Advertisement
ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಲ್ಲಿನ ಪ್ರತಿಭೆಗಳು ಉತ್ತಮವಾಗಿರುವುದು ಸ್ಮರಣಿಯ. ಇದಕ್ಕೆ ಪೋಷಕರ, ಶಿಕ್ಷಕರ ಬೆಂಬಲವೂ ಇದೆ. ಯೋಗ ತರಬೇತಿ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣವೂ ಇಲ್ಲಿದೆ. ವಿವಿಧ ಆಸನಗಳ ಅಭ್ಯಾಸದಿಂದ ವಿದ್ಯಾರ್ಥಿಗಳು ಸದೃಢರಾಗಿ ಏಕಾಗ್ರತೆ ಹೊಂದುತ್ತಾರೆ.
Related Articles
Advertisement
ಅಲ್ಲದೆ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮೈಸೂರು ಮತ್ತು ಊಟಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸ ಆಯೋಜಿಸಿ ಮಕ್ಕಳಲ್ಲಿ ಭೌಗೋಳಿಕ ಕ್ಷೇತ್ರ, ಸಂಸ್ಕೃತಿ ಅರಿವು ಮೂಡಿಸಲಾಗುತ್ತದೆ. ಬೀಳ್ಕೊಡುಗೆ ಸಮಾರಂಭದ ಮೂಲಕ ಬಾಂಧವ್ಯ ವೃದ್ಧಿಸಲಾಗುತ್ತದೆ.
ಕ್ರೀಡೆ ಚಟುವಟಿಕೆ: ಕ್ರೀಡೆಗೆ ಸಾಮಾನ್ಯ ಶಿಕ್ಷಣದ ಜೊತೆಗೆ ಉನ್ನತ ಆದ್ಯತೆ ನೀಡಲಾಗುತ್ತಿದೆ. ಕ್ರಿಕೆಟ್, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಕಬಡ್ಡಿ, ಬ್ಯಾಡ್ಮಿಂಟನ್, ಶಟಲ್, ಸ್ಕೇಟಿಂಗ್ ಮತ್ತು ಅಥ್ಲೆಟಿಕ್ಸ್ ಗಳಂತಹ ಶಾಲಾ ತಂಡದಲ್ಲಿ ಮಕ್ಕಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗುವುದು. ಅಂತರ್ ಶಾಲಾ ಮಟ್ಟ, ಶಿಕ್ಷಣ ಇಲಾಖೆ, ಕ್ಲಸ್ಟರ್ ಮಟ್ಟದ ಕ್ರೀಡೆಗಳು, ತಾಲೂಕು ಮಟ್ಟ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸುವರು. ಶಾಲೆಯ ಕ್ರಿಕೆಟ್ ತಂಡವು 14 ವರ್ಷಗಳ ಮತ್ತು 16 ವರ್ಷಗಳ ಕೆಎಸ್‌ಸಿಎ ಮೊದಲ ಭಾಗದಲ್ಲಿದೆ.
ಶಾಲೆ ಪರಿಚಯ: ಮ್ಯಾಕ್ಸ್ ಮುಲ್ಲರ್ ಆಂಗ್ಲ ಶಾಲೆಯು ಬೆಂಗಳೂರಿನಲ್ಲಿ 1984 ರಲ್ಲಿ ಪ್ರಾರಂಭಗೊಂಡಿತು. ಈ ಶಾಲೆಯ ಸಂಸ್ಥಾಪಕರು ಗಂಗಾಧರ್ ಹಾಗೂ ಸಾವಿತ್ರಮ್ಮ ರವರು. ಅನೇಕ ವರ್ಷಗಳಿಂದ ಈ ಶಾಲೆಯು ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ, ಜ್ಞಾನ ಮತ್ತು ಕರಕುಶಲ ಹೀಗೆ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾ ಬಂದಿದೆ.
ಈ ಶಾಲೆಯು ಇಂತಹ ಅಭಿವೃದ್ಧಿಯ ಹಂತಗಳನ್ನು ಹೊಂದಲು ಶಾಲೆ ಪ್ರಾಂಶುಪಾಲರಾದ ಜಿ. ಸುರೇಶ್ ಕುಮಾರ್ ರವರು ಹಾಗೂ ಕಾರ್ಯದರ್ಶಿ ಮಣಿಮೇಘಲೈ ರವರ ಶ್ರಮವಿದೆ. ಅದೇ ರೀತಿಯಾಗಿ ಶಾಲೆಯ ಮುಖ್ಯೋಪಾಧಾಯ್ಯಿನಿ ಬಿ. ಆರ್. ಗೀತಾ ಶ್ರಮ ವಹಿಸಿದ್ದಾರೆ.