Advertisement

“ಗರಿಷ್ಠ ಮತದಾನಕ್ಕೆ ಯೋಜನೆ’

12:30 AM Mar 16, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗರಿಷ್ಠ ಮತದಾನವಾಗಲು ಜಿಲ್ಲಾ ಸ್ವೀಪ್‌ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಆರ್‌. ಸೆಲ್ವಮಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮತದಾರರ ಜಾಗೃತಿಗಾಗಿ 1 ಲಕ್ಷ ಕರಪತ್ರಗಳನ್ನು ಮುದ್ರಿಸಿ ತಾಲೂಕು ಹಂತದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಇವು ಇವಿಎಂ- ವಿವಿಪ್ಯಾಟ್‌ ಕುರಿತು ಜಾಗೃತಿ ಉದ್ದೇಶ ಹೊಂದಿವೆ. ಎ3 ಗಾತ್ರದ 8,000 ಪೋಸ್ಟರ್‌ಗಳನ್ನು ವಿವಿಧ ಇಲಾಖೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡಲು ಬಳಸಲಾಗಿದೆ. 55 ಹೋರ್ಡಿಂಗ್‌ಗಳನ್ನು ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗುತ್ತಿದೆ. 

ಇವಿಎಂ, ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ
ಇವಿಎಂ, ವಿವಿಪ್ಯಾಟ್‌ ಬಗ್ಗೆ ಮತದಾರರಿಗೆ ಹೆಚ್ಚಿನ ಮಾಹಿತಿ ನೀಡಲು 656 ತಂಡಗಳನ್ನು ರಚಿಸಲಾಗಿದೆ. ಇವರು ಮತಗಟ್ಟೆಗಳಿಗೆ ತೆರಳಿ ಪ್ರಾತ್ಯಕ್ಷಿಕೆ, ಮಾಹಿತಿ ನೀಡಲಿದ್ದಾರೆ. ಮತದಾರ ಸಾಕ್ಷರತಾ ಸಂಘ ಶಿಕ್ಷಣ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ)ಗಳನ್ನು ಸ್ಥಾಪಿಸಲಾಗಿದೆ. ಜಾಥಾ, ಬೀದಿ ನಾಟಕ, ಪ್ರತಿಜ್ಞಾವಿಧಿ ಕಾರ್ಯಕ್ರಮಗಳನ್ನು ಈ ಸಂಘಗಳು ಕೈಗೊಳ್ಳುತ್ತಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆಗಾಗಿ ಒಬ್ಬರು “ಈಚ್‌ ಒನ್‌ ಚೆಕ್‌ ಟೆನ್‌’ ಅಭಿಯಾನ ಪ್ರಾರಂಭಿಸಲಾಗಿದೆ. 1,861 ಮತಗಟ್ಟೆಗಳಲ್ಲಿ “ಚುನಾವ್‌ ಪಾಠಶಾಲೆ’ ತೆರೆಯಲಾಗುವುದು. ಶೇ. 100 ಮತದಾನ ದಾಖಲಿಸುವ ಅಪಾರ್ಟ್‌ ಮೆಂಟ್‌ಗಳಿಗೆ ಸ್ಮರಣಿಕೆ ನೀಡಲಾಗುವುದು ಎಂದರು. ಸ್ವೀಪ್‌ ಅಧಿಕಾರಿ ಸುಧಾಕರ್‌ ಉಪಸ್ಥಿತರಿದ್ದರು.

ಗಾಳಿಪಟ ಉತ್ಸವ, ಮ್ಯಾರಥಾನ್‌
ಮತದಾರರ ಜಾಗೃತಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. 18ಕಿ.ಮೀ. ಮಾನವ ಸರಪಣಿ, 18 ಕಿ.ಮೀ. ಸೈಕ್ಲೋಥಾನ್‌, 18 ಕಿ.ಮೀ. ಮ್ಯಾರಥಾನ್‌, ವಾಕಥಾನ್‌, ಗಾಳಿಪಟ ಉತ್ಸವ, ಮರಳುಕಲೆ, ಪ್ರಜಾಪ್ರಭುತ್ವಕ್ಕಾಗಿ ಸರ್ಫಿಂಗ್‌, ಆಟೋಟ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.

ಹಿರಿಯ ನಾಗರಿಕ ಸ್ನೇಹಿ ಮತಗಟ್ಟೆಗಳು
ಪ್ರಥಮ ಬಾರಿಗೆ ಹಿರಿಯ ನಾಗರಿಕಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿ ರ್‍ಯಾಂಪ್‌ಗ್ಳು, ಗಾಲಿಕುರ್ಚಿ, ವಾಕರ್‌, ವಾಕಿಂಗ್‌ಸ್ಟಿಕ್‌ ಹಾಗೂ ನೆರವಿಗೆ ಸ್ವಯಂಸೇವಕರು ಇರುತ್ತಾರೆ. ಇದಲ್ಲದೆ 5 ಪಾರಂಪರಿಕ ಮತಗಟ್ಟೆಗಳು, 2 ಅಂಗವಿಕಲಸ್ನೇಹಿ ಮತಗಟ್ಟೆಗಳು, ಸುಮಾರು 25 ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಸೆಲ್ವಮಣಿ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next