Advertisement

ಗ್ರಾಪಂ ಸದಸ್ಯರ ಆಯ್ಕೆ ಚುನಾವಣೆ ಮೂಲಕವೇ ನಡೆಸಲು ಒತ್ತಾಯ

06:26 AM May 29, 2020 | Suhan S |

ಹಾನಗಲ್ಲ: ಗ್ರಾಪಂ ಸದಸ್ಯರ ಅಧಿಕಾರಾವಧಿ ಪೂರ್ಣಗೊಂಡ ಸಂದರ್ಭದಲ್ಲಿ ನಾಮ ನಿರ್ದೇಶನದ ಮೂಲಕ ಅಧಿಕಾರ ನೀಡದೆ ಮತ್ತೆ ಚುನಾವಣೆ ಮೂಲಕವೇ ಸದಸ್ಯರ ಆಯ್ಕೆಯಾಗಬೇಕು ಎಂದು ಜನಹಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಮೋಹನಕುಮಾರ ಒತ್ತಾಯಿಸಿದ್ದಾರೆ.

Advertisement

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೋವಿಡ್ ಆತಂಕಗಳ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಡೆಗಣಿಸಿ ಗ್ರಾಪಂಗಳಿಗೆ ಚುನಾವಣೆ ನಡೆಸದೆ ನಾಮ ನಿರ್ದೇಶನದ ಮೂಲಕ ಆಡಳಿತ ವ್ಯವಸ್ಥೆಗೆ ಹೊಸರೂಪ ನೀಡುವುದು ಸರಿಯಲ್ಲ. ಕೂಡಲೆ ಗ್ರಾಪಂಗಳಿಗೆ ಚುನಾವಣೆ ನಡೆಸಿ ಸದಸ್ಯರ ನೇಮಕ ಮಾಡಬೇಕು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಗೌರವಕ್ಕೆ ಪಾತ್ರವಾಗುತ್ತದೆ.

2015ರಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ಗ್ರಾಪಂ ಸದಸ್ಯರ ಅವಧಿ  5 ವರ್ಷ ಪೂರ್ಣಗೊಂಡಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆ ಪ್ರಕಾರ ಅವಧಿ ಪೂರ್ಣಗೊಳ್ಳುವುದರ ಒಳಗಾಗಿ ನೂತನ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಯಬೇಕು. ಆದರೆ ರಾಜ್ಯ ಸರ್ಕಾರ ಕೊರೊನಾ ಲಾಕ್‌ ಡೌನ್‌ ಪ್ರಕ್ರಿಯೆ ಮುಂದಿಟ್ಟುಕೊಂಡು ಅವಧಿ ಮುಗಿದಿರುವ ಗ್ರಾಪಂಗೆ ಮನಬಂದಂತೆ ನಾಮನಿರ್ದೇಶನ ಮಾಡಲು ಹೊರಟಿರುವ ನಡೆ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವಂತಿದೆ. ಬಡವರ ಮತ್ತು ಸಾಮಾನ್ಯ ವರ್ಗಗಳ ಗ್ರಾಮೀಣ ಜನರಿಗೆ ಗ್ರಾಪಂಗಳಿಂದಲೆ ಸೌಲಭ್ಯ ಕಾರ್ಯಕ್ರಮಗಳು ಅನುಷ್ಠಾನ ಆಗುವುದರಿಂದ ಶೀಘ್ರವೇ ಚುನಾವಣೆಗಳ ಮೂಲಕವೇ ಗ್ರಾಪಂ ಸದಸ್ಯರ ನೇಮಕ ಮಾಡಬೇಕು. ಇಲ್ಲವೆ, ಕೋವಿಡ್  ಸಮಸ್ಯೆ ಮುಗಿಯುವರೆಗೂ ಆಡಳಿತಾಧಿಕಾರಿಗಳ ನೇಮಕವಾಗಬೇಕು. ಜನತೆಯ ತೀರ್ಪು ಪ್ರಜಾಪ್ರಭುತ್ವದಲ್ಲಿ ಮಾನ್ಯತೆ ಪಡೆಯುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next