Advertisement
ಬೇಳೂರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ಬೇಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಮನ್ವಯಾಧಿಕಾರಿ ಕಚೇರಿ ಕುಂದಾಪುರ ಹಾಗೂ ಸರಕಾರಿ ಪ್ರೌಢಶಾಲೆ ಬೇಳೂರು, ಸರಕಾರಿ ಪ್ರಾಥಮಿಕ ಶಾಲೆ ಬೇಳೂರು, ಬಡಾಬೆಟ್ಟು, ಗುಳ್ಳಾಡಿ ಶಾಲೆಗಳ ಸಹಯೋಗದೊಂದಿಗೆ ನೆರವಿನ ಕೈಗಳು ಬೇಳೂರು ಗ್ರಾ.ಪಂ.ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಉಚಿತ ಶಾಲಾ ಬಸ್ ಹಾಗೂ ಕುಡಿಯುವ ನೀರಿನ ಘಟಕ ಹಸ್ತಾಂತರ ಮತ್ತು ಉಚಿತ ನೋಟ್ ಪುಸ್ತಕ , ಶಾಲಾ ಬ್ಯಾಗ್ , ವಾಟರ್ ಕ್ಯಾನ್ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರಕಾರಿ ಶಾಲೆಗಳು ವ್ಯವಸ್ಥಿತವಾಗಿ ನಡೆಯಬೇಕು ಎನ್ನುವ ಹಂಬಲ ನಮ್ಮದು. ಹೀಗೇ ಮುಂದವರಿದಲ್ಲಿ ಇನ್ನು ಮೂರು ವರ್ಷದಲ್ಲಿ ಏಳು ಸಾವಿರ ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಉಚಿತ ಬಸ್ ಕೊಡುಗೆಯಾಗಿ ನೀಡಿದ ದಾನಿ ಅಕ್ಕಯ್ಯ ಎನ್. ಶೆಟ್ಟಿ ಬಾಳ್ಕಟ್ಟುಮನೆ, ಬಯಲ ಸಭಾಭವನ ಕೊಡುಗೆಯಾಗಿ ನೀಡಿದ ಆನಂದ ಸಿ. ಕುಂದರ್, ಬೇಳೂರು ಮಡಿಯಾಣ ಮನೆಯವರನ್ನು ಹಾಗೂ ಶಾಲಾ ಬ್ಯಾಗ್ ಮತ್ತು ವಾಟರ್ ಕ್ಯಾನ್ ಕೊಡುಗೆಯಾಗಿ ನೀಡಿದ ಡಾ| ಬಿ.ಆರ್.ಶೆಟ್ಟಿ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡಿದ ಡಾ| ಬಿ.ಆರ್.ಶೆಟ್ಟಿ, ನೋಟ್ ಬುಕ್ ಕೊಡುಗೆಯಾಗಿ ನೀಡಿದ ಬೇಳೂರು ಕೇದಿಗೆ ಮನೆಯವರು, ಮಹೇಶ್ ಶೆಟ್ಟಿ ಹಾಗೂ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.ಬೇಳೂರು ಗ್ರಾ.ಪಂ.ಅಧ್ಯಕ್ಷ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಜಿ.ಪಂ. ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಡಾ| ಬಿ.ಆರ್. ಶೆಟ್ಟಿ, ಬೆಂಗಳೂರಿನ ಶ್ರೀ ಶಂಕರನಾರಾಯಣ ಕನ್‌ಸ್ಟ್ರಕ್ಷನ್ ಕಂಪೆನಿಯ ಪ್ರಶಾಂತ್ ಶೆಟ್ಟಿ, ಕಲ್ಪತರು ಪವರ್ ಟ್ರಾನ್ಸ್‌ಮಿಷನ್ ಲಿ. ಬೆಂಗಳೂರು ಇದರ ಡೆಪ್ಯೂಟಿ ಜನರಲ್ ಮ್ಯಾನೇಜರ್ ಭಾಸ್ಕರ ಮೊಗೇರ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸದಾನಂದ ಬೈಂದೂರು, ಬೇಳೂರು ಗ್ರಾ.ಪಂ.ಸದಸ್ಯರು ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲಾ ಮುಖ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಸ್ವಾಗತಿಸಿ, ಬೇಳೂರು ಗ್ರಾ.ಪಂ.ಅಧ್ಯಕ್ಷ ಕರುಣಾಕರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಐಆರ್‌ಟಿಇ ಸೀತಾರಾಮ ಶೆಟ್ಟಿ , ಶಿಕ್ಷಕಿ ಸವಿತಾ ಆಚಾರ್ ನಿರೂಪಿಸಿದರು. ಗ್ರಾ.ಪಂ. ಸದಸ್ಯೆ ಪ್ರಭಾವತಿ ಟಿ.ಶೆಟ್ಟಿ ವಂದಿಸಿದರು.