ರಹಿ ಸುವ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಪಡಿ ಯಚ್ಚು ಅವನ ಆತ್ಮ ಮತ್ತು ಮನಸ್ಸಿನ ಮೇಲೆ ಮೂಡುತ್ತವೆ. ತತ್‌ ಪರಿಣಾಮ ಅದು ಅವನ ಮುಂದಿನ ದಿನಚರಿಗಳಲ್ಲಿ ಗೋಚರಿಸಲ್ಪಡುತ್ತದೆ. ಆ ನಡವಳಿಕೆಗಳೇ ಸಂಸ್ಕಾರ.

ಸಂಸ್ಕಾರದ ಆರಂಭ ಯಾವಾಗ?
ಪುರಾತನ ವೇದಗಳ ಪ್ರಕಾರ (ಇಲ್ಲಿ ವೇ ದ ಗ್ರಂಥಗಳಲ್ಲ, ಜ್ಞಾನ ಅಷ್ಟೇ.)ಮನುಷ್ಯ ಜನ್ಮದಲ್ಲಿ ಹುಟ್ಟಿನಿಂದ ಸಾವಿನ ವರೆಗೆ 16 ಸಂಸ್ಕಾರಗಳು. ಅದರಲ್ಲಿ 9 ಸಂಸ್ಕಾರಗಳು ವ್ಯಕ್ತಿಗೆ 3 ವರ್ಷ ತುಂಬುವಾಗಲೇ ಮುಗಿ ಯುತ್ತದೆ. ಅಂದರೆ ಗರ್ಭಧಾನ ಸಂಸ್ಕಾರ ದಿಂದಲೇ ಸಂಸ್ಕಾರದ ಆರಂಭ. ಶಿಕ್ಷಣ ಮತ್ತು ಜ್ಞಾನ ಹುಟ್ಟುವುದಕ್ಕಿಂತ ಮೊದಲೇ.

Advertisement

ಸಂಸ್ಕಾರ ಯಾಕೆ ಬೇಕು?
ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಗುಣಗಳ ವ್ಯತ್ಯಾಸವನ್ನು ಸಂಸ್ಕಾರವೆಂಬ ಮಾಪನದಿಂದ ಅಳೆಯಬಹುದು. ಹುಟ್ಟು- ಬದುಕು-ಸಾವು ಇವುಗಳು ಎರಡು ವರ್ಗಕ್ಕೂ ಇದೆ. ಆದರೆ ಶ್ರೇಷ್ಠ ಜನ್ಮದ ಸಾರ್ಥಕ್ಯಕ್ಕೆ ಸಂಸ್ಕಾರ ಬೇಕು.

ಸಂಸ್ಕಾರ ಎಲ್ಲಿರುತ್ತದೆ?
ಜೀವ ಪಡೆದ ಪ್ರತಿಯೊಂದು ಜೀವಿ ಗಳಲ್ಲಿ ಹುದುಗಿರುತ್ತದೆ. ಶಿಕ್ಷಣ ಮತ್ತು ಜ್ಞಾನ ದೊರಕಿದಂತೆ, ದೊರಕಿದ ರೀತಿಯಲ್ಲಿ ಪ್ರಸ್ತುತಿಯಾಗುತ್ತದೆ.

ಪುರಾತನ ಮತ್ತು ಆಧುನಿಕ ಸಂಸ್ಕಾರಗಳ ವ್ಯತ್ಯಾಸವೇನು?
ಹಿಂದೆ ಇದ್ದ ಪ್ರೀತಿ, ನಂಬಿಕೆ, ಭಯ, ಗೌರವಯುತ ಬದುಕಿನಲ್ಲಿ ಸಂಸ್ಕಾರ ಸಾರ ಯುತ ನಡವಳಿಕೆಗಳಿಂದಿದ್ದವು. ಪ್ರಸ್ತುತ, ಸಂಸ್ಕಾರಕ್ಕಿಂತ ವ್ಯವಹಾರಿಕ ಜ್ಞಾನದ ಹೆಚ್ಚಳ ಪ್ರೀತಿ, ಗೌರವಗಳನ್ನು ಕೊಂದು ನಿಸ್ಸಾರ ಮತ್ತು ಸಸಾರಯುಕ್ತವಾಗಿದೆ.

