Advertisement

ವಿಶ್ವನಾಯಕ ಅಟಲ್‌ ಗೆ ಗೌರವ;ಮಾರಿಷಸ್‌ನಲ್ಲೂ ರಾಷ್ಟ್ರ ಧ್ವಜ ಅರ್ಧಕ್ಕೆ!

03:34 PM Aug 17, 2018 | |

ಪೋರ್ಟ್‌ ಲೂಯಿಸ್‌ : ಅಜಾತ ಶತ್ರು ಮಾಜಿ ಪ್ರಧಾನಿ  ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಭಾರತ ಮಾತ್ರವಲ್ಲದೆ ವಿಶ್ವಾದ್ಯಂತ ಅಪಾರ ಅಭಿಮಾನಿಗಳಿದ್ದು,ಇದಕ್ಕೆ ಸಾಕ್ಷಿಯಾಗಿ ಅವರ ಗೌರವಾರ್ಥವಾಗಿ ಮಾರಿಷಸ್‌ನಲ್ಲೂ ಶೋಕ ಆಚರಿಸಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ. 

Advertisement

ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಕುಮಾರ್‌ ಜುಗನೌಥ್‌ ಅವರು ವಾಜಪೇಯಿ ಅವರ ಗೌರವಾರ್ಥ ಶುಕ್ರವಾರ ಸರ್ಕಾರಿ ಸಂಸ್ಥೆಗಳಲ್ಲಿ  ಮಾರಿಷಸ್‌ ಧ್ವಜವನ್ನು ಅರ್ಧಕ್ಕೆ ಹಾರಿಸಲು ಸೂಚನೆ ನೀಡಿದ್ದು, ಖಾಸಗಿ ಸಂಸ್ಥೆಗಳೂ ಇದನ್ನು ಪಾಲಿಸಿ ಮಹಾನ್‌ ನಾಯಕನಿಗೆ ಗೌರವ ಸಲ್ಲಿಸಲು ಕೇಳಿಕೊಂಡಿದ್ದಾರೆ. 

ಜಗನ್ನಾಥ್‌ ಅವರು ವಾಜಪೇಯಿ ಅವರ ನಿಧನಕ್ಕೆ ಸಂತಾಪ ಕೋರಿ ಅಟಲ್‌ ಅವರು ಕೇವಲ ಭಾರತಕ್ಕೆ ಮಾತ್ರವಲ್ಲ ಮಾರಿಷಸ್‌ಗೂ ಎತ್ತರದಲ್ಲಿರುವ ವ್ಯಕ್ತಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next