Advertisement

ಲಾಕ್ ಡೌನ್‌ ಅವಧಿಯಲ್ಲೇ ತಾಯಿ ಮರಣ ಇಳಿಕೆ

11:46 AM Sep 02, 2020 | Suhan S |

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಲಾಕ್‌ ಡೌನ್‌ ಜಾರಿ ಸಂದರ್ಭದಲ್ಲಿ ಏಪ್ರಿಲ್‌ನಿಂದ ಜೂನ್‌ ವರೆಗೂ ರಾಜ್ಯದಲ್ಲಿ ತಾಯಿ ಮರಣ ದರ ಶೇ.7ರಷ್ಟು ಇಳಿಕೆಯಾಗಿದೆ.

Advertisement

ತಾಯಿ ಆರೋಗ್ಯ ಕಾರ್ಯಕ್ರಮಗಳ ಕುರಿತು 2020-21ನೇ ಸಾಲಿನ ಮೊದಲ ತ್ತೈಮಾಸಿಕದಲ್ಲಿ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ. 2019 ಏಪ್ರಿಲ್‌, ಮೇ ಹಾಗೂ ಜೂನ್‌ ಸೇರಿ ಮೂರು ತಿಂಗಳಿನಲ್ಲಿ ರಾಜ್ಯಾದ್ಯಂತ 210 ತಾಯಿ ಮರಣ ಸಂಭವಿಸಿದ್ದವು. ಆದರೆ, 2020ರ ಈ ಮೂರು ತಿಂಗಳಲ್ಲಿ 195 ತಾಯಿ ಮರಣ ವರದಿಯಾಗಿವೆ.

ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಇಲಾಖೆ ತಾಯಿ ಆರೋಗ್ಯ ಕಾರ್ಯಕ್ರಮಗಳ ಉಪ ನಿರ್ದೇಶಕ ಡಾ.ರಾಜ್‌ಕುಮಾರ್‌, ಲಾಕ್‌ಡೌನ್‌ ಅವಧಿಯಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಸಾಕಷ್ಟು ಸಮಸ್ಯೆಯಾಗಿರುತ್ತದೆ ಎಂಬ ತಪ್ಪು ಕಲ್ಪನೆಗಳು ಜನರಲ್ಲಿವೆ. ಆದರೆ, ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ವಿಚಾರದಲ್ಲಿ ತಾರತಮ್ಯ ಮಾಡದೆ ಹೆರಿಗೆ ಮಾಡಿಸಿ, ಅಗತ್ಯ ಸೌಲಭ್ಯ ನೀಡಲಾಗಿದೆ. ಲಾಕ್‌ಡೌನ್‌ ಅವಧಿಯಲ್ಲಿ ಕೋವಿಡ್ ಸೋಂಕಿತರನ್ನು ಹೊರತು ಪಡಿಸಿದರೆ ಬಾಣಂತಿಯರಿಗೆ ಅತ್ಯಂತ ಹೆಚ್ಚು ಆದ್ಯತೆ ನೀಡಲಾಗಿತ್ತು ಎಂದರು.

ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದಂತೆ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ಆಗತ್ಯ ವ್ಯವಸ್ಥೆ ಮಾಡಿಸಲಾಗಿತ್ತು. ಶುಲ್ಕರಹಿತ ಉಚಿತ ಹೆರಿಗೆಗೆ ಆದ್ಯತೆ ನೀಡಿ ಅಗತ್ಯವಿರುವ ಔಷಧ ಸಾಮಾಗ್ರಿಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲಾಗಿತ್ತು. ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇವುಗಳು ಕೂಡಾ ಕಳೆದ ವರ್ಷ ಮೊದಲ ತ್ತೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಶೇ.75 ರಷ್ಟು ಪ್ರಗತಿ ಕಂಡಿವೆ. ಎಂದು ತಿಳಿಸಿದರು.

2.5 ಲಕ್ಷ ಶಿಶುಗಳ ಜನನ :  ಏಪ್ರಿಲ್‌ನಿಂದ ಜೂನ್‌ವರೆಗೂ ರಾಜ್ಯದಲ್ಲಿ ಒಟ್ಟು 2.5 ಲಕ್ಷ ಗರ್ಭಿಣಿಯರಿಗೆ ಹೆರಿಗೆಯಾಗಿದ್ದು, ಶೇ.1 ರಷ್ಟು ಅವಳಿ ಮಕ್ಕಳನ್ನು ಸೇರಿ 2.5 ಲಕ್ಷ ನವಜಾತ ಶಿಶುಗಳು ಜನಿಸಿವೆ ಎಂದು ಅವರು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next