ಸಂಸ್ಕಾರ ಮುಕ್ತ ಬದುಕಿನ ಪರಿಣಾಮವೇನು?
ಉಪ್ಪು, ಖಾರವಿಲ್ಲದ ಖಾದ್ಯಗಳಂತೆ. ಜೀವನ ಇದೆಯೋ ಎಂದರೆ ಇದೆ, ಇಲ್ಲ ವೆಂದರೆ ಇಲ್ಲ.
ಇವೆಲ್ಲ ಪ್ರಶ್ನೆಗಳು ಸಂಸ್ಕಾರದ ಪೀಠಿಕೆಯನ್ನು ನಮಗೆ ನೀಡಬಲ್ಲವು. ನಾವು ಸಂಸ್ಕಾರಯುತವಾಗಿ ಬದುಕುತ್ತಿದ್ದೇವೆ ಎಂದಾದಲ್ಲಿ ಅದಕ್ಕೆ ನಮ್ಮ ಹುಟ್ಟಿಗೆ ಕಾರಣ ರಾದ ಜನಕ-ಜನನಿಯರ ಕೊಡುಗೆ ಅಪಾರ ಎಂಬುದನ್ನು ಮರೆಯಾಗದು. ಮಗು ಬೇಕು ಎಂಬ ನಿರ್ಧಾರಕ್ಕೆ ಬಂದ ಕ್ಷಣದಿಂದ ಹೆತ್ತವರ ಮನಸ್ಸಿನ ಪ್ರಭಾವ ಮಗುವಿನ ಮೇಲಾಗುತ್ತದೆ ನೆನಪಿರಲಿ. ಗಂಡು-ಹೆಣ್ಣಿನ ಸಮ್ಮಿಲನ ಶರೀರದ ಸೃಷ್ಟಿಗೆ ಕಾರಣವಾಗಬಹುದೇ ವಿನಃ ಆತ್ಮ- ಮನಸ್ಸಿಗಿಲ್ಲ. ಉತ್ತಮ ಶರೀರದ ಸೃಷ್ಟಿ ಯೊಳಗೆ ಉತ್ತಮ ಆತ್ಮ-ಮನಸ್ಸು ಸೇರಿ ಕೊಳ್ಳುತ್ತದೆ ಅಷ್ಟೇ. ಆದ್ದರಿಂದ ಮಗು ಜನಿಸುವುದಕ್ಕಿಂತ ಮೊದಲೇ ಅಪ್ಪ- ಅಮ್ಮನ ಸಂಸ್ಕಾರದ ಪಡಿಯಚ್ಚು ಗರ್ಭದಲ್ಲೇ ಮೂಡಿರುತ್ತದೆ. (ಅಭಿಮನ್ಯು ಸುಭದ್ರೆಯ ಗರ್ಭದಲ್ಲಿ ಕೃಷ್ಣನ ಕಥೆಯನ್ನು ಗ್ರಹಿಸಿದಂತೆ)

ಆಹಾರ ಸಂಸ್ಕಾರವು (ಅನ್ನಪ್ರಾಶನ) ದೇಹಕ್ಕೊಪ್ಪುವ, ಆಹಾರ ಸಮಯ, ಒಳ್ಳೆ ಯ-ಕೆಟ್ಟ, ಆರೋಗ್ಯಕರ, ಪೌಷ್ಟಿಕತೆಯುಳ್ಳ ಹೀಗೆ ಉತ್ತಮ ಆಹಾರ ಸಂಸ್ಕಾರದ ಜವಾ ಬ್ದಾರಿ ಪೋಷಕರದ್ದು. ಮಗು ಕೇಳು ವುದಕ್ಕಿಂತ ಹೆಚ್ಚು ನಮ್ಮ ದಿನಚರಿಯನ್ನು ಅನುಸರಿಸುತ್ತದೆ. ಇದು ಆಯುಷ್ಯ ಪೂರ್ತಿ ಆರೋಗ್ಯ ಕಾಪಾಡಬಹುದು (ಶರೀರ ಎಲ್ಲವನ್ನೂ ತುಂಬಿಸಿಕೊಳ್ಳೋ ಕಸದ ಡಬ್ಬಿಯಲ್ಲ).
ಮಾತಿನ ಸಂಸ್ಕಾರ ಬಹಳ ಮುಖ್ಯ. ಇಲ್ಲಿ ಮನೆಯ ವಾತಾವರಣ ನೇರ ಪರಿಣಾಮ ಬೀರುತ್ತದೆ. “ಯಥಾ ರಾಜ ತಥಾ ಪ್ರಜಾ’ ಎಂಬಂತೆ ಮಕ್ಕಳು ಅಪ್ಪ ಅಮ್ಮನ ಒಳ್ಳೆಯ ಮತ್ತು ಕೆಟ್ಟ ಎರಡೂ ಮಾತುಗಳನ್ನು ಅಲ್ಪ ಕಾಲದಲ್ಲೇ ಗ್ರಹಿಸಿ ಬಿಡುತ್ತವೆ. ಮಕ್ಕಳಿಗೆ ನಿಯಮಿತ, ಸ್ಪಷ್ಟ, ಸರಳ ಸುಂದರ ಮಾತು ಗಳ ಮೂಲಕ ಸಂಸ್ಕಾರಯುತ ಮಾತು ಕಲಿಸೋಣ. (ಕಟುಕನ ಮತ್ತು ಸಾಧುವಿನ ಮನೆಯ ಗಿಳಿಪಾಠ ನೆನಪಿಗೆ ಬರಲಿ).

