Advertisement

ಮ್ಯಾಥ್ಯೂಸ್‌ ಆಸ್ಟ್ರೇಲಿಯ ಪ್ರವಾಸಕ್ಕಿಲ್ಲ

03:45 AM Feb 07, 2017 | |

ಕೊಲಂಬೊ: ಸ್ನಾಯು ಸೆಳೆತಕ್ಕೆ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್‌ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಮುಂಬರುವ ಆಸ್ಟ್ರೇಲಿಯ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಇದನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಆಸ್ಟ್ರೇಲಿಯ ಪ್ರವಾಸದ ವೇಳೆ 3 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಇದಕ್ಕಾಗಿ ಮಂಗಳವಾರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗುವುದು. ಈ ಪಂದ್ಯಗಳ ತಾಣಗಳೆಂದರೆ ಮೆಲ್ಬರ್ನ್ (ಫೆ. 17), ಗೀಲಾಂಗ್‌ (ಫೆ. 19) ಮತ್ತು ಅಡಿಲೇಡ್‌ (ಫೆ. 22).

ಈ ಸರಣಿ ಮುಗಿದ ಮರುದಿನವೇ ಆಸ್ಟ್ರೇಲಿಯ ತಂಡ ಭಾರತದಲ್ಲಿ ಟೆಸ್ಟ್‌ ಸರಣಿ ಆರಂಭಿಸಲಿದೆ. ಆದರೆ ಇವೆರಡಕ್ಕೂ ಪ್ರತ್ಯೇಕ ತಂಡಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next