Advertisement

ಜೇಗರಕಲ್‌ ಶಾಲೆಯಲ್ಲಿ ಗಣಿತ ದಿನಾಚರಣೆ

02:55 PM Feb 06, 2022 | Team Udayavani |

ರಾಯಚೂರು: ತಾಲೂಕಿನ ಜೇಗರಕಲ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಯಿತು. ಈ ನಿಮಿತ್ತ ಗಣಿತದ ವಿವಿಧ ಆಕೃತಿಗಳ ಮಾಡಿ ವಿದ್ಯಾರ್ಥಿಗಳಿಂದ ಗಣಿತ ವಿಷಯ ಸೆಮಿನಾರ್‌ ಮಾಡಿಸಲಾಯಿತು.

Advertisement

ಎಸ್‌ಡಿಎಂಸಿ ಸದಸ್ಯರು ಶಾಲಾವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ಗಾಯನ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಇದೇ ವೇಳೆ ಎಸ್‌ಡಿಎಂಸಿ ಹಾಗು ಪೋಷಕರ ಸಭೆ ಏರ್ಪಡಿಸಲಾಗಿತ್ತು. ಭಾರತ ಸೇವಾದಳ, ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದರು. ದೈಹಿಕ ಶಿಕ್ಷಕ ನರಹರಿ ದೇವ್ರು ಮಾತನಾಡಿದರು.

ಶಿಕ್ಷಕರಾದ ಶೋಭಾ ಉಪಾಸಿ, ರೂಪಾದೇವಿ, ವಿಜಯಲಕ್ಷ್ಮೀ, ಜೋತ್ಸ್ನಾ ದೇವಿ, ಪ್ರಸನ್ನ ದೇವಿ, ಪದ್ಮಾವತಿ, ವಿಜಯಲಕ್ಷ್ಮೀ, ಸಂಗೀತ ಶಿಕ್ಷಕ ಆಂಜನೇಯ, ಕೆ.ಆರ್‌. ನವೀದ, ಸಾಬೀರ್‌ ಪಾಷಾ, ಹಾಜಿ ಹುಸೇನ್‌, ರೇವತಿ, ಎಸ್‌ಡಿಎಂಸಿ ಅಧ್ಯಕ್ಷ ಜಿಂದಪ್ಪ, ಸದಸ್ಯರಾದ ಶಂಕರಗೌಡ, ಈರಪ್ಪ, ನರಸಿಂಹ, ಪ್ರಭು, ದೊಡ್ಡ ಈರೇಶ ಸೇರಿ ಪಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next