ಕಾಲೊರೆಸುವ ಮ್ಯಾಟ್‌ನಲ್ಲೂ ಅಂದಚಂದ ನೋಡುತ್ತೇವೆ ನಾವು. ಮನೆಗೆ ಬರುವವರು, ಮ್ಯಾಟ್‌ಗಳ ಅಂದವನ್ನೂ ಮೆಚ್ಚಲೆಂದು ಬಯಸಿ, ಕಲಾತ್ಮಕತೆಗೆ ಒತ್ತು ನೀಡುತ್ತೇವೆ. ಅಂಥ ಚಂದದ ಕಾಲೊರೆಸು (ಮ್ಯಾಟ್)ಗಳನ್ನು ತಯಾರಿಸುವಲ್ಲಿ ನಿಪುಣರು ನೀರ್ಚಾಲುವಿನ ಗೃಹಿಣಿ ಸುಲೋಚನಾ.
Advertisement
ವೈವಿಧ್ಯಮಯ ಮ್ಯಾಟ್ ಹೆಣೆಯುವಲ್ಲಿ ಪರಿಣತರಾಗಿರುವ ಇವರು, ಆ ಕಲೆಯನ್ನು ಇತರೆ ಗೃಹಿಣಿಯರಿಗೂ ಕಲಿಸಿ, ಅವರ ಆದಾಯ ಗಳಿಕೆಗೆ ನೆರವಾಗುತ್ತಿದ್ದಾರೆ. ಮ್ಯಾಟ್ ತಯಾರಿಕೆಗೆ ಸುಲೋಚನಾ ಹಳೆಯ ಸೀರೆಗಳನ್ನು ಬಳಸುವುದಿಲ್ಲ. ದರ್ಜಿಗಳ ಅಂಗಡಿಯಲ್ಲಿ ಕತ್ತರಿಸಿ ಎಸೆಯುವ ಬಟ್ಟೆಯನ್ನು ತಂದು, ಅದನ್ನು ಬೇಕಾದ ಅಳತೆಗೆ ಕತ್ತರಿಸಿ, ಬೇರೆ ಬೇರೆ ಬಣ್ಣದ ಚೂರುಗಳನ್ನು ಜೋಡಿಸಿ ಮ್ಯಾಟ್ ಹೆಣೆಯುತ್ತಾರೆ.
ಸುಲೋಚನಾ, ಕಾಸರಗೋಡಿನ ನೀರ್ಚಾಲುವಿನ ಶಿಕ್ಷಕ ಈಶ್ವರ ಭಟ್ಟರನ್ನು ಮದುವೆಯಾದಾಗ ಒಂಬತ್ತನೆಯ ತರಗತಿ ಮುಗಿಸಿದ್ದರಷ್ಟೆ. ಆದರೆ, ಅವರು ಅಡುಗೆಮನೆಗೆ ಸೀಮಿತರಾಗಿ ಉಳಿಯಲಿಲ್ಲ. ಅವರಿವರನ್ನು ನೋಡಿ ಬಟ್ಟೆ ಹೊಲಿಯುವುದನ್ನು ಕಲಿತು, ಹೊಲಿಗೆ ಯಂತ್ರ ತಂದು ಸಂಪಾದನೆಗೆ ತೊಡಗಿದರು. ನೈಟಿ, ರವಿಕೆ, ಚೂಡಿದಾರವನ್ನಷ್ಟೇ ಅಲ್ಲ, ವಯರಿನ ಚೀಲ, ವ್ಯಾನಿಟಿ ಬ್ಯಾಗ್‌ಗಳನ್ನೂ ಹೊಲೆಯುತ್ತಾರೆ.
Related Articles
ಹತ್ತು ವರ್ಷಗಳಲ್ಲಿ 3.5 ಲಕ್ಷ ರೂ. ಉಳಿತಾಯ ಮಾಡಿದ್ದ ಇವರು ಆ ಹಣವನ್ನು, ಬ್ಯಾಂಕ್ ಸಾಲ ಮಾಡದೆ ಮನೆ ನಿರ್ಮಿಸಲು ಬಳಸಿದರಂತೆ. ಸ್ವಂತ ಸೂರಿಗೆ ನೆರವಾದ ತನ್ನ ದುಡಿಮೆಯ ಬಗ್ಗೆ ಹೆಮ್ಮೆ ಇದೆ ಅಂತಾರೆ ಸುಲೋಚನ. ಮ್ಯಾಟ್ ತಯಾರಿಕೆ ಕಲಿಯಲು ಆಸಕ್ತಿ ಇದ್ದವರು ಇವರನ್ನು (7012355875) ಸಂಪರ್ಕಿಸಬಹುದು.
Advertisement
ಪ. ರಾಮಕೃಷ್ಣ ಶಾಸ್ತ್ರಿ