Advertisement

ಕನ್ನಡಕ್ಕಾಗಿ ನಾವು ಅಭಿಯಾನ: ವಿವಿಧೆಡೆ ಮೊಳಗಿದ ಲಕ್ಷ ಕಂಠ ಗಾಯನ

08:35 PM Oct 28, 2021 | Team Udayavani |

ಪುತ್ತೂರು: ಧ್ವನಿಗೂಡಿಸಿದ ಗಣ್ಯರು

Advertisement

ಪುತ್ತೂರು: ಕನ್ನಡಕ್ಕಾಗಿ ನಾವು ಮಾತಾಡ್‌ ಮಾತಾಡ್‌ ಕನ್ನಡ ಅಭಿಯಾನದ ಅಂಗವಾಗಿ ವಿವಿಧ ಭಾಗಗಳಲ್ಲಿ ಬೆ. 11 ಕ್ಕೆ ಏಕಕಾಲದಲ್ಲಿ ಪ್ರಸಿದ್ಧ ಕವಿಗಳು ರಚಿಸಿರುವ ಮೂರು ಹಾಡು ಗಳನ್ನು ಹಾಡಲಾಯಿತು.

“ಬಾರಿಸು ಕನ್ನಡ ಡಿಂಡಿಮವ’, “ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ “ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಮೂರು ಗೀತೆಗಳನ್ನು ಪುತ್ತೂರು ಮಿನಿ ವಿಧಾನಸೌಧ, ನಗರಸಭೆ ಸಭಾಂಗಣ, ಬಸ್‌ ನಿಲ್ದಾಣ, ಶಾಲೆ, ಸರಕಾರಿ ಕಚೇರಿಗಳಲ್ಲಿ ಆಯಾ ಇಲಾಖೆಯ ಅಧಿಕಾರಿಗಳು, ಸಿಬಂದಿ, ಶಿಕ್ಷಕರು ಹಾಡಿದರು. ಪ್ರತಿ ಇಲಾಖೆಗಳು ಹಾಡಿನ ವೀಡಿಯೋವನ್ನು ಕಣಜ ಆ್ಯಪ್‌ ಮೂಲಕ ರವಾನಿಸಿ ಭಾಗ ವಹಿಸಿರುವುದನ್ನು ಖಚಿತಪಡಿಸಲು ಇಲಾಖೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಹಾಡಿನ ಚಿತ್ರೀಕರಣ ನಡೆಸಿ ಬಳಿಕ ಅಪ್‌ಲೋಡ್‌ ಮಾಡಲಾಯಿತು.

ಪುತ್ತೂರು ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ ರಮೇಶ್‌ ಬಾಬು, ಗ್ರೇಡ್‌ 2 ತಹಶೀಲ್ದಾರ್‌ ಲೋಕೇಶ್‌, ಕ್ಷೇತ್ರ ಶಿಕ್ಷಣಾ ಧಿಕಾರಿ ಸಿ.ಲೋಕೇಶ್‌, ಮಹೇಶ್‌, ಸುಂದರ ಗೌಡ, ಸುಲೋಚನಾ, ನವೀನ್‌ ವೇಗಸ್‌ ಉಪಸ್ಥಿತರಿದ್ದರು.

ಡಾ|  ಶಿವರಾಮ ಕಾರಂತ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಶುಭಾ ರಾವ್‌ ಪಿ.ವಿ., ಶಿಕ್ಷಣ ಸಂಯೋಜಕ ಹರಿಪ್ರಸಾದ್‌, ಸಿಆರ್‌ಪಿ ಶಶಿಕಲಾ, ಬಿಐಇಆರ್‌ಟಿಯ ತನುಜಾ, ಸೀತಮ್ಮ, ಸುಲೋಚನಾ ಧ್ವನಿ ನೀಡಿದರು.

Advertisement

ನಗರಸಭೆಯಲ್ಲಿ ನಗರಸಭೆ ಅಧ್ಯಕ್ಷ ಕೆ ಜೀವಂಧರ್‌ ಜೈನ್‌, ಉಪಾಧ್ಯಕ್ಷೆ ವಿದ್ಯಾ ಆರ್‌ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಮತ್ತು ಅಧಿಕಾರಿಗಳ ಸಹಯೋಗದಲ್ಲಿ ಗಾಯನ ನಡೆಯಿತು.

ಕನ್ನಡಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ :

ಬಂಟ್ವಾಳ: ಬಿ.ಸಿ.ರೋಡ್‌ನ‌ ಮಿನಿ ವಿಧಾನಸೌಧದ ಆವರಣದಲ್ಲಿ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಉಪಸ್ಥಿತಿಯಲ್ಲಿ ಸೂಚಿತ ಮೂರು ಹಾಡುಗಳ ಜತೆಗೆ ರಾಷ್ಟ್ರಗೀತೆ, ನಾಡಗೀತೆಯನ್ನು ಹಾಡಲಾಯಿತು.

ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌. ನೇತೃತ್ವದಲ್ಲಿ ತಾಲೂಕು ಕಚೇರಿಯ ಸಿಬಂದಿ, ಗ್ರಾಮಕರಣಿಕರು ಸಮವಸ್ತ್ರ ಧರಿಸಿ ಪಾಲ್ಗೊಂಡರು. ಜತೆಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಬಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಕನ್ನಡ ಕ್ಕಾಗಿ ಕೆಲಸ ಮಾಡುವ ಕುರಿತು ಪ್ರತಿಜ್ಞೆ ಸ್ವೀಕರಿಸಲಾಯಿತು.