ದಕ್ಷತೆ, ಪ್ರಾಮಾಣಿಕತೆಯ ಸಂಸ್ಕಾರಕ್ಕೆ ಬೆಲೆ ಕೊಡೋಣ. ಹೆತ್ತವರ ಮಾನಸಿಕ ತೊಳಲಾಟ ಮಗುವಿಗೂ ಸುಳ್ಳು, ಅಪ್ರ ಮಾಣಿಕ ವ್ಯವಹಾರವನ್ನು ಕಲಿಸಿ ಕೊಡುತ್ತದೆ. ಮಗು ಮನೆಯಲ್ಲಿದೆ ಯೆಂದರೆ ಸ್ವಲ್ಪ ಜಾಗರೂಕತೆಯಿಂದ ವ್ಯವಹರಿಸಿ. (ಉದಾಹರಣೆಗೆ ಮನೆಯಲ್ಲಿದ್ದರೂ ಇಲ್ಲ ಎಂಬುದನ್ನು ಹೇಳಲು ಕಲಿಸಿದಂತೆ) ನಿಮ್ಮ ಸಂಸ್ಕಾರ ನಿಮ್ಮ ಮಗುವಿಗೆ ಬರ ಬೇಕೆ ಕನಿಷ್ಠ 3 ವರ್ಷ ನಿಮ್ಮ ಜತೆಯಿರಲಿ. ಅಪ್ಪ-ಅಮ್ಮ ಇಬ್ಬರೂ ಉದ್ಯೋಗದಾ ತರಾದರೆ ಮಗುವಿಗೆ ಆಯಾ ಅಥವಾ ಬೇಬಿ ಕೇರ್‌ ಪೋಷಕರಾಗುತ್ತದೆೆ. ಆಗ ಮಗುವಿಗೆ ನಿಮ್ಮ ಸಂಸ್ಕಾರ ಬರಲು ಸಾಧ್ಯವೇ? ಆ ಪೋಷಕರ ಸಂಸ್ಕಾರ ಬರುತ್ತದೆ. (ಕಾಸರಕನ ಮರ ನೆಟ್ಟು ಮಾವಿನ ಹಣ್ಣು ಬಯಸಿದಂತೆ) ಯೋಚಿಸಿ.

ಶುದ್ಧತೆಯ ಸಂಸ್ಕಾರ ಚೆನ್ನಾಗಿರಲಿ. ಅದು ಶರೀರ, ಪರಿಸರ, ಮನಸ್ಸು ಮತ್ತು ದೇಹ ದೊಳಗೂ. ಬೇಗ ಏಳುವುದು, ಆಹಾರದ ಸಮಯ ಇವೆಲ್ಲವನ್ನು ರೂಢಿಯಾಗಿಸುವು ದೇ ಬಲು ದೊಡ್ಡ ಸಂಸ್ಕಾರ ಶಿಕ್ಷಣವಲ್ಲವೇ? ವಿನಾಕಾರಣ ಶಿಕ್ಷೆ ಬೇಡ, ಮಗುವಿನ ಸಮಸ್ಯೆಗಳನ್ನು ಸರಿಯಾಗಿ ಕೇಳಿಕೊಳ್ಳಿ. ಇದೇ ನಮ್ಮ ಮಗುವಿನ ಪ್ರಾಮಾಣಿಕತೆ ಮತ್ತು ಧೈರ್ಯ ಕೊಡುವ ಸಾಧನ. ಇಲ್ಲ ವಾದರೆ ಶಿಕ್ಷೆಗೆ ಹೆದರಿ ಎಲ್ಲವನ್ನೂ ಮುಚ್ಚಿ ಡಬಹುದು.

