Advertisement
ಈ ವಿಮಾನದಲ್ಲಿ ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಗರ್ಭಿಣಿಯರು ಸೇರಿದಂತೆ ತುರ್ತಾಗಿ ತಾಯ್ನಾಡಿಗೆ ಆಗಮಿಸಬೇಕಾಗಿ ರುವ 177 ಮಂದಿ ಮಂಗಳೂರಿಗೆ ಬರಲಿದ್ದಾರೆ. ಮೇ 13ರಂದು ದುಬಾೖಯಿಂದ ಮೊದಲ ವಿಮಾನ ಆಗಮಿಸುವ ಕುರಿತು ವೇಳಾಪಟ್ಟಿ ತಯಾರಿಸಲಾಗಿತ್ತು. ಆದರೆ ಈಗ ಒಂದು ದಿನ ಮೊದಲೇ ಮಂಗಳೂರಿಗೆ ಕೊಲ್ಲಿ ರಾಷ್ಟ್ರದಿಂದ ವಿಮಾನ ಆಗಮಿಸುತ್ತಿದೆ. ದುಬಾೖಯಿಂದ ಎರಡನೇ ವಿಮಾನವು ಮೇ 15ರಂದು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.
ಉತ್ತರ ಭಾರತದ ದಿಲ್ಲಿ, ಹರ್ಯಾಣ, ಪಂಜಾಬ್ ರಾಜ್ಯಗಳಲ್ಲಿ ಇರುವ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆ ತರಲು ಮೇ 9ರಂದು ದಿಲ್ಲಿಯಿಂದ ಬೆಂಗಳೂರಿಗೆ ರೈಲು ವ್ಯವಸ್ಥೆ ಮಾಡಲಾಗಿದೆ. ದಿಲ್ಲಿಯ 620 ಮಂದಿ ಸೇರಿದಂತೆ ಒಟ್ಟು 920 ಮಂದಿ ಈ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಸಚಿವ ಡಿವಿಎಸ್ ಉದಯವಾಣಿಗೆ ಮಾಹಿತಿ ನೀಡಿದ್ದಾರೆ. ಲಂಡನ್‌ನಿಂದ ಬೆಂಗಳೂರಿಗೆ ವಿಮಾನ
ವಿದೇಶಗಳಲ್ಲಿರುವ 6,500 ಕನ್ನಡಿಗರು ಭಾರತಕ್ಕೆ ಬರಲು ನೋಂದಾಯಿಸಿದ್ದಾರೆ. ಲಂಡನ್‌ನಿಂದ ಮೊದಲ ವಿಮಾನ ಮೇ 11ರಂದು ಬೆಂಗಳೂರಿಗೆ ಬರಲಿದ್ದು, 250 ಮಂದಿ ಕನ್ನಡಿಗರು ಆಗಮಿಸಲಿದ್ದಾರೆ.