ಮಂಗಳೂರು ಸಹಾಯಕ ಕಮಿನಷನರ್‌ ಮದನ್‌ ಮೋಹನ್‌ ಸಿ., ಬೂಡ ಅಧ್ಯಕ್ಷ ಬಿ.ದೇವದಾಸ್‌ ಶೆಟ್ಟಿ, ಅಕ್ರಮ-ಸಕ್ರಮ ಸಮಿತಿ ಸದಸ್ಯ ರಮನಾಥ ರಾಯಿ, ಗ್ರೇಡ್‌-2 ತಹಶೀಲ್ದಾರ್‌ ಕವಿತಾ, ಉಪತಹಶೀಲ್ದಾರ್‌ಗಳಾದ ನರೇಂದ್ರನಾಥ್‌ ಭಟ್‌, ದಿವಾಕರ ಮುಗುಳಿಯ, ನವೀನ್‌ ಬೆಂಜನಪದವು, ವಿಜಯ ವಿಕ್ರಮ, ರಾಜೇಶ್‌ ನಾಯ್ಕ, ಕಂದಾಯ ನಿರೀಕ್ಷಕರಾದ ಧರ್ಮ ಸಾಮ್ರಾಜ್ಯ, ಕುಮಾರ್‌, ಮಂಜುನಾಥ್‌, ನವೀನ್‌ ಬೆಂಜನಪದವು ಉಪಸ್ಥಿತರಿದ್ದರು.

ಸುಳ್ಯ: ತಾಲೂಕಿನ ವಿವಿಧ ಭಾಗ ದಲ್ಲಿ ಕನ್ನಡದ ಅಭಿಯಾನದ ಅಂಗವಾಗಿ ಗಾಯನ ನಡೆಯಿತು. ನ.ಪಂ., ತಾ.ಪಂ. ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಬೆಳಗ್ಗೆ 11 ಗಂಟೆಗೆ ಗೀತೆ ಹಾಡಲಾಯಿತು. ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಅನಿತಾ ಲಕ್ಷ್ಮೀ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ತಾಲೂಕು ಪಂಚಾ ಯತ್‌ನಲ್ಲಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎನ್‌.ಭವಾನಿಶಂಕರ ನೇತೃತ್ವ ವಹಿಸಿದ್ದರು. ಸುಳ್ಯ ನಗರ ಪಂಚಾಯತ್‌ನಲ್ಲಿ ನ.ಪಂ. ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷ ಬುದ್ಧ ನಾಯ್ಕ, ಮುಖ್ಯಾಧಿಕಾರಿ ಎಂ.ಆರ್‌.ಸ್ವಾಮಿ ಉಪಸ್ಥಿತರಿದ್ದರು.

ಅನುರಣಿಸಿದ ಕನ್ನಡ ಗಾಯನ :

ಕಡಬ: ತಾಲೂಕು ಆಡಳಿತದ ನೇತೃತ್ವದಲ್ಲಿ  ತಾಲೂಕು ಕಚೇರಿಯ ಮುಂಭಾಗದ ಎಪಿಎಂಸಿ ವಠಾರದಲ್ಲಿ ಕನ್ನಡ ಗೀತ ಗಾಯನ ನೆರವೇರಿತು.

ತಹಶೀಲ್ದಾರ್‌ ಅನಂತಶಂಕರ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಉಪ ತಹಶೀಲ್ದಾರ್‌ಗಳಾದ ಮನೋಹರ್‌ ಕೆ.ಟಿ., ನವ್ಯಾ ಮತ್ತಿತರರು ಭಾಗವಹಿಸಿದರು. ಕಡಬ ಪಟ್ಟಣ ಪಂಚಾಯತ್‌ ವಠಾರದಲ್ಲಿ  ಜರಗಿದ ಕಾರ್ಯಕ್ರಮದಲ್ಲಿ  ಕಡಬ ಕಂದಾಯ ನಿರೀಕ್ಷಕ ಅವಿನ್‌ ರಂಗತ್‌ಮಲೆ, ಪಟ್ಟಣ ಪಂಚಾಯತ್‌ ಸಿಬಂದಿ ವಾರಿಜಾ, ಹರೀಶ್‌ ಬೆದ್ರಾಜೆ ಮುಂತಾದವರು ಭಾಗವಹಿಸಿದರು. ಮೆಸ್ಕಾಂ ಕಡಬ ಉಪ ವಿಭಾಗ ಕಚೇರಿಯಲ್ಲಿ  ಎಇಇ ಸಜಿಕುಮಾರ್‌ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ  ಶಾಖಾಧಿಕಾರಿಗಳಾದ ಸತ್ಯನಾರಾಯಣ (ಕಡಬ)ರಮೇಶ್‌ (ನೆಲ್ಯಾಡಿ), ಶರಣ ಗೌಡ (ಬಿಳಿನೆಲೆ), ಪ್ರೇಮ್‌ ಕುಮಾರ್‌ (ಆಲಂಕಾರು), ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.  ತಾಲೂಕಿನ ವ್ಯಾಪ್ತಿಯ  ವಿವಿಧ  ಗ್ರಾ.ಪಂ. ಕಚೇರಿ, ಶಾಲಾ ಕಾಲೇಜು, ಸರಕಾರಿ ಕಚೇರಿ  ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ  ಗೀತ ಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next