Advertisement
ತಾಲೂಕಿನ ಪಡಸಾವಳಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷದ ಬೇಸಿಗೆ ಕಾಲದಲ್ಲಿ ಆಳಂದ ತಾಲೂಕಿನ 120ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ಈ ಭಾಗದಲ್ಲಿ ಅಂತರ್ಜಲ ಮತ್ತು ಭೂಮಟ್ಟದ ಜಲ ಮೂಲಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಸಲ್ಲಿಸಲಾದ ಸಿರಪುರ ಮಾದರಿ ಅಂತರ್ಜಲ ಅಭಿವೃದ್ಧಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ಪ್ರಾರಂಭಿಸಬೇಕು. ಇದರಿಂದ 371ನೇ (ಜೆ)ಕಲಂ ಲಾಭ ವಿದ್ಯಾರ್ಥಿಗಳಿಗೆ ದೊರೆತಂತಾಗುತ್ತದೆ. ಪಡಸಾವಳಗಿ ಗ್ರಾಮದ ನಾಗರಿಕರಿಂದ ಒಂದು ಲಕ್ಷ ರೂ. ಸಂಗ್ರಹಿಸಿ ನೂತನವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ.
ಸದ್ಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಒಬ್ಬ ವೈದ್ಯಾಧಿಕಾರಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು. ಪಡಸಾವಳಗಿ ಗ್ರಾಮದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುವ ಪ್ರಯುಕ್ತ ಅವರ ಹಣಕಾಸಿನ ವ್ಯವಹಾರಕ್ಕೆ ಒಂದು ಬ್ಯಾಂಕ್ ಪ್ರಾರಂಭಿಸುವುದು ಅವಶ್ಯಕತೆ ಇದೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಆಳಂದ ತಾಲೂಕಿನ ನಿಂಬರ್ಗಾ, ಪಡಸಾವಳಗಿ ಮತ್ತು ಕೊಂತನ ಹಿಪ್ಪರಗಾ ಗ್ರಾಮಗಳಿಗೆ ಈ ಹಿಂದೆ ಕೇಂದ್ರ ಸರ್ಕಾರದ ಯೋಜನೆಯಡಿ ಕೆರೆ ಮಂಜೂರು ಮಾಡಿಸಲಾಗಿತ್ತು. ಕೇಂದ್ರ ಸರ್ಕಾರ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿರುವ ಕಾರಣ ಕೆರೆಗಳ ನಿರ್ಮಾಣ ಅಸಾಧ್ಯವಾಗಿದೆ. ಆದರೆ ರಾಜ್ಯ ಸರ್ಕಾರ ಪಡಸಾವಳಗಿ ಹಾಗೂ ಕೊಂತನ ಹಿಪ್ಪರಗಾ ಕೆರೆಗಳನ್ನು ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದೆ.
ಪಡಸಾವಳಗಿಯಿಂದ ಆಳಂದ ಪಟ್ಟಣಕ್ಕೆ ಹೆಬಳಿ ಮಾರ್ಗವಾಗಿ ಸಂಚರಿಸಿದರೆ ತುಂಬಾ ಸಮೀಪವಾಗುತ್ತದೆ. ಕಾರಣ ರಸ್ತೆ ನಿರ್ಮಿಸಲಾಗುವುದು. ನಿರ್ಗುಡಿ-ಕೆಸರಜವಳಗಾ ರಸ್ತೆ ಸಹ ನಿರ್ಮಿಸಲಾಗುವುದು. ಪಡಸಾವಳಗಿ-ನಿರ್ಗುಡಿ ರಸ್ತೆ ಈಗಾಗಲೇ ನಿರ್ಮಿಸಿದ್ದು, ಈ ಮಾರ್ಗದಲ್ಲಿ ಒಂದು ಸೇತುವೆ ನಿರ್ಮಿಸಲಾಗುವುದು ಎಂದು ಹೇಳಿದರು.
ಪಡಸಾವಳಗಿ ಗ್ರಾಪಂ ಅಧ್ಯಕ್ಷೆ ಭೌರಮ್ಮ ಮಲ್ಲಿನಾಥ ದುಲಂಗೆ, ಉಪಾಧ್ಯಕ್ಷ ಶರಣಪ್ಪ ಮಾರುತಿ ದೇವನೂರೆ, ಮುಖಂಡರಾದ ಶರಣು ಭೂಸನೂರ, ಅಜಗರ ಅಲಿ, ಯುವರಾಜ ಹತ್ತರಕಿ, ರಾಜಶೇಖರ ಪಾಟೀಲ, ಮಲ್ಲಪ್ಪ ಹತ್ತರಕಿ, ಸಲಾಂ ಸಗರಿ, ವೀರಣ್ಣ ಮಂಗಾಣೆ, ಚಂದ್ರಕಾಂತ ಭೂಸನೂರ, ರೇವಣಸಿದ್ದಪ್ಪ ನಾಗೂರೆ, ಬಿ.ಕೆ. ಪಾಟೀಲ, ತಹಶೀಲ್ದಾರ ಬಸವರಾಜ ಬೆಣ್ಣೆಶಿರೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ,
ಆಳಂದ ತಾಲೂಕು ವೈದ್ಯಾಧಿಧಿಕಾರಿ ಅಭಯಕುಮಾರ ಜಿ., ಪಡಸಾವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಧಿಕಾರಿ ದೀಪಕ ಕಾವೇರಿ ಇದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಎರಡು ಎಕರೆ ಭೂಮಿಯನ್ನು ದಾನವಾಗಿ ನೀಡಿದ ದಿವಂಗತ ಶಿವಲಿಂಗಪ್ಪ ಶ್ರೀಮಂತರಾವ ಪಾಟೀಲ ಅವರ ಧರ್ಮಪತ್ನಿ ವೆಂಕಟಮ್ಮ ಅವರನ್ನು ಇದೇ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು.