Advertisement
ಹಿಂದೆಲ್ಲಾ ಒಂದು ಚಿನ್ನದ ಬೆಂಡೋಲೆ ಮಹಿಳೆಯರ ಎಲ್ಲ ಕಾಲದ ಸಂಗಾತಿಯಾಗಿರುತ್ತಿದ್ದರೆ ಈಗ ಹಾಗಲ್ಲ. ದಿನಕ್ಕೊಂದರಂತೆ ತರಹೇವಾರಿ ಕಿವಿಯೋಲೆಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತವೆ. ಆಯ್ಕೆ ಮಾಡಲು ನಾವೇ ಸ್ಪಲ್ಪ ತಡಕಾಡಬೇಕಷ್ಟೇ. ಸೀರೆ, ಜೀನ್ಸ್ ಸಹಿತ ಯಾವುದೇ ಬಟ್ಟೆಗಳಿರಲಿ ಅದಕ್ಕೆ ಸರಿ ಹೊಂದುವ ನಮಗೆ ಇಷ್ಟವಾಗುವ ಕಿವಿಯೋಲೆ ಪಟ್ಟಿ ಇಲ್ಲಿದೆ.
ಮಹಿಳೆಯ ಮುಖವನ್ನು ಹೋಲುವಂತೆಯೇ ಈ ಕಿವಿಯೋಲೆಯನ್ನು ತಯಾರಿಸಲಾಗಿದ್ದು, ಈ ವರ್ಷದ ಹೊಸ ವಿನ್ಯಾಸ ಕಿವಿಯೋಲೆಗಳ ಪಟ್ಟಿಯಲ್ಲಿದೆ. ಎಲ್ಲ ವಿಧದ ಮುಖ ಲಕ್ಷಣಗಳಿಗೂ ಈ ಕಿವಿಯೋಲೆ ಹೊಂದಿಕೆಯಾಗುವ ಇದು ಜೀನ್ಸ್ ಅಥವಾ ಇನ್ನಿತರ ವೆಸ್ಟರ್ನ್ಡ್ರೆಸ್ ಮೆಟೀರಿಯಲ್‌ಗಳಿಗೆ ಹೆಚ್ಚು ಸೂಕ್ತ. ಸಿಲ್ವರ್ ಹಾಗೂ ಗೋಲ್ಡನ್ ಕಲರ್‌ಗಳಲ್ಲಿ ಈ ಕಿವಿಯೋಲೆಗಳು ಮಾರುಕಟ್ಟೆ ಪ್ರವೇಶಿಸಿವೆ. ಮಾಡರ್ನ್ ಪರ್ಲ್
ನೀವು ಸೀರೆ ಪ್ರಿಯರಾಗಿದ್ದರೇ, ಸೀರೆಗೆ ಹೋಲಿಕೆಯಾಗುವ, ಕಳೆ ಹೆಚ್ಚಿಸುವ ಕಿವಿಯೋಲೆ ಬಯುಸುವುದಾದರೆ, ನೀವು ಮಾಡರ್ನ್ ಪರ್ಲ್ ಇಯರಿಂಗ್ ಹೆಚ್ಚು ಒತ್ತು ನೀಡಿ. ಬಣ್ಣ ಬಣ್ಣದ ಮುತ್ತಿನ ಹರಳುಗಳಿಂದ ತಯಾರಿಸಿರುವ ಈ ಕಿವಿಯೋಲೆಗಳು ವೈವಿಧ್ಯಮಯ ಶೈಲಿಯಲ್ಲಿ ಕಡಿಮೆ ಬೆಲೆ ಯಲ್ಲಿ ದೊರೆಯುತ್ತವೆ.
