Advertisement
ಮಹಾಸಭೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ, ಮಾತೃಭೂಮಿಯ ಉಪ ಕಾರ್ಯಾಧ್ಯಕ್ಷ $ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ರಮೇಶ್ ಎ. ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ನಿರ್ದೇಶಕರುಗಳಾದ ರತ್ನಾಕರ ಶೆಟ್ಟಿ ಮುಂಡ್ಕೂರು, ಶಿವರಾಮ ಜಿ. ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಮಾಕೃಷ್ಣ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಸಂತೋಷ್ ಎಂ. ಜವಂದಳೆ, ರತ್ನಗಿರಿ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಸಂತೋಷ್ ಜನಾªಂಲೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣ್ಯರು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು.
ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. 2017, ಮಾರ್ಚ್ 31 ರವರೆಗಿನ ಆರ್ಥಿಕ ಸೂಕ್ಷ್ಮಾವಲೋಕ ನದಂತೆ ಮಾತೃಭೂಮಿ ಶೇರು ಬಂಡವಾಳ ರೂ. 2176.31 ಲಕ್ಷಕ್ಕೇರಿದ್ದು, ಒಟ್ಟು ಸಂಗ್ರಹ ರೂ. 1363.74 ಲಕ್ಷ, ಒಟ್ಟು ಠೇವಣಿ ರೂ. 6885.35 ಲಕ್ಷಕ್ಕೆ ತಲುಪಿದೆ. ಒಟ್ಟು ಮುಂಗಡ ಮೊತ್ತ ರೂ. 9103.35 ಲಕ್ಷ, ವರ್ಕಿಂಗ್ ಕ್ಯಾಪಿಟಲ್ ರೂ. 12062.79ರ ಲಕ್ಷ, ನಿವ್ವಳ ಲಾಭ (1.5 ಕೋ. ರೂ. ಎನ್‌ಪಿಎ ಮೀಸಲಿಟ್ಟಿದೆ). ರೂ. 465.46 ಲಕ್ಷ ರೂ. ದಾಟಿದೆ. ಗ್ರಾಸ್ ಎನ್‌ಪಿಎ ಶೇ. 0.97 ನಷ್ಟಿದೆ. ಗ್ರಾಹಕರಿಗಾಗಿ ಪೂರ್ವ ಘೋಷಿತ ಶೇ. 13 ರಷ್ಟು ಡಿವಿಡೆಂಡ್ ಅನ್ನು ಸಭೆಯಲ್ಲಿ ಘೋಷಿಸಲಾಯಿತು.
Related Articles
Advertisement