ಬೆಳ್ತಂಗಡಿ : ಕಾರ್ಮಿಕರ ದಿನವನ್ನು ಕಾರ್ಮಿಕರ ಹಬ್ಬವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಕಾರ್ಮಿಕರಿಗೆ ತಮ್ಮ ಹಕ್ಕು, ಸವಲತ್ತುಗಳನ್ನು ರಕ್ಷಿಸಲು ಸ್ಫೂ³ರ್ತಿ ನೀಡುವ ದಿನವೇ ಮೇ ದಿನವಾಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಬುಧವಾರ ಇಲ್ಲಿನ ಅಂಬೇಡ್ಕರ್ ಭವನದ ಬಳಿಯ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ನಡೆದ ಮೇ ದಿನಾಚರಣೆಯನ್ನುದ್ದೇಶಿಸಿ ಮಾತ ನಾಡಿ, ಕಾರ್ಮಿಕರ ಕೂಗು ಸರಕಾರಕ್ಕೆ ತಲುಪಿದಾಗಲೇ ಶ್ರಮಿಕ ವರ್ಗಕ್ಕೆ ಕೆಲ ವೊಂದು ಸವಲತ್ತುಗಳು ಸಿಗಲು ಸಾಧ್ಯ ವಾಗುತ್ತವೆ. ಇದಕ್ಕಾಗಿಯೇ ಕಾರ್ಮಿಕ ಸಂಘಗಳು ಬೆಳೆಯಬೇಕಿದೆ ಎಂದರು.
ಹಿರಿಯ ಕಾರ್ಮಿಕ ಮುಂದಾಳು ಗಳಾದ ಮಂಜುನಾಥ, ಲಕ್ಷ್ಮಣ ಗೌಡ, ಬಿ. ವಿಷ್ಣುಮೂರ್ತಿ ಭಟ್ ಅವರು ತಮ್ಮ ಹೋರಾಟದ ಹಾದಿಗಳನ್ನು ಸ್ಮರಿಸಿ ಕಾರ್ಮಿಕರಿಗೆ ಶುಭಹಾರೈಸಿದರು.
ಪ್ರಮುಖರಾದ ಲೋಕೇಶ್ ಕುದ್ಯಾಡಿ, ನೆಬಿಸಾ, ಜಯರಾಮ ಮಯ್ಯ, ನಾರಾಯಣ ಕೈಕಂಬ, ಡೊಂಬಯ ಗೌಡ, ಧನಂಜಯ ಗೌಡ, ಸಂಜೀವ ನಾಯ್ಕ, ರಾಮಚಂದ್ರ, ಜಯಶ್ರೀ, ಪುಷ್ಪಾ, ಶೇಖರ ವೇಣೂರು, ವೇದಾವತಿ, ಸುಮಿತ್ರ, ಸುಜಾತಾ ಹೆಗ್ಡೆ, ಬಿ.ಎ. ರಝಾಕ್, ದಿನೇಶ್ ಮಾಚಾರು, ದೀಕ್ಷಿತಾ, ಅದಿತಿ, ಕಿರಣಪ್ರಭಾ, ಕುಮಾರಿ, ಮಹೇಶ್, ಚನಿಯಪ್ಪ ಮಲೆಕುಡಿಯ ಮತ್ತಿತರರಿದ್ದರು.
ತಾಲೂಕು ಮುಂದಾಳುಗಳಾದ ದೇವಕಿ ಸ್ವಾಗತಿಸಿ, ಈಶ್ವರಿ ವಂದಿಸಿದರು. ಶ್ಯಾಮರಾಜ ನಿರೂಪಿಸಿದರು.
ಪ್ರೀತಿ-ವಿಶ್ವಾಸವೇ ಸ್ಫೂರ್ತಿ
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಂದಾಳು ಬಿ.ಎಂ. ಭಟ್ ಮಾತನಾಡಿ, ಯಾವ ಉದ್ದೇಶಕ್ಕಾಗಿ ಮೇ ದಿನ ಉದಯಿಸಿತೋ ಅವರ ತ್ಯಾಗ, ಬಲಿದಾನಗಳು ನಮಗೆ ಪ್ರರಣೆಯಾಗಬೇಕಿದೆ. ಬೀಡಿ ಕಾರ್ಮಿಕರ ಡಿಎಗಾಗಿ ಹೋರಾಡುವ ನನ್ನಂತವರಿಗೆ ಕಾರ್ಮಿಕರ ಪ್ರೀತಿ-ವಿಶ್ವಾಸವೇ ಸ್ಫೂರ್ತಿಯಾಗಿದೆ ಎಂದರು.