Related Articles
ಇನ್ನು ಕೇವಲ ಚಿನ್ನದ ಬಣ್ಣದ ಸರಿಗೆಗಳನ್ನು ಬಳಸಿಕೊಂಡು ಬೇರೆ ಬೇರೆ ಆಕಾರಗಳಲ್ಲಿ ತಯಾರಿಸಲಾದ ಕಿವಿಯೋಲೆಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾರ್ಟ್ ಶೇಪ್, ಸರ್ಕಲ್, ಸ್ಕ್ವೇರ್, ರೌಂಡ್ ಇತ್ಯಾದಿ ವಿಧಗಳಲ್ಲಿ ಗೋಲ್ಡ್ ಟೋನ್ ಇಯರಿಂಗ್ಸ್ ಗಳು ಬಟ್ಟೆಗಳಿಗೆ ಮಾಡರ್ನ್ ಲುಕ್ ತಂದು ಕೊಡುತ್ತದೆ.
Advertisement
ಜುಮ್ಕಿಯಾವ ಜುವೆಲ್ಲರ್ಗೆ ಕಿವಿಗೆ ಚಿನ್ನ ಕೊಳ್ಳೋದಿಕ್ಕೆ ಹೋದ್ರೂ ಮಹಿಳೆಯರಿಗೆ ಹೆಚ್ಚು ಇಷ್ಟವಾಗೋದು ಜುಮ್ಕಿಗಳು. ಇನ್ನು ಫ್ಯಾನ್ಸಿಗಳಲ್ಲಿಯೂ ಹೆಚ್ಚು ಬಾರಿ ನಮ್ಮ ಗಮನ ಸೆಳೆದು ಬಿಡುವುದೂ ಜುಮ್ಕಿಗಳೇ. ಅಂದಿಂದ ಇಂದಿನವರೆಗೆ ಮಹಿಳೆಯರಿಗೆ ಕೊಂಚವೂ ಅಸಕ್ತಿ ಕಡಿಮೆಯಾಗದ ಆಭರಣ ಎಂದರೆ ಅದು ಜುಮ್ಕಿ. ಕೇವಲ ಮೆಟಲ್‌ಗಳಿಂದ ತಯಾರಿಸಿದ ಜುಮ್ಕಿಗಳು ಕೆಲವರಿಗೆ ಆಪ್ತವಾದರೆ, ಇನ್ನು ಕೆಲವರಿಗೆ ಮುತ್ತಿನಿಂದ ಆವೃತವಾದ ಜುಮ್ಕಿಗಳು ಇಷ್ಟ. ಇನ್ನು ಲೇಯರ್‌ಗಳಿಂದ ಕೂಡಿದ ಇಯರಿಂಗ್‌ಗಳಂತೂ ನೀವು ಸೀರೆ ತೊಟ್ಟುಕೊಂಡಾಗ ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಿ ಬಿಡುತ್ತವೆ. ಕ್ರಿಸ್ಟಲ್ ಡ್ರಾಪ್ ಇಯರಿಂಗ್
ಹರಳುಗಳ ಜೋಡ ಣೆ ಯಿಂದ ಈ ಇಯರಿಂಗ್ ತಯಾ ರಿಸ ಲಾ ಗಿದ್ದು, ಕಲರ್ ಸ್ಟಡ್‌ಗಳ ಜತೆಗೆ ಕೇವಲ ಗೋಲ್ಡನ್, ಮಾರುಕಟ್ಟೆಯಲ್ಲಿ ಲಭ್ಯವಿವೆ. ಜೀನ್ಸ್, ಮಿಡ್ಡೀ, ಟೀ ಶರ್ಟ್‌ಗೆ ಕಾಂಬಿನೇಶನ್ ಈ ಕ್ರಿಸ್ಟಲ್ ಡ್ರಾಪ್‌ಗ್ಳು ಹೇಳಿ ಮಾಡಿದ್ದಂತಿ ರುತ್ತ ದೆ. ನೈಟ್ ಪಾರ್ಟಿಗಳ ಧಿರಿಸಿಗೆ ಈ ಕಿವಿಯೋಲೆಗಳು ಹೊಸ ಲುಕ್ ತಂದು ಕೊಡುತ್ತವೆ. ಭುವನ ಬಾಬು ಪುತ್ತೂರು