Advertisement
ಬುಧವಾರ ನಡೆದ 6ನೇ ಶ್ರೇಯಾಂಕದ ಕೆ. ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು 21 18, 21 17 ನೇರ ಗೇಮ್‌ಗಳಲ್ಲಿ ಸುಲಭವಾಗಿ ಮಣಿಸಿ ಮುನ್ನಡೆದರು. ಮಾಜಿ ನಂಬರ್ ವನ್ ಆಟಗಾರರಾಗಿರುವ ಶ್ರೀಕಾಂತ್ ಅವರು ಕೇವಲ 37 ನಿಮಿಷಗಳಲ್ಲಿ ಈ ಗೆಲುವು ಸಂಪಾದಿಸಿದರು. ದ್ವಿತೀಯ ಸುತ್ತಿನಲ್ಲಿ ಶ್ರೀಕಾಂತ್ ಜಪಾನಿನ ಕಾಂತ ಸುನೆಯಾಮ ಅವರ ಸವಾಲನ್ನು ಎದುರಿಸಲಿದ್ದಾರೆ.
ಸ್ಥಳೀಯ ಫೇವರಿಟ್ ಕಿಮ್ ಡಾಂಘನ್ ಅವರೊಂದಿಗೆ ಕಠಿನ ಹೋರಾಟದ ಬಳಿಕ ಸೌರಭ್ 21 13, 12 21, 13 21ರ ಅಂತರದಲ್ಲಿ ಸೋಲೊಪ್ಪಿಕೊಂಡು ಕೂಟದಿಂದ ನಿರ್ಗಮಿಸಿದರು. ಮೊದಲ ಗೇಮ್ ಗೆದ್ದರೂ ಮುಂದಿನೆರಡು ಗೇಮ್‌ಗಳಲ್ಲಿ ಡಾಂಘನ್ ವಿರುದ್ಧ ಹಿಡಿತ ಸಾಧಿಸಲು ಸೌರಭ್ ಅವರಿಗೆ ಸಾಧ್ಯವಾಗಲಿಲ್ಲ.