Advertisement

“ಎಕರೆಗೆ ಗರಿಷ್ಠ 10 ಟನ್‌ ಇಳುವರಿಯಿಂದ ಆದಾಯ’

06:21 PM Feb 01, 2020 | Sriram |

ಅಜೆಕಾರು: ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇದರ ವತಿಯಿಂದ ಭೂ ಸಮೃದ್ಧಿ ಯೋಜನೆಯಡಿ ಶಿರ್ಲಾಲು ಗ್ರಾಮದಲ್ಲಿ ಅರ್ಕ ಮಂಗಳ ಮೀಟರ್‌ ಅಲಸಂದೆ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.

Advertisement

ಐಐಎಚ್‌ಆರ್‌ ಬೆಂಗಳೂರು ಇದರ ಮುಖ್ಯಸ್ಥ ಡಾ| ಪಿ.ಸಿ. ತ್ರಿಪಾಠಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅರ್ಕಮಂಗಳ ಮೀಟರ್‌ ಅಲಸಂದೆ ತಳಿ ಎಲ್ಲ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುವ ತಳಿಯಾಗಿದ್ದು ಎಕರೆಗೆ ಗರಿಷ್ಠ 10 ಟನ್‌ ಇಳುವರಿ ನೀಡುವ ತಳಿಯಾಗಿದೆ ಎಂದರು.

ಸ್ಥಳೀಯ ಅಲಸಂಡೆ ತಳಿಯಾಗಿರುವ ಇದಕ್ಕೆ ರೋಗ ಮತ್ತು ಕೀಟದ ಬಾಧೆ ಕಡಿಮೆ ಇದ್ದು ರೈತರಿಗೆ ಹೆಚ್ಚಿನ ಆದಾಯವನ್ನು ತಂದುಕೊಡುವ ನಿಟ್ಟಿನಲ್ಲಿ ಉತ್ತಮ ಬೆಳೆಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಐಐಎಚ್‌ಆರ್‌ ಬೆಂಗಳೂರು ಇದರ ಪ್ರಧಾನ ವಿಜ್ಞಾನಿಗಳಾದ ಡಾ| ಆರ್‌. ಸೆಂತಿಲ್‌ ಕುಮಾರ್‌ ಭಾಗವಹಿಸಿ ಮಾತನಾಡಿ, ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ ಬೆಂಗಳೂರು ಇದರ ಕಾರ್ಯಚಟುವಟಿಕೆಗಳು ಮತ್ತು ಈ ಸಂಸ್ಥೆಯಿಂದ ಬಿಡುಗಡೆಯಾದ 150 ತಂತ್ರಜ್ಞಾನಗಳ ಸಮಗ್ರ ಮಾಹಿತಿ ನೀಡಿದರು.

ಅತಿಥಿ, ಐಸಿಆರ್‌ಐಎಸ್‌ಎಟಿ ಹೈದರಾ ಬಾದ್‌ನ ಭೂಸಮೃದ್ಧಿ ಯೋಜನೆ ಪ್ರಧಾನ ವಿಜ್ಞಾನಿಗಳಾದ ಡಾ| ಕೆ.ಎಚ್‌. ಅನಂತ ಅವರು ಮಾತನಾಡಿ, ಭೂಸಮೃದ್ಧಿ ಯೋಜನೆ ಅಡಿ ಹಲವಾರು ಕಾರ್ಯಕ್ರಮವನ್ನು ಹೈದರಾಬಾದ್‌ ಕೇಂದ್ರದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಂಡಿದ್ದು ರೈತರಿಗೆ ಹೊಸ ತಂತ್ರಜ್ಞಾನಗಳ ಪರಿಚಯ ಹಾಗೂ ಅದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಮತ್ತು ಐಐಎಚ್‌ಆರ್‌ ಸಂಸ್ಥೆಗಳು ಕೈ ಜೋಡಿಸಿವೆ ಎಂದರು.

Advertisement

ಕೆ.ವಿ.ಕೆ. ಬ್ರಹ್ಮಾವರದ ಮುಖ್ಯಸ್ಥ ಡಾ| ಧನಂಜಯ ಬಿ. ಮಾತನಾಡಿ, ಶಿರ್ಲಾಲು ಗ್ರಾಮ ಕೆ.ವಿ.ಕೆ. ಬ್ರಹ್ಮಾವರದ ದತ್ತು ಗ್ರಾಮವಾಗಿದ್ದು, ಇದುವರೆಗೆ ಹಲವಾರು ಕೃಷಿ ಸಂಬಂಧಿತ ಯೋಜನೆಗಳನ್ನು ಗ್ರಾಮದಲ್ಲಿ ಪರಿ ಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಗ್ರಾಮದ ರೈತರು ಧನಾತ್ಮಕ ಪ್ರತಿಕ್ರಿಯೆ ತೋರಿಸಿದ್ದು ಕಾರ್ಯದ ಅನುಷ್ಠಾನಕ್ಕೆ ಇದೊಂದು ಉತ್ತಮ ವಾತಾ ವರಣ ನಿರ್ಮಾಣ ಮಾಡಿದೆ ಎಂದರು. ಕೆ.ವಿ.ಕೆ., ಬ್ರಹ್ಮಾವರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಎಚ್‌.ಎಸ್‌. ಪ್ರಸ್ತಾವಿಸಿ, ಸ್ವಾಗತಿಸಿದರು. ಮಣ್ಣು ವಿಜ್ಞಾನಿ ಡಾ| ಜಯ ಪ್ರಕಾಶ್‌ ಆರ್‌. ನಿರೂಪಿಸಿ, ವಂದಿಸಿದರು.

ಅನುಕೂಲ
ಪ್ರಗತಿಪರ ಕೃಷಿಕ ಗುಣಪಾಲ ಕಡಂಬ ಅಧ್ಯಕ್ಷತೆ ವಹಿಸಿ, ನೂತನ ತಂತ್ರಜ್ಞಾನಗಳು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದ ವತಿಯಿಂದ ಶಿರ್ಲಾಲು ಗ್ರಾಮದ ರೈತರಿಗೆ ಪರಿಣಾಮಕಾರಿಯಾಗಿ ತಲುಪುತ್ತಿದ್ದು ಗ್ರಾಮದ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಅನುಕೂಲವಾಗಿದೆ ಎಂದರು.

ಅನುಭವ
ಅರ್ಕಮಂಗಳ ಮೀಟರ್‌ ಅಲಸಂದೆ ತಳಿಯನ್ನು ಕೃಷಿ ವಿಜ್ಞಾನ ಕೇಂದ್ರದ ಬ್ರಹ್ಮಾವರ ಮಾರ್ಗದರ್ಶನದಲ್ಲಿ ಬೆಳೆದು ಉತ್ತಮ ಆದಾಯವನ್ನು ಗಳಿಸಿದ ದಯಾನಂದ ನಾಯಕ್‌, ಧರಣೇಂದ್ರ ಜೈನ್‌, ಸತೀಶ್‌ ಮುದ್ಯ ಕೃಷಿ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next