ಹೊಸದಿಲ್ಲಿ: ಗರ್ಭಿಣಿಯರಲ್ಲಿ ಭ್ರೂಣವು ಗರ್ಭಕೋಶದಲ್ಲಿ ಬೆಳೆದು ಮಗುವಾಗಿ ಹೊರಬರುವುದು ಸಾಮಾನ್ಯ. ಆದರೆ 10,000 ಪ್ರಕರಣಗಳಲ್ಲೊಂದು ಎಂಬಂತೆ, ಗರ್ಭಾಶಯದಲ್ಲಿ ಗರ್ಭ ಕಟ್ಟುವ ಬದಲು, ಕೆಲವರಲ್ಲಿ ಹೊಟ್ಟೆಯಲ್ಲಿ ಗರ್ಭ ಕಟ್ಟಲು ಶುರುವಾಗಿ ಮಗು ಅಲ್ಲಿಯೇ ಬೆಳೆಯುತ್ತದೆ. ಇದನ್ನು “ಎಕ್ಟೋಪಿಕ್ ಪ್ರಗ್ನೆಸ್ನಿ’ ಎಂದು ಕರೆಯಲಾಗುತ್ತದೆ.
ಇಂಥದ್ದೇ ಅಸಹಜ ಗರ್ಭ ಧರಿಸಿದ್ದ ಪೂರ್ವ ದಿಲ್ಲಿಯ 32 ವರ್ಷದ ಮಹಿಳೆಯೊಬ್ಬರಿಗೆ ದಿಲ್ಲಿಯ “ಆರೋಗ್ಯ ಹಾಸ್ಪಿಟಲ್ಸ್’ ಎಂಬ ಆಸ್ಪತ್ರೆಯ ಸಿಬಂದಿ, ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿ ಯಾಗಿ ಹೆರಿಗೆ ಮಾಡಿಸಿದ್ದಾರೆ.
ಇಂಥ ಪ್ರಕರಣಗಳು ಸಾಮಾನ್ಯವಾಗಿ ತಾಯಿ ಮತ್ತು ಮಗು ಇಬ್ಬರಿಗೂ ಗಂಡಾಂತ ರಕಾರಿ. ಅನೇಕ ಸಂದರ್ಭಗಳಲ್ಲಿ, ಹೊಟ್ಟೆ ಯಲ್ಲಿ ಗರ್ಭಾಧಾರಣೆಯಾದ ಅನಂತರ ಆಗುವ ಕೆಲವಾರು ದೈಹಿಕ ಸಮಸ್ಯೆಗಳಿಂದಾಗಿ ತಾಯಿ ಮೃತಪಡುತ್ತಾಳೆ ಅಥವಾ ಸೂಕ್ತ ರಕ್ತ ಸಂಚಾರ ಅಥವಾ ಅಪೌಷ್ಟಿಕತೆಯಿಂದ ಮಗು ಮೃತಪಡುತ್ತದೆ. ನವಮಾಸ ತುಂಬಿ ಹೆರಿಗೆಯಾದರೂ, ಮೊದಲು ಮಗುವಿನ ಕಾಲುಗಳು ಹೊರಬಂದು, ಅನಂತರ ದೇಹದ ಉಳಿದ ಭಾಗ ಹೊರಬರುತ್ತದೆ.
ಇಂಥ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡಿದ್ದ ಆಸ್ಪತ್ರೆಯ ಸಿಬಂದಿ ಮೂರು ದಿನಗಳ ಹಿಂದೆ ಯಶಸ್ವಿ ಹೆರಿಗೆ ಮಾಡಿಸಿದ್ದಾರೆ.
- 10 ಸಾವಿರ ಗರ್ಭಧಾರಣೆ ಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳ ಬಹುದಾದ ಅಸಹಜತೆ!
- ಇಂಥ ಸಮಸ್ಯೆಯಿಂದ ಬಳಲು ತ್ತಿದ್ದ ಪೂರ್ವ ದಿಲ್ಲಿಯ ಮಹಿಳೆಗೆ ಯಶಸ್ವಿ ಪ್ರಸೂತಿ!