ಕಲಬುರಗಿ: ಸೇಡಂ ತಾಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ (87) ಲಿಂಗೈಕ್ಯರಾಗಿದ್ದಾರೆ.ಮಾತಾ ಮಾಣಿಕೇಶ್ವರಿ ಅಮ್ಮನವರು ಶನಿವಾರ ರಾತ್ರಿ ಶಿವಾಧೀನರಾಗಿದ್ದು,ಯಾನಾಗುಂದಿ ಬೆಟ್ಟದ ಗುಹೆಯಲ್ಲಿ ಮಾತೆ ಮಾಣಿಕೇಶ್ವರಿ ಅಮ್ಮ ನೆಲೆಸಿದ್ದರು.
ಅನ್ನ ನೀರು ಇಲ್ಲದೇ ಜೀವಿಸಿ ವಿಜ್ಞಾನಕ್ಕೆ ಸವಾಲಾಗಿದ್ದ ಮಾಣಿಕೇಶ್ವರಿ ಅಮ್ಮ, ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಅಮ್ಮ ಕರ್ನಾಟಕ, ಮಹಾರಾಷ್ಟ್ರ ಆಂದ್ರಪ್ರದೇಶದ, ತೆಲಂಗಾಣ ಸೇರಿ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ.
ಶಿವರಾತ್ರಿ: ಮಲಗಿದ ಸ್ಥಿತಿಯಲ್ಲಿಯೇ ಕಳೆದ ಶಿವರಾತ್ರಿಯಂದು ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದ ಅಮ್ಮ ಬಾಲ್ಯದಿಂದಲೇ ವೈರಾಗ್ಯ ತಾಳಿ ಯಾನಾಗುಂದಿ ಬೆಟ್ಟದಲ್ಲಿ ಅನುಷ್ಟಾನಗೈದು ಅಲ್ಲಿನ ಗುಹೆಯಲ್ಲಿ ನೆಲೆಸಿದ್ದ ಅಮ್ಮ ಬೆಳಿಗ್ಗೆ 10 ಗಂಟೆಯಿಂದ ಮಹಾಮಂದಿರದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಎಂಬುದಾಗಿ ಯಾನಾಗುಂದಿ ಮಾಣಿಕೇಶ್ವರಿ ಟ್ರಸ್ಟ ಮೂಲಗಳ ಮಾಹಿತಿ ತಿಳಿಸಿವೆ.