Advertisement

ನಕ್ಸಲರಿಂದ ರೈಲು ನಿಲ್ದಾಣಕ್ಕೆ ಬೆಂಕಿ; ಇಬ್ಬರು ಅಧಿಕಾರಿಗಳ ಅಪಹರಣ

11:39 AM Dec 20, 2017 | Team Udayavani |

ಮಸೂದನ್‌ :  ನಕ್ಸಲರು ತಮ್ಮ ಅಟ್ಟಹಾಸವನ್ನು ಮತ್ತೆ ಮೆರೆದಿದ್ದು ಮಸೂದನ್‌ ರೈಲು ನಿಲ್ದಾಣದ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿ ನಿಲ್ದಾಣಕ್ಕೆ ಹಾನಿ ಉಂಟುಮಾಡಿರುವ ಘಟನೆ ನಿನ್ನೆ ಮಂಗಳವಾರ ತಡ ರಾತ್ರಿ ನಡೆದಿದೆ.

Advertisement

ಈ ರೀತಿ ತಮ್ಮ ಉಗ್ರ ಕೃತ್ಯವನ್ನು ಮೆರೆದಿರುವ ನಕ್ಸಲರು ಸಹಾಯಕ ಸೇಶನ್‌ ಮಾಸ್ಟರ್‌ ಮತ್ತು ನಿಲ್ದಾಣದ ಇನ್ನೋರ್ವ ಅಧಿಕಾರಿಯನ್ನು ಅಪಹರಿಸಿರುವುದಗಿ ವರದಿಯಾಗಿದೆ. 

ಮಾಧ್ಯಮ ವರದಿಗಳ ಪ್ರಕಾರ ಮಾಲ್ಡಾ  ವಿಭಾಗೀಯ ರೈಲ್ವೇ ಅಧಿಕಾರಿಗೆ ಅಪಹೃತ ಸಹಾಯಕ ಸ್ಟೇಶನ್‌ ಮಾಸ್ಟರ್‌ ರಿಂದ ದೂರವಾಣಿ ಕರೆ ಬಂದಿದ್ದು ಅವರು ನೆರವಿಗೆ ಮೊರೆ ಇಟ್ಟಿದ್ದಾರೆ,

ಮಸೂದನ್‌ನಲ್ಲಿ ರೈಲು ಓಡಾಟ ನಡೆದರೆ ಅಪಹೃತ ಅಧಿಕಾರಿಯನ್ನು ತಾವು ಕೊಲ್ಲುವುದಾಗಿ ನಕ್ಸಲರು ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರು ಬೇರೆ ಮಾರ್ಗವಾಗಿ ಪ್ರಯಾಣ ಕೈಗೊಳ್ಳುವಂತೆ ರೈಲ್ವೇ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next