Advertisement

ನೇಪಾಲದ ವಾದ ಒಪ್ಪಲಾಗದು: ಭಾರತ ಸ್ಪಷ್ಟನೆ

09:00 AM May 23, 2020 | Hari Prasad |

ಹೊಸದಿಲ್ಲಿ: ಭಾರತದ 3 ಪ್ರಮುಖ ಭೂ ಪ್ರದೇಶಗಳನ್ನೊಳಗೊಂಡ ನೇಪಾಲದ ವಿವಾದಿತ ಹೊಸ ನಕ್ಷೆ ಕೇವಲ ಕೃತಕ ವಿಸ್ತರಣೆ.

Advertisement

ಇದನ್ನು ಭಾರತ ಒಪ್ಪಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್‌ ಶ್ರೀವಾಸ್ತವ್‌ ಸ್ಪಷ್ಟಪಡಿಸಿದ್ದಾರೆ.

ನೇಪಾಲದ ಏಕಪಕ್ಷೀಯ ನಿರ್ಧಾರ, ಐತಿಹಾಸಿಕ ಸಂಗತಿ ಮತ್ತು ಪುರಾವೆಗಳನ್ನು ಆಧರಿಸಿಲ್ಲ. ಮಾತುಕತೆ ಮೂಲಕ ಬಗೆಹರಿಸಬಹುದಾಗಿದ್ದ ಸಮಸ್ಯೆ ಈಗ ದ್ವಿಪಕ್ಷೀಯ ಒಪ್ಪಂದಕ್ಕೆ ತದ್ವಿರುದ್ಧವಾಗಿ ನಿಂತಿದೆ ಎಂದು ಅಸಮಾಧಾನ ಸೂಚಿಸಿದ್ದಾರೆ.

ನ್ಯಾಯ ಸಮ್ಮತವಲ್ಲದ ನಕ್ಷೆ ಪ್ರತಿಪಾದನೆಯಿಂದ ನಾವು ದೂರ ಇರಲು ಬಯಸುತ್ತೇವೆ. ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕತೆಯನ್ನು ಗೌರವಿಸುವಂತೆ ನೇಪಾಲವನ್ನು ಕೋರುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next