Advertisement

Masterplan 2031; ಇನ್ನೆಂಟು ವರ್ಷದಲ್ಲಿ ಅಯೋಧ್ಯೆಗೆ ಹೊಸ ನೋಟ

01:03 AM Dec 31, 2023 | Team Udayavani |

ಹೊಸದಿಲ್ಲಿ: ಭವ್ಯ ರಾಮಮಂದಿರ ತಲೆ ಎತ್ತುತ್ತಿರುವ ಹೊತ್ತಲ್ಲೇ ಅಯೋಧ್ಯಾ ನಗರಿಯು ಹೊಸ ಅಭಿವೃದ್ಧಿಯ ಸೂರ್ಯೋದಯವನ್ನು ಕಾಣಲಿದ್ದು, ಮುಂದಿನ ವರ್ಷಗಳಲ್ಲಿ ಇಡೀ ನಗರ ನವರೂಪ ದೊಂದಿಗೆ ಕಂಗೊಳಿಸಲಿದೆ. ಅದಕ್ಕಾಗಿ “ಮಾಸ್ಟರ್‌ ಪ್ಲ್ರಾನ್‌ 2031′ ಸಿದ್ಧಗೊಂಡಿದ್ದು, ಈಗಾಗಲೇ ಕಾಮಗಾರಿಗಳು ಆರಂಭವಾಗಿವೆ.

Advertisement

ಮುಂದಿನ ತಿಂಗಳಿಂದಲೇ ಅಂದರೆ ರಾಮಮಂದಿರ ಲೋಕಾರ್ಪಣೆಗೊಂಡ ಬಳಿಕ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ನಿತ್ಯ 3 ಲಕ್ಷಕ್ಕೂ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಭಕ್ತರ ಸಾಗರವೇ ರಾಮಜನ್ಮ ಭೂಮಿಗೆ ಹರಿದುಬರಲಿರುವ ಹಿನ್ನೆಲೆಯಲ್ಲಿ ಅಗತ್ಯ ಸೌಲಭ್ಯ, ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪವಿತ್ರ ನಗರವನ್ನು ಮೇಲ್ದರ್ಜೆಗೇರಿಸಲು ತೀರ್ಮಾ ನಿಸಲಾಗಿದೆ. ಅದರಂತೆ, ಇನ್ನು ಎಂಟು ವರ್ಷಗಳಲ್ಲ ಬರೋಬ್ಬರಿ 85 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಯೋಧ್ಯೆಯನ್ನು ಮರುನಿರ್ಮಾಣ ಮಾಡುವುದು ಸರಕಾರದ ಗುರಿಯಾಗಿದೆ.

ಏನೇನು ಯೋಜನೆ?

1,200 ಎಕ್ರೆ ವ್ಯಾಪ್ತಿಯಲ್ಲಿ 2,200 ಕೋಟಿ ರೂ. ವೆಚ್ಚದಲ್ಲಿ ಮುಂದಿನ 5 ವರ್ಷ ಗಳಲ್ಲಿ ಹೊಸ ಟೌನ್‌ಶಿಪ್‌ ನಿರ್ಮಾಣವಾಗಲಿದೆ. ಗ್ರೀನ್‌ಫೀಲ್ಡ್‌ ಟೌನ್‌ಶಿಪ್‌ಗೆ ಪ್ರಧಾನಿ ಮೋದಿಯವರು ಶನಿವಾರ ಶಿಲಾನ್ಯಾಸ ನೆರವೇರಿಸಿದ್ದಾರೆ. ಆಧ್ಯಾತ್ಮಿಕತೆ, ಸಾಂಸ್ಕೃತಿಕ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯನ್ನು ಜಾಗತಿಕ ಪ್ರವಾಸೋದ್ಯಮದ ಹಬ್‌ ಆಗಿ ಪರಿವರ್ತಿಸುವುದು ಇದರ ಮುಖ್ಯ ಉದ್ದೇಶ. ಸರಕಾರಿ ಅತಿಥಿಗೃಹಗಳು, ಹೊಟೇಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ ಅಯೋಧ್ಯೆಗೆ ಬರುವ ಪ್ರವಾಸಿಗರು, ಭಕ್ತರಿಗಾಗಿ ಎಲ್ಲ ಸೌಕರ್ಯಗಳೂ ಗ್ರೀನ್‌ಫೀಲ್ಡ್‌ ಟೌನ್‌ಶಿಪ್‌ನಲ್ಲಿ ಇರಲಿವೆ.

ಮಾಸ್ಟರ್‌ಪ್ಲ್ರಾನ್‌ 2031 : 85,000 ಕೋಟಿ ರೂ. 10 ವರ್ಷ ಗಳಲ್ಲಿ ಒಟ್ಟು ಹೂಡಿಕೆ

Advertisement

1,200ಎಕ್ರೆ- ವ್ಯಾಪ್ತಿಯ ಹೊಸ ಟೌನ್‌ಶಿಪ್‌

2,200 ಕೋಟಿ ರೂ.- ಟೌನ್‌ ಶಿಪ್‌ಗೆ ತಗಲುವ ವೆಚ್ಚ

10 ಕೋಟಿಯ ಉಜ್ವಲ ಫ‌ಲಾನುಭವಿ ಮನೆಯಲ್ಲಿ ಟೀ ಕುಡಿದ ಪ್ರಧಾನಿ
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರು ಉಜ್ವಲ ಯೋಜನೆ ಫ‌ಲಾನುಭವಿಯ 10 ಕೋಟಿ ಫ‌ಲಾನುಭವಿ ಮೀರಾ ಮನೆಗೆ ತೆರಳಿ ಚಹಾ ಕುಡಿದಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಚಿಕ್ಕ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದರು. ಮೀರಾ ಅವರ ಮನೆಗೆ ಭೇಟಿ ನೀಡಿದ ದೇಶದ ಪ್ರಧಾನಿಯೇ ತಮ್ಮ ಮನೆಗೆ ಬಂದಿದ್ದನು ಕಂಡು ಇಡೀ ಕುಟುಂಬವೇ ಹರ್ಷದಿಂದ ತೇಲುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರ ಮೀರಾ ಅವರು ದೇಶದ ಪ್ರಧಾನಿ ನಮ್ಮ ಮನೆಗೆ ಆಗಮಿಸಿದ್ದಾರೆ ಎಂಬ ವಿಚಾರವನ್ನು ನಂಬಲು ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಅವರ ಭೇಟಿಯ ಕುರಿತು 24 ಗಂಟೆಗಳ ಮೊದಲಷ್ಟೇ ಮೀರಾ ಅವರಿಗೆ ವಿಷಯ ತಿಳಿಸಲಾಗಿತ್ತು. “ನಿಮ್ಮ ಮನೆಗೆ ಪ್ರಮುಖ ರಾಜಕಾರಣಿ ಒಬ್ಬರು ಭೇಟಿ ನೀಡಲಿದ್ದಾರೆ’ ಎಂದು ಜಿಲ್ಲಾಡಳಿತದ ವತಿಯಿಂದ ಮಾಹಿತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next