ಕಟಪಾಡಿ: ಗದ್ದೆಗೆ ಉಪ್ಪುನೀರು ಹರಿದುಬಂದು ಮಟ್ಟುಗುಳ್ಳದ ಬೆಳೆಗಳು ನಾಶಗೊಂಡ ಘಟನೆ ಕಟಪಾಡಿ ಪರಿಸರದಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ಸಮುದ್ರದ ಉಬ್ಬರದ ನೀರು ಪಿನಾಕಿನಿ ಹೊಳೆಯ ಮೂಲಕ ಗದ್ದೆಯನ್ನು ಪ್ರವೇಶಿಸುತ್ತಿದೆ. ಮುಂಬರುವ ಮಳೆಗಾಲದವರೆಗೂ ಕೃಷಿ ಮಟ್ಟುಗುಳ್ಳ ಬೆಳೆಯನ್ನು ಬೆಳೆಯಲು ಕಷ್ಟಸಾಧ್ಯ ಎಂದು ಈ ಭಾಗದ ರೈತರು ಪ್ರಮುಖರು, ಕೃಷಿಕರು ತಮ್ಮ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಗಮನಿಸಿ: ಮಾರ್ಚ್ ನಲ್ಲಿ 2ದಿನ ಬ್ಯಾಂಕ್ ಮುಷ್ಕರ; 4ದಿನ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ…
ಈಗಾಗಲೇ ಕೈಪುಂಜಾಲು, ಭಟ್ಟರ ತೋಟ, ಇಳಿಸಂಜೆ, ಬ್ಯಾರಿ ತೋಟ ಪ್ರದೇಶದ ಸುಮಾರು 40 ಎಕರೆ ಪ್ರದೇಶಕ್ಕೆ ಉಪ್ಪು ನೀರು ನುಗ್ಗಿದ್ದು ಇದೇ ರೀತಿ ನಾವು ಸಂಕಷ್ಟ ಅನುಭವಿಸಬೇಕಿದೆ ಎಂದು ಪ್ರಮುಖರಾದ ಪರಮೇಶ್ವರ ಅಧಿಕಾರಿ, ಲಕ್ಷ್ಮಣ್ ಮಟ್ಟು, ವಾದಿರಾಜ ಅಧಿಕಾರಿ ಸಹಿತ ಬೆಳೆಗಾರರು ತಮ್ಮ ಅಳಲನ್ನು ಉದಯವಾಣಿಯೊಂದಿಗೆ ತೋಡಿಕೊಂಡಿದ್ದಾರೆ.