ಇವೆಲ್ಲವುಗಳ ಸರಿ-ತಪ್ಪುಗಳ ಗ್ರಹಿಕೆ ಮಗುವಿನ ಅರಿವಿಗೆ ಬರಲು ವರ್ಷ 25 ಆಗುತ್ತದೆ. ಮತ್ತೆ ಸರಿಪಡಿಸಿಕೊಳ್ಳುವುದು ಕಷ್ಟ. ಒಳ್ಳೆಯ ಉದ್ಯೋಗಕ್ಕಿಂತಲೂ ಮುಖ್ಯ ಒಳ್ಳೆಯ ಸಂಸ್ಕಾರ. ಅದು ಬದುಕಿನ ಹಾದಿ ಯನ್ನೇ ಬದಲಾಯಿಸಬಲ್ಲುದು.

ಬೆಳೆಯ ಸಿರಿ ಮೊಳಕೆಯಲ್ಲಿ, ಆ ಸಿರಿಯ ಕಲ್ಪನೆ ನಮ್ಮ ಜತೆಗಿರಲಿ. ಕೇವಲ ಶಿಕ್ಷಣ ನೀ ಡುವ ಸಂಸ್ಥೆಗಳಿಂದಲೇ ಎಲ್ಲವನ್ನೂ ನಿರೀಕ್ಷಿ ಸುವುದಕ್ಕಾಗುತ್ತದೆಯೇ? ಶಿಕ್ಷಣ ಸಂಸ್ಥೆಯ ಸಂಸ್ಕಾರ ಎಲ್ಲರಿಗೂ ಮಾಡಿಕೊಂಡಿರುವ ಸಂಸ್ಕಾರವಾಗಿರುತ್ತದೆಯಷ್ಟೇ. ಅಲ್ಲಿ ಅಂಕ ದೊರಕಿಸಿಕೊಡುವ ನಿರೀಕ್ಷೆಯನ್ನೂ ನಾವು ಇಟ್ಟಿರುತ್ತೇವೆ. ಅಲ್ಲಿ ಜೀವನ ಮೌಲ್ಯದ ಪರಿಕಲ್ಪನೆ ಅಷ್ಟಕಷ್ಟೇ ಬಿಟ್ಟರೆ ಜೀವನ ಎದು ರಿಸುವ ಕೌಶಲ ಸೀಮಿತವಾಗಿರುತ್ತದೆ.

ಒಟ್ಟಾಗಿ ಸನಾತನ ಭಾರತದ ಶಿಕ್ಷಣ ಪದ್ಧ ತಿಯ ಅಧಿಶೀಲತೆಯು ಅವನತಿಯ ಹಾದಿಯಲ್ಲಿದೆ. ಆಂಗ್ಲರ ಶಿಕ್ಷಣ ನೀತಿ ತೋರಿಕೆಗೆ ಹಿತ ಕೊಡುತ್ತಿದೆ. ಸಾಮಾಜಿಕ ಮನ್ನಣೆಗೆ ಮಣೆ ಹಾಕಿ ಒಳ್ಳೆಯದು, ಕೆಟ್ಟದುಗಳೆಲ್ಲವನ್ನು ವಿಭಾಗಿಸಲಾಗದೆ ಒಂದೇ ವಾದದೊಂದಿಗೆ ಒಪ್ಪಿ, ಅಪ್ಪಿಕೊಂಡಿದ್ದೇವೆ. ಸ್ವಾರ್ಥಕ್ಕಾಗಿ ನಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದೇವೆ. ಇವೆಲ್ಲ ಸಂಸ್ಕಾರವೇ ಎಂಬ ಭಯಾನಕ ಪ್ರಶ್ನೆಯೇಳುತ್ತಿದೆ.

ಯಾವುದಕ್ಕೂ ನಮ್ಮ ಭದ್ರತೆಗೆ ನಮ್ಮ ಸಂಸ್ಕಾರಯುತ ಮಗುವಿರಲಿ.

 ರಾಧಾಕೃಷ್ಣ ಎರುಂಬು

Advertisement

Udayavani is now on Telegram. Click here to join our channel and stay updated with the latest news.

Next