ಹೊಸನಗರ: ಕರಿಮನೆ ಗ್ರಾಪಂ ವ್ಯಾಪ್ತಿಯ ಹೊಸಬೀಡು ಗ್ರಾಮದಲ್ಲಿ ಸುಮಾರು 300 ವರ್ಷದಷ್ಟು ಹಳೆಯದಾದ ಒಕೈ ವೀರಮಾಸ್ತಿಗಲ್ಲು ಪತ್ತೆಯಾಗಿದ್ದು ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ.
ಹೊಸಬೀಡು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇಗುಲದಿಂದ 500 ಮೀಟರ್ ದೂರದ ಗದ್ದೆ ಬೈಲಿನಲ್ಲಿ ಈ ಪುರಾತನ ಕಲ್ಲನ್ನು ಗ್ರಾಮಸ್ಥರೇ ಪತ್ತೆ ಮಾಡಿದ್ದಾರೆ.
ಈ ಬಗ್ಗೆ ರಾಜ್ಯ ಪುರಾತತ್ವ ಇಲಾಖೆಯ ಆರ್. ಶೇಜೇಶ್ವರ್ ಅವರಿಗೆ ಫೋಟೋ ಮಾಹಿತಿ ಕಳುಹಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪುರಾತತ್ವ ಇಲಾಖೆ ಅಧಿ ಕಾರಿ ಶೇಜೇಶ್ವರ ಪ್ರಕಾರ “ಇದನ್ನು ಒಕೈ ವೀರಮಾಸ್ತಿಗಲ್ಲು ಎಂದು ಕರೆಯಲಾಗುತ್ತದೆ.
ಕೆಳದಿ ಅರಸರ ಕಾಲದ ಪಳೆಯುಳಿಕೆಯಾಗಿದ್ದು, ಸತಿಸಹಗಮನ ಪದ್ಧತಿಯ ಧೊÂàತಕವಾಗಿದೆ. ಒಂದು ಕೈಯನ್ನು ಮೇಲಕ್ಕೆತ್ತಿರುವ ಕೆತ್ತನೆ, ಅಲ್ಲದೆ ಕಲ್ಲಿನಲ್ಲಿರುವ ಮಹಿಳೆಯ ತಲೆಮೇಲೆ ಬಾಸಿಂಗ ಸೇರಿದಂತೆ ಅಪರೂಪದ ಕೆತ್ತನೆಗಳಿವೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕು’ ಎಂದು ತಿಳಿಸಿದ್ದಾರೆ. ಮಾಸ್ತಿಗಲ್ಲು ಪತ್ತೆ ಮಾಡಿದ ಕರಿಮನೆ ಗ್ರಾಪಂ ಅಧ್ಯಕ್ಷ ರಮೇಶ ಹಲಸಿನಹಳ್ಳಿ, ಸಿ.ಕೆ.ಸುಧಾಕರ್, ಎಚ್.ಎಸ್.ಗುರುಮೂರ್ತಿ, ಕಿರಣ್, ಹೊಸಬೀಡು ಗ್ರಾಮದ ಬಗ್ಗೆ ಸಾಕಷ್ಟು ಐತಿಹ್ಯವಿದೆ ಎಂದು ಹಿರಿಯರು ಹೇಳುತ್ತಾರೆ.
ಅಲ್ಲದೆ ಈ ಗ್ರಾಮದ ಅಲ್ಲಲ್ಲಿ ಹಳೆಯ ಬಾವಿ, ಕಲ್ಲುಕಂಬಗಳು ಅಲ್ಲಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಲ್ಲದೆ ಈಗ ಪತ್ತೆಯಾಗಿರುವ ಕಲ್ಲಿನಲ್ಲಿನಲ್ಲಿ ಕೆತ್ತನೆ ಇರುವುದು ಮಾತ್ರ ಗೊತ್ತು. ಇದರ ಪ್ರಾಮುಖ್ಯತೆ ಬಗ್ಗೆ ನಮಗೆ ಅರಿವಿಲ್ಲ. ಪುರಾತತ್ವ ಅಧಿ ಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರೆ ಇತಿಹಾಸ ಮಹತ್ವ ಸಾರುವ ಅನೇಕ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.