ಶಿರಸಿ: ರಾಜ್ಯದ ಹಿರಿಯ ಪತ್ರಕರ್ತ, ಅಂಕಣಕಾರ ರವೀಂದ್ರ ಭಟ್ಟ ಅವರಿಗೆ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ಟ್ರಸ್ಟ್ ನಿಂದ ನೀಡಲಾಗುವ ಮಾಸ್ತಿ ಪ್ರಶಸ್ತಿ ಪ್ರಕಟವಾಗಿದೆ.
ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಕಾಲದಿಂದ ಪತ್ರಿಕೋದ್ಯಮದ ವಿವಿಧ ಸ್ಥರದಲ್ಲಿ ಕೆಲಸ ಮಾಡಿದ ರವೀಂದ್ರ ಭಟ್ಟ ಅವರು ಪ್ರಸ್ತುತ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯ ಮಾಡುತ್ತಿದ್ದಾರೆ. ಹತ್ತಕ್ಕೂ ಅಧಿಕ. ಕೃತಿಗಳನ್ನು ಪ್ರಕಟಿಸಿದ ರವೀಂದ್ರ ಭಟ್ಟ ಅವರು ಕಲೆ, ಪರಿಸರ, ಗ್ರಾಮೀಣಾಭಿವೃದ್ಧಿ, ರಾಜಕೀಯ ವಿಶ್ಲೇಷಣೆ ಸೇರಿದಂತೆ ಅನೇಕ ವಿಷಯದಲ್ಲಿ ಪಳಗಿದ ಬರಹ ಪ್ರಸ್ತುತಗೊಳಿಸುತ್ತಿದ್ದಾರೆ.
ಪ್ರಶಸ್ತಿಯು ರವೀಂದ್ರ ಅವರ ಅಂಕಣ ಬರಹಗಳಿಗೆ ಲಭಿಸಿದ್ದು, ಜೂ.18 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಆಗಲಿದೆ. ಪ್ರಶಸ್ತಿಯು ಫಲಕ ಸಹಿತ 25 ಸಾವಿರ ರೂ. ನಗದು ಒಳಗೊಂಡಿದೆ.
ರವೀಂದ್ರ ಭಟ್ಟ ಅವರು ಮೂಲತಃ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನವರು.
Related Articles
ಪ್ರಶಸ್ತಿ ಪುರಸ್ಕೃತರಾಗಲಿರುವ ರವೀಂದ್ರ ಭಟ್ಟ ಅವರನ್ನು ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ, ವಿಶ್ವಶಾಂತಿ ಸೇವಾ ಟ್ರಸ್ಟ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ, ಭಾಗವತ, ಅನಂತ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.