ಸಿಡ್ನಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಾಗುವ “ನ್ಯೂ ಇಯರ್ ಟೆಸ್ಟ್’ ಪಂದ್ಯಕ್ಕೆ ಆ್ಯಶrನ್ ಅಗರ್ ಮತ್ತುಮ್ಯಾಥ್ಯೂ ರೆನ್‌ಶಾ ಅವರನ್ನು ಆಸ್ಟ್ರೇಲಿಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರಾನ್ ಗ್ರೀನ್ ಗಾಯಾಳಾಗಿ ಹೊರಗುಳಿದ ಕಾರಣ ಈ ಬದಲಾವಣೆ ಮಾಡಲಾಗಿದೆ.
ಎಡಗೈ ಸ್ಪಿನ್ನರ್ ಅಗರ್ 2017ರಲ್ಲಿ ಚತ್ತೋಗ್ರಾಮ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಬಳಿಕ ಮಿಚೆಲ್ ಸ್ವೆಪ್ಸನ್ ಆಗಮನದಿಂದ ಅಗರ್ ಸ್ಥಾನ ಕಳೆದುಕೊಳ್ಳಬೇಕಾಯಿತು.
ಹೊಸ ವರ್ಷದ ಟೆಸ್ಟ್ ಪಂದ್ಯ ಜ. 4ರಂದು ಸಿಡ್ನಿಯಲ್ಲಿ ಆರಂಭವಾಗಲಿದೆ. ಇಲ್ಲಿನ ಪಿಚ್ ತುಸು ಡ್ರೈ ಆಗುವ ಸಾಧ್ಯತೆ ಇರುವುದರಿಂದ ಅವಳಿ ಸ್ಪಿನ್ನರ್‌ಗಳನ್ನು ದಾಳಿಗಿಳಿಸುವ ಯೋಜನೆ ಆಸ್ಟ್ರೇಲಿಯದ್ದು. ಅಗರ್ ಬ್ಯಾಟಿಂಗ್ ಕೂಡ ಮಾಡುವ ಕಾರಣ ಆಲ್‌ರೌಂಡರ್ ಗ್ರೀನ್‌ಗೆ ಉತ್ತಮ ಪರ್ಯಾಯ ಆಯ್ಕೆ ಆಗಬಲ್ಲರೆಂಬುದು ಕ್ರಿಕೆಟ್ ಆಸ್ಟ್ರೇಲಿಯದ ಹೇಳಿಕೆ.
3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯ 2-0 ಮುನ್ನಡೆ ಸಾಧಿಸಿದೆ.